Advertisement

ಜೀವದ ಬಗ್ಗೆ ನಿರ್ಲಕ್ಷ್ಯ ಬೇಡ

05:50 PM May 08, 2020 | Naveen |

ಗುರುಮಠಕಲ್‌: ಕೋವಿಡ್ ನಮ್ಮ ಭಾಗಕ್ಕೆ ಬಂದಿಲ್ಲ ಎಂಬ ನಿರ್ಲಕ್ಷéತನದಿಂದ ಹಸಿರು ವಲಯದಲ್ಲಿದ್ದೇವೆ ಎಂಬ ಅತಿಯಾದ ನಂಬಿಕೆಯಿಂದಾಗಿ ಅನಾವಶ್ಯಕ ತಿರುಗಾಟ, ಗುಂಪು ಗೂಡುವುದು ಹಾಗೂ ಸರ್ಕಾರದ ಮುನ್ನೆಚ್ಚರಿಕಾ ನಿರ್ದೇಶನ ಪಾಲಿಸದಿರುವುದರಿಂದ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ ಎಂದು ಡಾ| ಕಿಶನರಾವ್‌ ಕುಲಕರ್ಣಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಚಂಡರಕಿ ಗ್ರಾಮದಲ್ಲಿ ಕುಲಕರ್ಣಿ ಕುಟುಂಬದ ವತಿಯಿಂದ ಆಯೋಜಿಸಿದ್ದ ಮಾಸ್ಕ್ ವಿತರಣೆ, ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯಂದರೆ ಕೇವಲ ಹಣ ನೀಡುವುದು ಮಾತ್ರವಲ್ಲ, ನಾವೆಲ್ಲರೂ ಸರ್ಕಾರದ ನಿರ್ದೇಶನ ಪಾಲಿಸುವ ಮೂಲಕ ಮನೆ, ಗ್ರಾಮ ಹಾಗೂ ರಾಷ್ಟ್ರವನ್ನು ಕೊರೊನಾ ಪಿಡುಗಿನಿಂದ ರಕ್ಷಿಸಿಕೊಳ್ಳುವುದು ನಿಜವಾದ ಸೇವೆ ಎಂದರು.

ಪಿಎಸ್‌ಐ ಹಣಮಂತ ಮಾತನಾಡಿ, ಡಾ.ಕಿಷನರಾವ್‌ ಅವರ ಕಳಕಳಿ ಎಲ್ಲರಲ್ಲೂ ಮೂಡಬೇಕಿದೆ ಎಂದರು. ಪ್ರಧಾನಿ ನಿಧಿಗೆ ರೂ.10 ಲಕ್ಷಗಳನ್ನು ದೇಣಿಗೆ ನೀಡಿದ ಡಾ. ಕಿಶನರಾವ್‌ ಕುಲಕಣಿಯವರ ಕುಟುಂಬವನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಕಿಶನರಾವ್‌ ಕುಲಕರ್ಣಿ, ವಿಜಯಲಕ್ಷ್ಮೀ ಕುಲಕರ್ಣಿ, ಡಾ.ಅರುಣ  ಕುಲಕರ್ಣಿ, ಬಸವರಾಜಪ್ಪ ದಳಪತಿ, ರಾಜಾ ರಮೇಶ ಗೌಡ್‌, ಪಿಡಿಒ ಭೀಮರಾಯ, ತಾ.ಪಂ ಸದಸ್ಯ ನಾಗೇಂದ್ರಪ್ಪ, ಗ್ರಾ.ಪಂ ಸದಸ್ಯರು ಹಾಗೂ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next