Advertisement
ಬಳಿಕ ಆಶೀರ್ವಚನ ನೀಡಿದ ಅವರು, ಮಾತೃ ಸೇವೆ ಮತ್ತು ಗೋ ಸೇವೆಯಿಂದ ಮನುಷ್ಯನಿಗೆ ಅನುಗ್ರಹದ ಜತೆಗೆ ರಕ್ಷಣೆಯೂ ಪ್ರಾಪ್ತವಾಗುತ್ತದೆ ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮನೆಯನ್ನೇ ಗೋ ಗೃಹವನ್ನಾ ಗಿಸಿ ಕೊಂಡು, ಅವುಗಳಿಗೆಂದೇ 3 ಎಕರೆ ಪ್ರದೇಶದಲ್ಲಿ ಗೋ ವಿಹಾರ ಕೇಂದ್ರ ನಿರ್ಮಿಸುವ ಮೂಲಕ ಗೋವುಗಳ ಸೇವೆಯಲ್ಲಿ ತಾಯಿಯ ಸೇವೆಗೈಯ್ಯುವ ಅಪರೂಪದ ವ್ಯಕ್ತಿತ್ವವು ಇಂದು ಗುರ್ಮೆಯಲ್ಲಿ ಅನಾವರಣ ಗೊಂಡಿದೆ ಎಂದು ಶ್ಲಾಘಿಸಿದರು. ಗೌರಿ ಗದ್ದೆ ಸ್ವರ್ಣ ಪೀಠಿಕಾಪುರದ ಅವಧೂತ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಿ, ಸಮಾಜದ ಸೇವೆಯನ್ನೂ ನಡೆಸುತ್ತಿರುವ ಗುರ್ಮೆ ಸಹೋದರರ ಸೇವೆಯಿಂದ ಸಮಾಜ ಸಂತುಷ್ಟ ಗೊಂಡಿದೆ ಎಂದರು.
Related Articles
Advertisement
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಭರತ್ ಶೆಟ್ಟಿ, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿದ್ದರು. ಗುರ್ಮೆ ಫೌಂಡೇಶನ್‌ನ ಟ್ರಸ್ಟಿಗಳಾದ ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ ಉಪಸ್ಥಿತರಿದ್ದರು.
ಯಕ್ಷಗಾನ-ಸಮ್ಮಾನ600 ಮಂದಿ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ವಿತರಣೆ, ಕೊರೊನಾ ವಾರಿಯರ್ಸ್ ಮತ್ತು ಪೌರ ಕಾರ್ಮಿಕರಿಗೆ ಗೌರವಾರ್ಪಣೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮುಂಬಯಿಯ ಸಾಹಿತಿ ಡಾ| ಭರತ್ ಕುಮಾರ್ ಪೊಲಿಪು, ಸೂರಿ ಶೆಟ್ಟಿ ಕಾಪು, ಕಿಶೋರ್ ಕುಮಾರ್ ಗುರ್ಮೆ ದಂಪತಿ ಮತ್ತು ಸಂತೋಷ್ ಪಿ. ಶೆಟ್ಟಿ ತೆಂಕರಗುತ್ತು ದಂಪತಿಯನ್ನು ಸಮ್ಮಾನಿಸಲಾಯಿತು. ಕೀರ್ತನ ಮತ್ತು ಯಕ್ಷಗಾನ ಕಾರ್ಯಕ್ರಮ ನಡೆಯಿತು. ಗುರ್ಮೆ ಫೌಂಡೇಶನ್ ಅಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಪೈಯ್ನಾರು ಶಿವರಾಮ ಶೆಟ್ಟಿ ವಂದಿಸಿದರು. ದಾಮೋದರ ಶರ್ಮಾ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ನಿರ್ವಹಿಸಿದರು. ಗೋವುಗಳ ರಕ್ಷಣೆ: ಪ್ರತಿಜ್ಞೆ ಸ್ವೀಕರಿಸೋಣ
ವಯಸ್ಸಾದ ತಂದೆ-ತಾಯಿಯರನ್ನು ಹೇಗೆ ಮಮತೆಯಿಂದ ಸಾಕಿ ಸಲಹುತ್ತೇವೆಯೋ ಅದೇ ರೀತಿಯಲ್ಲಿ ಗೋವುಗಳನ್ನೂ ಪ್ರೀತಿಯಿಂದ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋವುಗಳ ರಕ್ಷಣೆಗಾಗಿ ನಮ್ಮ ದೇಶ ಮತ್ತು ರಾಜ್ಯದಲ್ಲಿ ಗೋಹತ್ಯಾ ನಿಷೇಧದ ಪ್ರಬಲ ಕಾನೂನು ಜಾರಿಗೆ ಬರುವ ಅಗತ್ಯವಿದೆ. ಈ ಬಗ್ಗೆ ಪ್ರತಿಯೊಬ್ಬರೂ ಪ್ರತಿಜ್ಞೆ ಸ್ವೀಕರಿಸೋಣ.
– ಕೆ.ಎಸ್. ಈಶ್ವರಪ್ಪ , ಸಚಿವ