Advertisement

ಗುಜರಾತ್‌: ಕಡಿಮೆ ಅಂತರದ ಗೆಲುವು

07:10 AM Dec 20, 2017 | Team Udayavani |

ಅಹಮದಾಬಾದ್‌/ಶಿಮ್ಲಾ: ಗುಜರಾತ್‌ ವಿಧಾನಭೆಯಲ್ಲಿ ಬಿಜೆಪಿ ಪ್ರಯಾಸದಿಂದ ಜಯ ಗಳಿಸಿದೆ ಎನ್ನುವುದು ಇದೀಗ ಬಹಿರಂಗ ಸತ್ಯ. ಮಂಗಳವಾರ ಹೊರಬಂದ ಮತ್ತೂಂದು ಪ್ರಮುಖ ಅಂಶವೆಂದರೆ ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಅಂತರ ಮತ್ತು ಕನಿಷ್ಠ ಅಂತರದಿಂದ ಜಯಗಳಿಸಿದ ಅಭ್ಯರ್ಥಿಗಳು ಒಟ್ಟು 16 ಕ್ಷೇತ್ರಗಳಲ್ಲಿರು ವುದು ತಿಳಿದುಬಂದಿದೆ. 200 ಮತಗಳಿಂದ 2 ಸಾವಿರ ಮತಗಳವರೆಗೆ ಈ ವ್ಯತ್ಯಾಸ ಇದೆ. 

Advertisement

ಗುಜರಾತ್‌ನ ಹಿಮಾಂತ್‌ನಗರ್‌, ಪೋರ್‌ಬಂದರ್‌, ವಿಜಾಪುರ್‌, ದಿಯೋದರ್‌, ದಾಂಗ್ಸ್‌, ಮಾನ್ಸಾ ಮತ್ತು ಗೋದ್ರಾದಲ್ಲಿ ಅಭ್ಯರ್ಥಿಗಳ ನಡುವೆ ನಿಕಟ ಪೈಪೋಟಿ ಇತ್ತು.  ಧೋಕ್ಲಾ ಮತ್ತು ಫ‌ತೇಪುರ ಕ್ಷೇತ್ರದಲ್ಲಿ ಎನ್‌ಸಿಪಿ ಮತ್ತು ಬಿಎಸ್‌ಪಿ ಕಾಂಗ್ರೆಸ್‌, ಬಿಜೆಪಿಗೆ ಸೇರಬೇಕಾಗಿದ್ದ ಮತಗಳಿಗೆ ಅಡ್ಡಗಾಲು ಹಾಕಿದ್ದವು. ಕೆಲವೊಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳೂ ಹೆಚ್ಚಿನ ಪ್ರಮಾಣದ ಮತ ಗಳಿಸಿದ್ದಾರೆ. 

ಬುಡಕಟ್ಟು ಜನಾಂಗದವರೇ ಹೆಚ್ಚಾಗಿರುವ ದಾಂಗ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 768 ಮತಗಳಿಂದ ಗೆದ್ದಿದ್ದಾರೆ. ಕಪ್ರಾಡಾ ಎಂಬ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೇವಲ 107 ಮತಗಳಿಂದ ಗೆದ್ದಿ ದ್ದಾರೆ. ಆದರೆ 77 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್‌ ಹುರಿಯಾಳುಗಳು ಎಂಟು ಕ್ಷೇತ್ರಗಳಲ್ಲಿ 2 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಗೋಧಾÅದಲ್ಲಿ ಬಿಜೆಪಿ ಯ ಸಿ.ಕೆ.ರಾಜುಲಿ ಗೆದ್ದದ್ದು 170 ಮತಗಳ ಅಂತರದಲ್ಲಿ. ಧೋಕ್ಲಾದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 327 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. 

ಫ‌ತೇಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದ ಅಂತರ 2,711 ಮತಗಳು. ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್‌ಸಿಪಿ ಅಭ್ಯರ್ಥಿ 2,747 ಮತಗಳನ್ನು ಪಡೆದಿದ್ದಾರೆ. ಬೋಟಾಡ್‌ ಕ್ಷೇತ್ರದಿಂದ ಕಾಂಗ್ರೆಸ್‌ 906 ಮತಗಳ ಅಂತರದಿಂದ ಸೋಲುಂಡಿದೆ. ಇಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ 966 ಮತ್ತು ಸ್ವತಂತ್ರ ಹುರಿಯಾಳು 7,500 ಮತಗಳನ್ನು ಪಡೆದಿದ್ದಾರೆ. 

ಗೆದ್ದದ್ದು ಐವರು: ಅಂದ ಹಾಗೆ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದು 905 ಸ್ವತಂತ್ರ ಅಭ್ಯರ್ಥಿಗಳು. ಈ ಪೈಕಿ ಗೆದ್ದದ್ದು ಐವರು ಮಾತ್ರ. ಮೂವರು ಗುಜರಾತ್‌ನಲ್ಲಿ ಮತ್ತು ಇಬ್ಬರು ಹಿಮಾಚಲದಲ್ಲಿ. ಮತ ಗಳಿಕೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಬಳಿಕ ಮೂರನೇ ಸ್ಥಾನದಲ್ಲಿ ಸ್ವತಂತ್ರರೇ ಇದ್ದಾರೆ. ಗುಜರಾತ್‌ನಲ್ಲಿ ಪ್ರಮುಖ ಪಕ್ಷಗಳ 16 ಘಟಾನುಘಟಿ ನಾಯಕರೇ ಸೋತಿರುವುದು ಮತ್ತೂಂದು ವಿಶೇಷ.

Advertisement

13 ಮಹಿಳೆಯರು: ಗುಜರಾತ್‌ ಹಾಲಿ ಚುನಾವಣೆ ಯಲ್ಲಿ 13 ಮಹಿಳಾ ಹುರಿಯಾಳುಗಳು ಗೆದ್ದಿದ್ದಾರೆ. 2012ರ ಫ‌ಲಿತಾಂಶಕ್ಕೆ ಹೋಲಿಸಿದರೆ ಮೂವರು ಅಭ್ಯರ್ಥಿಗಳು ಕಡಿಮೆ. ಗುಜರಾತ್‌ನ ಹೊಸ ಅಸೆಂಬ್ಲಿ ಯಲ್ಲಿ ಮೂವರು ಮುಸ್ಲಿಂ ಅಭ್ಯರ್ಥಿಗಳಿದ್ದಾರೆ. ಅವರು ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿದವರು. ಅದು 6 ಮಂದಿಯನ್ನು ಕಣಕ್ಕೆ ಇಳಿಸಿತ್ತು. 2012ರ ಚುನಾ ವಣೆ ಯಲ್ಲಿ ಆರು ಮಂದಿಯ ಪೈಕಿ ಮೂವರು ಗೆದ್ದಿದ್ದರು. ಆಡಳಿತಾರೂಢ ಬಿಜೆಪಿಯಿಂದ ಸಮುದಾಯದ ಯಾರೊಬ್ಬರಿಗೂ ಟಿಕೆಟ್‌ ನೀಡಲಾಗಿರಲಿಲ್ಲ.

ಇನ್ನು ಹಿಮಾಚಲ ಪ್ರದೇಶದ 16 ಕ್ಷೇತ್ರಗಳಲ್ಲಿ ಗೆದ್ದ ಅಭ್ಯರ್ಥಿಗಳ ಮತ ಪ್ರಮಾಣ ಶೇ.5ಕ್ಕಿಂತ ಕಡಿಮೆ. ಕೆಲವರ ಗೆದ್ದ ಅಂತರ ಶೇ.2ಕ್ಕಿಂತಲೂ ಕಡಿಮೆ. ಕಿನೌ°ರ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಜಗತ್‌ ಸಿಂಗ್‌ ನೇಗಿ 120 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next