ಮುಂಬಯಿ: ಗುರುಕುಲ ಮುಂಬಯಿ ಇದರ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಮತ್ತು ಕೃತಿ ಬಿಡುಗಡೆ ಸಮಾರಂಭ ಹಾಗೂ ಸಮ್ಮಾನ ಸಮಾರಂಭವು ಫೆ. 17ರಂದು ಸಂಜೆ ಮೀರಾರೋಡ್ ಪೂರ್ವದ ಶಾಂತಿನಗರ ಸೆಕ್ಟರ್ 2ರಲ್ಲಿರುವ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಸಾಧಕರಾದ ಲೇಖಕಿ ಲತಾ ಸಂತೋಷ್ ಶೆಟ್ಟಿ ಇವರಿಗೆ “ಸಾಹಿತ್ಯ ಸೌರಭ’, ಪೊವಾಯಿ ಪರಿಸರದ ರಾಜಕೀಯ ಮುಖಂಡ ಸುಲೇಮಾನ್ ಕುಳವೂರು ಅವರಿಗೆ “ಸಮಾಜ ಸೇವಾ ರತ್ನ’, ನಿರ್ದೇಶಕ ನಟ ರಹೀಮ್ ಸಚ್ಚೇರಿಪೇಟೆ ಅವರಿಗೆ “ಕಲಾ ಕೇಸರಿ’, ರಂಗಭೂಮಿ ಕಲಾವಿದ ಉಮೇಶ್ ಹೆಗ್ಡೆ ಕಡ್ತಲ ಅವರಿಗೆ “ಅಭಿನಯ ಚಕ್ರವರ್ತಿ’, ರಂಗಕಲಾವಿದ ಕಿಶೋರ್ ಶೆಟ್ಟಿ ಪಿಲಾರ್ ಇವರಿಗೆ “ಕಲಾರತ್ನ’ ಬಿರುದು ಪ್ರದಾನಿಸಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಗುರುಕುಲ ಸ್ಥಾಪಕ ನಿರ್ದೇಶಕ ನಾಗರಾಜ ಗುರುಪುರ ಅವರಿಗೆ ವಿಶೇಷ ಗೌರವ ನೀಡಿ ಸತ್ಕರಿಸಲಾಯಿತು. ಕರಾಟೆ ಪಟುಗಳಾದ ಮಾನ್ವಿತ್ ಮತ್ತು ಪ್ರಜ್ವಲ್ ಅಂಚನ್ ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಸಮಾರಂಭದಲ್ಲಿ ಕೃತಿಕಾರ ಶಿವ ಶೆಟ್ಟಿ ಪಂಜಮೊಗಪಾಡಿ ಅವರ “ಸ್ಮಶಾನ ಮೌನ’ಕಾದಂಬರಿ ಲೋಕಾರ್ಪಣೆಗೊಂಡಿತು.
ವೇದಿಕೆಯಲ್ಲಿ ಬಹುಭಾಷಾ ಕವಿ ಮೊಹಮ್ಮದ್ ಬಡೂxರು, ಗಿರೀಶ್ ಶೆಟ್ಟಿ ತೆಳ್ಳಾರ್, ಸುರೇಶ್ ಶೆಟ್ಟಿ ಗಂಧರ್ವ, ನ್ಯಾಯವಾದಿ ಆರ್.ಜಿ. ಶೆಟ್ಟಿ, ರಮೇಶ್ ಡಿ. ಕೈಯಾರು, ವಿನೋದಾ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ಪ್ರಭಾಕರ ಶೆಟ್ಟಿ, ನರೇಶ್ ಪೂಜಾರಿ, ಸಂತಪ್ ಶೆಟ್ಟಿ ಪಂಜದಗುತ್ತು, ರಮೇಶ್ ಶೆಟ್ಟಿ ಸಿದ್ಧಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಗುರುಕುಲದ ಅಧ್ಯಕ್ಷ ಅಜಿತ್ ಶೆಟ್ಟಿ ಬೆಳ್ಮಣ್ ಸ್ವಾಗತಿಸಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸ್ಥಾಪಕ ನಿರ್ದೇಶಕ ನಾಗರಾಜ ಗುರುಪುರ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹಾಸ್ಯ ಪ್ರಹಸನ, ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ರಮೇಶ್ ಅಮೀನ್