ಮೈಸೂರು: ಗುರು ಪೂರ್ಣಿಮೆ ಅಂಗವಾಗಿನಗರದ ವಿವಿಧೆಡೆ ಹಲವು ಸಂಘ ಸಂಸ್ಥೆಗಳಿಂದಗುರು ಸ್ಮರಣೆ ನಡೆಯಿತು.ಗುರು ಪೂರ್ಣಿಮೆ ಹಿನ್ನೆಲೆ ಶನಿವಾರವಿವಿಧ ಸಂಘ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರೆ, ಗುರು ಪರಂಪರೆ ಇರುವದೇವಸ್ಥಾನ ಮತ್ತು ಮಠ ಮಾನ್ಯಗಳಲ್ಲಿ ವಿಶೇಷಪೂಜಾ ಕೈಂಕರ್ಯ ಜರುಗಿತು.
ಹಳೆ ಮತ್ತುಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಶುಭಾಶಯ ಕೋರಿಆಶೀರ್ವಾದ ಪಡೆದರು.ನಗರದ ಚಾಮುಂಡಿಪುರಂ ಅಪೂರ್ವಹೋಟೆಲ್ ಸಭಾಂಗಣದಲ್ಲಿ ಅಪೂರ್ವ ಸ್ನೇಹಬಳಗವು ಶನಿವಾರ ಗುರು ಪೂರ್ಣಿಮೆಯಅಂಗವಾಗಿ ವಿವಿಧ ಕ್ಷೇತ್ರದ ಗುರುಗಳಿಗೆಗುರುವಂದನಾ ಕಾರ್ಯಕ್ರಮ ಆಯೋಜಿಸಿತು.
ವಿವಿಧ ಕ್ಷೇತ್ರದ ಗುರುಗಳಾದ ಡಾ.ರಾಮಮೂರ್ತಿರಾವ್ (ಭರತ್ಯನಾಟ್ಯ ಶಿಕ್ಷಕ),ಡಾ. ಶೆಲ್ವಪಿಳ್ಳೆ ಅಯ್ಯಂಗಾರ್ (ಇತಿಹಾಸತಜ್ಞ), ಡಾ. ಮುರಳಿ (ಪ್ರಾಧ್ಯಾಪಕರು), ಡಾ.ರಾಘವೇಂದ್ರ ಪೈ (ಯೋಗ ಶಿಕ್ಷಕ), ವಿದ್ವಾನ್‌ನರಸಿಂಹನ್ (ವೇದ ಶಿಕ್ಷಕ) ಹಾಗೂಮಾಲಾಶ್ರೀ ಜೆ. ಜಯಸಿಂಹ (ಸಂಗೀತ ಶಿಕ್ಷಕಿ)ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ,ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆಸದುಪಯೋಗ ಪಡಿಸಿಕೊಳ್ಳಬೇಕಾದರೆಗುರುವಿನ ಅನುಗ್ರಹ ಬೇಕು ಎಂದರು.ಸಮಾಜ ಸೇವಕ ಕೆ. ರಘುರಾಂ, ಪಾಲಿಕೆಸದಸ್ಯರಾದ ಮ.ವಿ. ರಾಮ್‌ಪ್ರಸಾದ್, ಎಂ.ಸಿ.ರಮೇಶ್, ಜಗದೀಶ್, ಎಂಡಿಎ ಸದಸ್ಯನವೀನ್ ಕುಮಾರ್, ಇಳೈ ಆಳ್ವಾರ್ ಸ್ವಾಮೀಜಿ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹೋಟೆಲ್‌ಮಾಲಿಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥಮಹೇಶ್ ಶೆಣೈ, ಅಪೂರ್ವ ಸ್ನೇಹ ಬಳಗದಅಧ್ಯಕ್ಷ ಅಪೂರ್ವ ಸುರೇಶ್ ಇತರರಿದ್ದರು.
ವಿಜಯ ವಿಠಲ ಕಾಲೇಜು: ನಗರದವಿಜಯ ವಿಠಲ ಪಿಯು ಕಾಲೇಜಿನಲ್ಲಿ ಗುರುಪೂರ್ಣಿಮಾ ಅಂಗವಾಗಿ ಗುರುವಂದನಾಕಾರ್ಯಕ್ರಮ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಮಾತನಾಡಿ, ಅಜ್ಞಾನವನ್ನುಹೋಗಲಾಡಿಸಿ ಜ್ಞಾನದ ದೀಪವನ್ನು ಬೆಳಗುವಕೆಲಸವನ್ನು ಗುರುಗಳು ಮಾಡುತ್ತಾರೆಎಂದರು.ಉಪನ್ಯಾಸಕಿ ಮಯೂರಲಕ್ಷ್ಮೀ, ಉಪನ್ಯಾಸಕ ಸಂಜಯ ಇದ್ದರು. ವಿದ್ಯಾರ್ಥಿಗಳುಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರ ನಿವಾಸದಲ್ಲಿ ಪದ್ಮಭೂಷಣಡಾ.ಬಾಲಗಂಗಾಧರ ನಾಥ ಶ್ರೀ ಭಾವಚಿತ್ರಕ್ಕೆಪುಷ್ಪಾರ್ಚನೆ ಸಲ್ಲಿಸಿ ಗುರು ಪೂರ್ಣಿಮೆಆಚರಿಸಲಾಯಿತು.ಚಾಮರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷಕುಮಾರ್ ಗೌಡ, ವಕೀಲ ಸತೀಶ್ ಚಂದ್ರ,ದಿನೇಶ್ ಚಂದ್ರ, ಕೇಬಲ್ ಮಹೇಶ್,ಪಟ್ಟಾಭಿ, ಪ್ರಕಾಶ್, ರವಿ ಇತರರಿದ್ದರು.