Advertisement
ಒಟ್ಟು 7000 ಜನ ಸಂಖ್ಯೆಯಿರುವ ಊರು ಡಿಂಗುಚಾ. ಆದರೆ ಈ 7000ದಲ್ಲಿ ಈಗಾಗಲೇ 3200ಕ್ಕೂ ಅಧಿಕ ಜನರು ಅಮೆರಿಕ, ಕೆನಡಾ ಮತ್ತು ಬ್ರಿಟನ್‌ಗೆ ತೆರಳಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಊರಿನ ಪ್ರತಿ ಬೀದಿಯಲ್ಲೂ ವಿದೇಶಕ್ಕೆ ಸಂಪರ್ಕ ಕಲ್ಪಿಸಿಕೊಡುವ ಏಜೆಂಟರಿದ್ದಾರೆ. ಊರಿನ ಪ್ರತಿ ಮಕ್ಕಳಿಗೆ ವಿದೇಶಕ್ಕೆ ಹೋಗುವ ಆಸೆಯನ್ನೇ ತುಂಬಲಾಗುತ್ತಿದೆ. ವಿದೇಶಕ್ಕೆ ಹೋಗಬೇಕು ಇಲ್ಲವೇ ವಿದೇಶಕ್ಕೆ ಕಳುಹಿಸುವ ಏಜೆಂಟ್ ಆಗಬೇಕು ಎನ್ನುವುದೇ ಇಲ್ಲಿನ ಯುವಕರ ಗುರಿಯಂತೆ!
Related Articles
ಜ.19ರಂದು ಅಮೆರಿಕ-ಕೆನಡಾ ಗಡಿಯಾದ ಎಮೆರ್ಸನ್ ಬಳಿ ಮರಗಟ್ಟಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವಗಳು ಗುಜರಾತ್‌ನ ಇದೇ ಡಿಂಗುಚಾ ಊರಿನ ಕುಟುಂಬದ್ದು ಎಂದು ಕೆನಡಾದ ಅಧಿಕಾರಿಗಳು ದೃಢಪಡಿಸಿದ್ದಾರೆ.
Advertisement
ಜಗದೀಶ್ ಭಾಯ್ ಪಟೇಲ್(39), ಅವರ ಪತ್ನಿ ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್(37), ಮಗಳು ವಿಹಾಂಗಿ(11) ಮತ್ತು ಮಗ ಧಾರ್ಮಿಕ್(3) ಮೃತ ದುರ್ದೈವಿಗಳು. ಈ ಕುಟುಂಬ ಹಲವು ದಿನಗಳ ಕಾಲ ಕೆನಡಾದಾದ್ಯಂತ ತಿರುಗಾಡಿದ್ದು, ಜ.12ರಂದು ಟೊರೊಂಟೋಗೆ ತೆರಳಿದೆ. ಅಲ್ಲಿಂದ ಜ.18ರಂದು ಎಮೆರ್ಸನ್‌ಗೆ ಹೊರಟಿತ್ತು. ಮಾನವ ಕಳ್ಳಸಾಗಣೆ ಮಾಡುವವರು ಕುಟುಂಬವನ್ನು ಕರೆದೊಯ್ದಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.