Advertisement

ಗುಜರಾತ್ ನ ಈ ಶಿಕ್ಷಕಿ 8 ವರ್ಷದಿಂದ ಅಮೆರಿಕದಲ್ಲಿದ್ದರೂ ಇಂದಿಗೂ ವೇತನ ಬರುತ್ತಿದೆಯಂತೆ

02:02 PM Aug 09, 2024 | Team Udayavani |

ಗುಜರಾತ್‌: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಹಿಂದೆ ಪಂಚ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರು ಕಳೆದ ಎಂಟು ವರ್ಷಗಳಿಂದ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದರೂ ಇಂದಿಗೂ ಶಿಕ್ಷಣ ಇಲಾಖೆಯಿಂದ ಈ ಶಿಕ್ಷಕಿಗೆ ಪ್ರತಿ ತಿಂಗಳು ಸಂಬಳ ಬರುತ್ತಿದೆಯಂತೆ.

Advertisement

ಹೌದು ಎನ್ನುತ್ತಾರೆ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರ ಶಿಕ್ಷಕರು ಅಲ್ಲದೆ ಶಾಲೆಯ ದಾಖಲೆಗಳಲ್ಲೂ ಈ ಶಿಕ್ಷಕಿ ಇಂದಿಗೂ ಕರ್ತವ್ಯದಲ್ಲಿ ಇರುವುದಾಗಿ ಹೇಳುತ್ತಿದೆಯಂತೆ. ಕಳೆದ ೮ ವರ್ಷದಿಂದ ಅಮೆರಿಕದಲ್ಲಿದ್ದರೂ ಈ ಶಿಕ್ಷಕಿಯ ಖಾತೆಗೆ ಮಾತ್ರ ಪ್ರತಿ ತಿಂಗಳು ಶಾಲೆಯ ವೇತನ ಜಮೆಯಾಗುತ್ತಿದೆಯಂತೆ ಅಲ್ಲದೆ ಶಿಕ್ಷಕಿ ಕೂಡ ಜಮೆಯಾದ ಹಣವನ್ನು ಡ್ರಾ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಕರು ಆರೋಪಿಸುತ್ತಿದ್ದಾರೆ.

ಏನಿದು ಪ್ರಕರಣ:
ಗುಜರಾತ್ ಜಿಲ್ಲೆಯ ಬನಸ್ಕಾಂತದ ಅಂಬಾಜಿಯಲ್ಲಿರುವ ಪಂಚ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಭಾವನಾಬೆನ್ ಪಟೇಲ್ ಅವರು ಎಂಟು ವರ್ಷದ ಮೊದಲು ಇಲ್ಲಿನ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ ಇದಾದ ಬಳಿಕ ಕರ್ತವ್ಯದಲ್ಲಿರುವಾಗಲೇ ಕುಟುಂಬ ಸಮೇತ ಅಮೆರಿಕದ ಚಿಕಾಗೋ ಗೆ ತೆರಳಿ ಅಲ್ಲಿ ನೆಲೆನಿಂತಿದ್ದಾರೆ ಆ ಬಳಿಕ ಶಾಲೆಯ ಕಡೆ ತಲೆ ಹಾಕಿಲ್ಲ ಅಲ್ಲದೆ ವರ್ಷಕ್ಕೆ ಒಮ್ಮೆ ಗುಜರಾತ್ ಗೆ ಬರುತ್ತಿದ್ದ ಪಟೇಲ್ ತನ್ನ ಊರಿಗೆ ಬಂದು ಎರಡು ತಿಂಗಳು ಊರಿನಲ್ಲಿ ನೆಲೆಸಿ ಮತ್ತೆ ಅಮೆರಿಕಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ ಕೆಲವೊಮ್ಮೆ ಊರಿಗೆ ಬಂದ ಸಂದರ್ಭ ಶಾಲೆಗೆ ಭೇಟಿ ನೀಡಿ ಬರುತ್ತಿದ್ದರು ಎನ್ನಲಾಗಿದೆ ಆದರೆ ಈ ಶಿಕ್ಷಕಿ ಅಮೆರಿಕಕ್ಕೆ ತೆರಳಿ ಎಂಟು ವರ್ಷಗಳಾದರೂ ಶಿಕ್ಷಣ ಇಲಾಖೆಯಿಂದ ಸಂಬಳ ಮಾತ್ರ ಬರುತ್ತಲೇ ಇದೆಯಂತೆ, ಈ ಕುರಿತು ಅದೇ ಶಾಲೆಯ ಶಿಕ್ಷಕರು ಆರೋಪ ಕೂಡ ಮಾಡಿದ್ದಾರೆ.

ಶಿಕ್ಷಕಿಯ ಬಗ್ಗೆ ದೂರು:
ಭಾವನಾ ಬೆನ್ ಪಟೇಲ್ ಅವರ ಬಗ್ಗೆ ಅದೇ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದರೂ ಶಿಕ್ಷಣ ಇಲಾಖೆ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎನ್ನುತ್ತಾರೆ ಶಿಕ್ಷಕರು, ಅಲ್ಲದೆ ಈ ಶಿಕ್ಷಕಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಹಾಗಾಗಿ ಇಲೆಕ್ ಕೂಡ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ.

ಎರಡು ವರ್ಷಗಳಿಂದ ಶಾಲೆಗೆ ಬಂದಿಲ್ಲ
ಇದೆ ಶಾಲೆಯಲ್ಲಿ ಕರ್ತವ್ಯದಲ್ಲಿರುವ ಶಿಕ್ಷಕಿ ಪಾರುಲ್ ಬೆನ್ ಪ್ರಕಾರ, ಮೂರನೇ ತರಗತಿಯ ಮಕ್ಕಳಿಗೆ ಶಿಕ್ಷಕಿಯಾಗಿದ್ದ ಭಾವನಾ ಬೆನ್ ಪಟೇಲ್ ಅವರನ್ನು ಮೂರನೇ ತರಗತಿಯಲ್ಲಿ ನೋಡಿದ್ದ ಮಕ್ಕಳು ಈಗ ಐದನೇ ತರಗತಿ ತಲುಪಿದ್ದಾರೆ. ಅವರು ಬಹಳ ಸಮಯದಿಂದ ಗೈರುಹಾಜರಾಗಿದ್ದಾರೆ. ಸದ್ಯ ತನಗೆ ಐದನೇ ತರಗತಿಯ ಜವಾಬ್ದಾರಿ ಇದೆ ಎಂದು ಪಾರುಲ್ ಬೆನ್ ಹೇಳಿದ್ದಾರೆ.

Advertisement

ಭಾವನಾ ಪಟೇಲ್ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎನ್ನಲಾಗಿದೆ, ಆದರೂ ಆಕೆಯ ಹೆಸರನ್ನು ಭಾರತದ ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ನೋಂದಾಯಿಸಲಾಗಿದೆ. ಶಾಲೆಯ ಬೋರ್ಡ್‌ನಲ್ಲಿ ಹೆಸರನ್ನು ನಮೂದಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಪ್ರಭಾರಿ ಶಿಕ್ಷಕಿ ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬರುತ್ತಾರೆ ಎನ್ನುತ್ತಾರೆ ಶಾಲೆಯ ಪ್ರಭಾರಿ ಶಿಕ್ಷಕರು.

8 ವರ್ಷಗಳಿಂದ ಸಂಬಳ ಪಡೆಯುತ್ತಿದ್ದಾರೆ:
ಶಿಕ್ಷಕಿ ಭಾವನಾಬೆನ್ ಅವರು ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆ ಎನ್ನಲಾಗಿದೆ. ಭಾವನಾಬೆನ್ ಪಟೇಲ್ ಕಳೆದ 8 ವರ್ಷಗಳಿಂದ ಅಮೆರಿಕದ ಚಿಕಾಗೋಗೆ ಶಿಫ್ಟ್ ಆಗಿದ್ದಾರೆ. ಹೀಗಿದ್ದರೂ ಅಂಬಾಜಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಭಾವನಾಬೆನ್ ಪಟೇಲ್ ಹೆಸರು ಚಾಲ್ತಿಯಲ್ಲಿದೆ.

ಜನವರಿ 2023 ಕೊನೆಯ ಬಾರಿಗೆ ಶಾಲೆಗೆ ಭೇಟಿ:
ಭಾವನಾಬೆನ್ ಕೊನೆಯ ಬಾರಿಗೆ 25 ಜನವರಿ 2023 ರಂದು ಶಾಲೆಗೆ ಹಾಜರಾಗಿದ್ದರು ಎಂದು ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಇದರ ಬಳಿಕ ಜನವರಿ 1, 2024 ರಿಂದ ವೇತನ ರಹಿತ ಷರತ್ತಿನೊಂದಿಗೆ ರಜೆಯಲ್ಲಿ ತೆರಳಿರುವುದಾಗಿ ಹೇಳಿಕೊಂಡಿದ್ದು ಇದರ ಬಗ್ಗೆ ಶಿಕ್ಷಕಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kalaburagi; ಜ.29 ರಿಂದ 9 ದಿನಗಳ ಕಾಲ 7ನೇ ಭಾರತೀಯ ಸಂಸ್ಕೃತಿ ಉತ್ಸವ

 

Advertisement

Udayavani is now on Telegram. Click here to join our channel and stay updated with the latest news.

Next