Advertisement

ಗುಂಡ್ಲುಪೇಟೆ: ಸಿಡಿಲು ಬಡಿದು 8 ಹಸು, 2 ಕುರಿ, 1 ಮೇಕೆ ಸಾವು; ರೈತ ಪಾರು

11:31 PM Apr 23, 2023 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ಸಿಡಿಲು ಬಡಿದು 8 ಹಸುಗಳು, 2 ಕುರಿಗಳು, 1 ಮೇಕೆಗಳು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂದಕೆರೆ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

Advertisement

ಗ್ರಾಮದ ಸಣ್ಣಮಲ್ಲಪ್ಪನ ರಾಜಪ್ಪ ಜಾನುವಾರು ಕಳೆದುಕೊಂಡವರು. ಇವರು ಎಂದಿನಂತೆ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದರು. ಜೋರು ಮಳೆ ಬಂದ ಹಿನ್ನೆಲೆಯಲ್ಲಿ ಜಾನುವಾರುಗಳು ಆಲದ ಮರದ ಕೆಳಗೆ ನಿಂತಿದ್ದವು. ಈ ವೇಳೆ ಪೂರ್ವ ಪಾರ್ಶ್ವ ದಿಂದ ಸಿಡಿಲು ಬಡಿದ ಪರಿಣಾಮ ನಾಡತಳಿಯ 8 ಹಸುಗಳು, 2 ಕುರಿಗಳು, 1 ಮೇಕೆ ಮೃತಪಟ್ಟಿದೆ. ಒಂದು ಮೇಕೆ ಜೀವನ್ಮರಣದ ನಡುವೆ ಒದ್ದಾಡುತ್ತಿದೆ.

ಘಟನೆ ವೇಳೆ ಪಶ್ಚಿಮ ಪಾರ್ಶ್ವದಲ್ಲಿ ರೈತ ರಾಜಪ್ಪ ನಿಂತಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಇನ್ನೊಂದು ಕಡೆ ಸಿಡಿಲು ಬಡಿದು ಬಸವಣ್ಣ ಎಂಬುವರ ಹಸು ಮೃತಪಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ರಕೃತಿ ವಿಕೋಪದಿಂದ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ರೈತ ಮುಖಂಡರಾದ ಕುಂದಕೆರೆ ಸಂಪತ್ತು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next