Advertisement

ನಿಮಗೆ ನೀವೇ ಗುರುವಾಗಿ!

03:45 AM Feb 07, 2017 | |

ಜೀವನದಲ್ಲಿ ಯಶಸ್ಸು ಪಡೆಯಲು ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎನ್ನುತ್ತಾರೆ. ಗುರಿಗಳನ್ನೇನೋ ನಾವು ಇಟ್ಟುಕೊಂಡುಬಿಡುತ್ತೇವೆ. ಆದರೆ ಆ ಗುರಿಯನ್ನು ತಲುಪಲು ನಾವು ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಒಂದು ವೇಳೆ ಹಿಂದೆ ಗುರುವಿಲ್ಲದಿದ್ದರೂ ನಮಗೆ ನಾವೇ ಗುರುಗಳಾಗಬೇಕು. ಅದಕ್ಕಾಗಿ 6 ಸುಲಭೋಪಾಯಗಳು ಇಲ್ಲಿವೆ.

Advertisement

1. ಹೆಚ್ಚು ಹೆಚ್ಚು ಓದಿರಿ
ಆನ್‌ಲೈನ್‌ನಲ್ಲಿ ತಮ್ಮ ತಮ್ಮ ಕಂಪ್ಯೂಟರ್‌, ಸ್ಮಾರ್ಟ್‌ಫೋನುಗಳ ಸ್ಕ್ರೀನುಗಳ ಮೇಲೆ ಇ- ಪುಸ್ತಕಗಳು, ಇ- ಮ್ಯಾಗಝೀನುಗಳನ್ನು ಓದುವ ಪರಿಪಾಠ ಯುವಪೀಳಿಗೆಯ ನಡುವೆ ಹೆಚ್ಚುತ್ತಿದೆ. ಓದುವುದೇನೋ ಒಳ್ಳೆಯ ಹವ್ಯಾಸವಾದರೂ ಇಲ್ಲೊಂದು ಸಮಸ್ಯೆಯಿದೆ. ಆನ್‌ಲೈನಿನಲ್ಲಿ ಓದುವಾಗ ಅಕ್ಕ ಪಕ್ಕ ವಿವಿಧ ಬರಹಗಳಿಗೆ ಕುರಿತ ಲಿಂಕುಗಳು ಗೋಚರಿಸುತ್ತಿರುತ್ತವೆ. ಒಂದು ಅಂಕಣ ನಿಮ್ಮ ಗಮನ ಸೆಳೆಯಲು ವಿಫ‌ಲವಾದರೂ ಒಂದಲ್ಲ ಒಂದು ಲಿಂಕು ನಿಮ್ಮ ಗಮನ ಸೆಳೆದೇ ಬಿಡುತ್ತದೆ. ನೀವು ಆ ಲಿಂಕನ್ನು ಕ್ಲಿಕ್ಕಿಸುತ್ತೀರಿ ಆ ಅಂಕಣವನ್ನು ಓದಲು ಶುರು ಮಾಡುವಷ್ಟರಲ್ಲಿ ಅದಕ್ಕಿಂತ ಹೆಚ್ಚು ಆಕರ್ಷಕವಾದ ಮತ್ತೂಂದು ಕೊಂಡಿ ನಿಮ್ಮ ಗಮನ ಸೆಳೆಯುತ್ತದೆ. ಹೀಗಾದಾಗ, ಯಾವ ವಿಚಾರವನ್ನೂ ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಂಗಡಿಯಿಂದ ಪುಸ್ತಕ ಕೊಂಡು ನಿಶ್ಚಿಂತೆಯಿಂದ ಓದಿ ಮುಗಿಸುವುದೇ ಒಳ್ಳೆಯ ವಿಧಾನ.

2.ನಿಮಗಾಗಿ ಸಮಯ ಮೀಸಲಿಡಿ
ಧಾವಂತದ ಬದುಕಿನಲ್ಲಿ ಕಚೇರಿ ಮತ್ತು ಮನೆ ಎರಡನ್ನೂ ಬ್ಯಾಲೆನ್ಸ್‌ ಮಾಡುವುದರಲ್ಲಿಯೇ ಬದುಕು ಮುಗಿದು ಹೋಗುತ್ತಿದೆ. ಈ ಫಾಸ್ಟ್‌ಫ‌ುಡ್‌ ಪ್ರಪಂಚದಲ್ಲಿ ನಮಗೆ ಬೇಕಾದವರೆಲ್ಲರಿಗೂ ಸಮಯ ಮೀಸಲಿಡುತ್ತೇವೆ, ಎಲ್ಲರನ್ನೂ ಸಂತಸವಾಗಿಡಲು ಪ್ರಯತ್ನಿಸುತ್ತೇವೆ. ಈ ಪ್ರಯತ್ನದಲ್ಲಿ ಒಬ್ಬರನ್ನು ಮಾತ್ರವೇ ಸಂತಸವಾಗಿಡಲು ಸೋಲುತ್ತಿದ್ದೇವೆ. ಅದು ಬೇರಾರೂ ಅಲ್ಲ, ನಾವೇ. ನಾವು ನಮಗಾಗಿಯೂ ಸಮಯ ಮೀಸಲಿಡಬೇಕು. ಅದು ಇಂದಿನ ಒತ್ತಡದ ಬದುಕಿನಲ್ಲಿ ಅವಶ್ಯ ಕೂಡ. ಆಧುನಿಕ ಜಗತ್ತಿನ ಮಾನಸಿಕ ಸಮಸ್ಯೆಗಳಿಂದ ದೂರವಾಗಲು ಮನಃಶಾಸ್ತ್ರಜ್ಞರ ತನಕ ಹೋಗುವವರೆಗೆ ಕಾಯುವುದಕ್ಕಿಂತ ನಮಗೆ ನಾವೇ ಈ ರೀತಿ ಥೆರಪಿ ಕೊಟ್ಟುಕೊಳ್ಳಬಹುದು.

3.ಆರೋಗ್ಯಕರ ಬದುಕು ಬದುಕಿ
ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಅತೀವ ಇಚ್ಚಾಶಕ್ತಿ ಬೇಕು. ಆದರೆ ಒಂದೊಮ್ಮೆ ರೂಢಿಸಿಕೊಂಡಲ್ಲಿ ಅದರ ಸಕಾರಾತ್ಮಕ ಪ್ರಭಾವವನ್ನು ನಾವು ನಮ್ಮ ಬದುಕಿನಲ್ಲಿ ಕಾಣಬಹುದು.
 
4.ವರ್ತಮಾನದಲ್ಲಿರಿ
ಭೂತಕಾಲದ ಕುರಿತು ನೆಮ್ಮದಿ ಮತ್ತು ಭವಿಷ್ಯತ್ಕಾಕಾಲದ ಕುರಿತು ಆಶಾವಾದವಿರಲಿ. ಆದರೆ ನಮ್ಮ ಬದುಕು ಮಾತ್ರ ಸದಾ ವರ್ತಮಾನದಲ್ಲಿರಲಿ. ನೆನ್ನೆ ಮತ್ತು ನಾಳೆಗಳ ದ್ವಂದ್ವಗಳ ನಡುವಲ್ಲಿ ಇಂದಿನದನ್ನು ಮರೆಯಬಾರದು. ಇಂದು ಯಾವತ್ತೂ ನಮ್ಮದು, ಅದು ಹೊಸದು. ಅದಕ್ಕೇ ಅದನ್ನು ಪ್ರಸೆಂಟ್‌(ಉಡುಗೊರೆ) ಎಂದು ಕರೆಯುವರು.

5.ಸಂತಸವನ್ನು ಆರಿಸಿಕೊಳ್ಳಿ
ಸಿಹಿ ಮತ್ತು ಕಹಿ ತಿನಿಸುಗಳೆರಡನ್ನು ನಿಮ್ಮ ಮುಂದಿಟ್ಟರೆ ನೀವು ಯಾವುದನ್ನು ಆಯ್ದುಕೊಳ್ಳುವಿರಿ? ಸಹಜವಾಗಿ ಸಿಹಿಯನ್ನೇ. ಅಂತೆಯೇ ಜೀವನದಲ್ಲಿಯೂ ನಾವು ಸಂತೋಷವಾಗಿರುವ ಯಾವುದೇ ಅವಕಾಶ ಸಿಕ್ಕರೂ ತಪ್ಪಿಸಿಕೊಳ್ಳಬಾರದು. ದುಃಖ ಪಡಲು ನೂರಾರು ಕಾರಣಗಳಿದ್ದಿರಬಹುದು, ಆದರೆ ಸಂತಸಕ್ಕೆ ಒಂದು ಕಾರಣ ಸಿಕ್ಕರೂ ಅನುಭವಿಸಿಬಿಡಬೇಕು. ಸಂತಸ ಪಡಲು ದೊಡ್ಡ ದೊಡ್ಡ ಸಂಗತಿಗಳೇ ಆಗಬೇಕಿಲ್ಲ. ಚಿಕ್ಕಪುಟ್ಟ ಸಂಗತಿಗಳಲ್ಲೇ ಸಂತಸವಿರುವುದು.

Advertisement

6.ಕೊಳ್ಳುಬಾಕತನಕ್ಕೆ ಕೈ ಮುಗಿಯಿರಿ
ಬೇಕು ಬೇಕು ಎನ್ನುವ ಮನಸ್ಥಿತಿಯಿಂದ ಕಿಸೆಗೂ, ಆರೋಗ್ಯಕ್ಕೂ ಹಾನಿ. ನಮ್ಮ ದೈನಂದಿನ ಬದುಕಿನಲ್ಲಿ ಬಿಲ್‌ಬೋರ್ಡುಗಳು, ಟಿ.ವಿ ರೇಡಿಯೊ ಜಾಹಿರಾತುಗಳು, ಆನ್‌ಲೈನ್‌ ಮಾರ್ಕೆಟಿಂಗ್‌ ತಂತ್ರಗಳು ಇವೆಲ್ಲವೂ ಮನುಷ್ಯರಲ್ಲಿ ಆಮಿಷವನ್ನು ತುಂಬುವ ಕೆಲಸ ಮಾಡುತ್ತಿವೆ. ಅಗತ್ಯ ಬೀಳದಿದ್ದರೂ ಜನರು ಉತ್ಪನ್ನಗಳನ್ನು ಕೊಂಡುಕೊಳ್ಳುವಂತೆ ಮಾಡುವುದೇ ಅವುಗಳ ಗುರಿ. ಆದ್ದರಿಂದ ಶಾಪಿಂಗ್‌ ಮಾಡುವಾಗ ಎಚ್ಚರಿಕೆ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next