ಗುಂಡ್ಲುಪೇಟೆ(ಚಾಮರಾಜನಗರ): ಅನೈತಿಕ ಸಂಬಂಧದ ವಿಚಾರಕ್ಕೆ ಗಲಾಟೆ ನಡೆದು ಸ್ವಂತ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವ ಘಟನೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚೌಡಹಳ್ಳಿ ಗ್ರಾಮದ ಪ್ರಸಾದ್(45) ಕೊಲೆಯಾದ ದುರ್ದೈವಿ. ಕುಮಾರ್(39) ಎಂಬಾತ ಕೊಲೆ ಮಾಡಿದ ಆರೋಪಿ.
ಅತ್ತಿಗೆಗೆ ಮೈದುನ ಕುಮಾರ್ ನಿರಂತರವಾಗಿ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಪೀಡಿಸುತ್ತಿದ್ದನಂತೆ. ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಗಲಾಟೆಯಾಗಿ ಬೇರೆ-ಬೇರೆಯಾಗಿ ವಾಸವಾಗಿದ್ದರು.
ಶನಿವಾರ ತಡರಾತ್ರಿ ಅಣ್ಣನ ಮನೆಗೆ ಬಂದ ಕುಮಾರ್, ನನ್ನ ಜೊತೆ ಸಂಬಂಧ ಇಟ್ಟುಕೊಳ್ಳದೇ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಜಗಳ ತೆಗೆದು, ತನಗೆ ಬುದ್ಧಿವಾದ ಮಾತುಗಳನ್ನಾಡುತ್ತೀಯ ಎಂದು ಚಾಕುವಿನಿಂದ ಇರಿದು ಅಣ್ಣನನ್ನು ಕೊಂದಿದ್ದಾನೆ.
ಗುಂಡ್ಲುಪೇಟೆ ಠಾಣೆ ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮೃತನ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.