Advertisement
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 48.5 ಓವರ್‌ಗಳಲ್ಲಿ 232ಕ್ಕೆ ಆಲೌಟಾದರೆ, ನ್ಯೂಜಿಲ್ಯಾಂಡ್ 44.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 233 ರನ್ ಬಾರಿಸಿತು. ಆಗ ಮಾರ್ಟಿನ್ ಗಪ್ಟಿಲ್ 117 ರನ್, ರಾಸ್ ಟಯ್ಲರ್ 45 ರನ್ ಮಾಡಿ ಅಜೇಯರಾಗಿದ್ದರು. ಇದು ಬಾಂಗ್ಲಾದೇಶದ 5ನೇ ನ್ಯೂಜಿಲ್ಯಾಂಡ್ ಪ್ರವಾಸವಾಗಿದ್ದು, ಇಲ್ಲಿಯ ವರೆಗೆ ಬಾಂಗ್ಲಾ ಇಲ್ಲಿ ಯಾವ ಮಾದರಿಯ ಪಂದ್ಯವನ್ನೂ ಗೆದ್ದಿಲ್ಲ.
ಆಕ್ರಮಣಕಾರಿ ಆಟಕ್ಕಿಳಿದ ಗಪ್ಟಿಲ್ 116 ಎಸೆತಗಳಿಂದ 117 ರನ್ ಬಾರಿಸಿ ಮಿಂಚಿದರು. ಇದು ಅವರ 15ನೇ ಶತಕ. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, 4 ಸಿಕ್ಸರ್ ಸೇರಿತ್ತು. ಮತ್ತೋರ್ವ ಆರಂಭಕಾರ ಹೆನ್ರಿ ನಿಕೋಲ್ಸ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 53 ರನ್ ಹೊಡೆದರು (80 ಎಸೆತ, 5 ಬೌಂಡರಿ). ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 22.3 ಓವರ್‌ಗಳಿಂದ 103 ರನ್ ಒಟ್ಟುಗೂಡಿತು. ಬಾಂಗ್ಲಾದೇಶ ಸರದಿಯನ್ನು ಆಧರಿಸಿದವರು ಮೊಹಮ್ಮದ್ ಮಿಥುನ್ ಮತ್ತು ಮೊಹಮ್ಮದ್ ಸೈಫುದ್ದೀನ್. ಇವರಿಂದ 8ನೇ ವಿಕೆಟಿಗೆ 84 ರನ್ ಒಟ್ಟುಗೂಡಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಮಿಥುನ್ ಅವರದು ಸರ್ವಾಧಿಕ 62 ರನ್ ಕೊಡುಗೆ (90 ಎಸೆತ, 5 ಬೌಂಡರಿ). ಮೊಹಮ್ಮದ್ ಸೈಫುಲ್ 58 ಎಸೆತಗಳಿಂದ 41 ರನ್ ಮಾಡಿದರು.ನ್ಯೂಜಿಲ್ಯಾಂಡ್ ಸಾಂ ಕ ಬೌಲಿಂಗ್ ಮೂಲಕ ಬಾಂಗ್ಲಾಕ್ಕೆ ಕಡಿವಾಣ ಹಾಕಿತು. ಸರಣಿಯ 2ನೇ ಪಂದ್ಯ ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.
Related Articles
Advertisement