Advertisement

ಅಡ್ಡಮತದಾನ ಮಾಡಿದ Congress MLAಗಳ ಮತ ಅಸಿಂಧು ; ಮತಗಣನೆ ವಿಳಂಬ

06:18 PM Aug 08, 2017 | Sharanya Alva |

ಗುಜರಾತ್‌ ರಾಜ್ಯಸಭಾ ಫೈಟ್‌ : ಅಮಿತ್‌ – ಅಹಮ್ಮದ್‌ ಹಣಾಹಣಿ : ತಾಜಾ updates

Advertisement

1.01 AM
– ನಳಿನ್‌ ಕೊಠಾಡಿ ಅಡ್ಡ ಮತದಾನದಿಂದ ಕಂಗೆಟ್ಟ ಬಿಜೆಪಿ
ಮತ ಎಣಿಕೆ ಪ್ರಾರಂಭಕ್ಕೆ BJP ಅಡ್ಡಿ, ಇದುವರೆಗೆ ಮತಎಣಿಕೆಗೆ ಪಟ್ಟು ಹಿಡಿದಿದ್ದ ಬಿಜೆಪಿಯಿಂದ ಯೂ – ಟರ್ನ್
– ಅಡ್ಡ ಮತದಾನದ ವಿಡಿಯೋ ಬಹಿರಂಗಕ್ಕೆ ಬಿಜೆಪಿ ಪಟ್ಟು
ಇನ್ನೂ 3 ಗಂಟೆಗಳ ಬಳಿಕ ಚುನಾವಣಾ ಆಯೋಗದ ತೀರ್ಮಾನ ಸಾಧ್ಯತೆ

12.25 AM
– ಬಿಜೆಪಿ ಶಾಸಕನಿಂದಲೂ ಅಡ್ಡ ಮತದಾನ
– ಬಿಜೆಪಿ ಶಾಸಕ ನಳಿನ್‌ ಕೊಠಾಡಿಯಾ ಅಹಮ್ಮದ್‌ ಪಟೇಲ್‌ ಅವರಿಗೆ ಮತದಾನ ಮಾಡಿರುವುದಾಗಿ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದಾರೆ.
– ಅಹಮ್ಮದ್‌ ಪಟೇಲ್‌ ಅವರ ಹತ್ತಿರ ಮಾತನಾಡಿದ ಬಳಿಕ ನಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನಳಿನ್‌ ಕೊಠಾಡಿಯಾ ಹೇಳಿಕೆ.

11.40PM
– ರಾಜ್ಯಸಭಾ ಫ‌ಲಿತಾಂಶಕ್ಕೂ ಮುನ್ನವೇ ಬಿಜೆಪಿಗೆ ಬಿಗ್‌ ಶಾಕ್‌
– ಕಾಂಗ್ರೆಸ್‌ ಬಂಡಾಯ ಶಾಸಕರ ಮತ ಅನೂರ್ಜಿತಗೊಂಡಿದೆ
– ಕೇಂದ್ರ ಚುನಾವಣಾ ಆಯೋಗದ ಮಹತ್ವದ ನಿರ್ಧಾರ
– ಅಹಮ್ಮದ್‌ ಪಟೇಲ್‌ ಗೆಲುವಿನ ಹಾದಿ ಸುಗಮ
– ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರ ಮತಗಳು ಅನೂರ್ಜಿಗೊಂಡ ಬಳಿಕ ಮತ ಎಣಿಕೆ ಪ್ರಾರಂಭ
– 1 ರಾಜ್ಯಸಭಾ ಸ್ಥಾನದ ಫ‌ಲಿತಾಂಶ ಇನ್ನೂ ನಿಗೂಢ
– ಆಯೋಗದ ತೀರ್ಪನ್ನು ಸ್ವಾಗತಿಸಿದ ಕಾಂಗ್ರೆಸ್‌ ಗುಜರಾತ್‌ ಮುಖಂಡ ಆರ್ಜುನ್‌ ಮೊದ್ವಾಡಿಯಾ
ಆರ್ಜುನ್‌ ಮೊದ್ವಾಡಿಯಾ ಅವರು ಗುಜರಾತ್‌ ನಲ್ಲಿ ಹೇಳಿದ್ದಿಷ್ಟು…:
– ನಮ್ಮ ಶಾಸಕರಿಗೆ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿತ್ತು.
– 1 ರಾಜ್ಯ ಸಭಾ ಸ್ಥಾನವನ್ನು ಗೆಲ್ಲಲು ಗುಜರಾತ್‌ ಬಿಜೆಪಿ ಸೇರಿದಂತೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಸಿಕೊಂಡಿತ್ತು.
– ಆಯೋಗದ ತೀರ್ಪಿನ ಬಳಿಕ ಕಾಂಗ್ರೆಸಿಗೆ ಗೆಲುವಿನ ವಿಶ್ವಾಸ.

10.45 PM
– 11.30ಕ್ಕೆ ಚುನಾವಣಾ ಆಯೋಗದ ನಿರ್ಧಾರ ಪ್ರಕಟ
– ಆಯೋಗದ ರಿಟರ್ನಿಂಗ್‌ ಆಫೀಸರ್‌ ಅವರಿಗೆ ತನ್ನ ನಿರ್ಧಾರವನ್ನು ಪ್ರಕಟಿಸಲಿರುವ ಚುನಾವಣಾ ಆಯೋಗ
– ಬಳಿಕ ಗುಜರಾತ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ 3 ರಾಜ್ಯಸಭಾ ಸ್ಥಾನಗಳ ಫ‌ಲಿತಾಂಶ ಪ್ರಕಟ
– ಅಹಮ್ಮದ್‌ ಪಟೇಲ್‌ ರಾಜ್ಯಸಭಾ ಸ್ಥಾನ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

Advertisement

10.24 PM
– ಕೆಲ ಹೊತ್ತಿನಲ್ಲಿಯೇ ಚುನಾವಣಾ ಆಯೋಗದ ನಿರ್ಧಾರ ಪ್ರಕಟ
– ಚುನಾವಣಾ ಅಧಿಕಾರಿಯಿಂದ ಸ್ವಲ್ಪ ಹೊತ್ತಿನಲ್ಲಿಯೇ ಸುದ್ದಿಗೋಷ್ಠಿ
– ಅಹಮ್ಮದ್‌ ಪಟೇಲ್‌ ರಾಜ್ಯಸಭಾ ಸ್ಥಾನ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ

10.10 PM:
– ಇಂದೇ ಮತ ಎಣಿಕೆ ಹಾಗೂ ಇಂದೇ ಫ‌ಲಿತಾಂಶ – ಕೇಂದ್ರ ಚುನಾವಣಾ ಆಯೋಗದ ಮಾಹಿತಿ
– ಫ‌ಲಿತಾಂಶವನ್ನು ಗುಜರಾತಿನಲ್ಲೇ ಪ್ರಕಟಿಸಲಾಗುವುದು, ನವದೆಹಲಿಯಲ್ಲಿ ಅಲ್ಲ – ಆಯೋಗದ ಮಾಹಿತಿ
– ಚುನಾವಣಾ ಆಯೋಗದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನವದೆಹಲಿಯಲ್ಲಿ ಪ್ರಾರಂಭ
– ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ನಿಯೋಗದ ಮನವಿಗಳ ಕುರಿತಾಗಿ ಸಭೆಯಲ್ಲಿ ಚರ್ಚೆ, ಪರಿಶೀಲನೆ ಸಾಧ್ಯತೆ.
– ಚುನಾವಣಾ ಆಯೋಗದ ಕಛೇರಿಯಿಂದ ಹೊರಟ ಬಿಜೆಪಿ ನಿಯೋಗ
– ಕಾಂಗ್ರೆಸ್‌ ಮನವಿಯನ್ನು ತಿರಸ್ಕರಿಸುವಂತೆ ಆಯೋಗದ ಮುಂದೆ ಮನವಿ ಸಲ್ಲಿಸಿದ ಬಿಜೆಪಿ

– ಕೇಂದ್ರ ಚುನಾವಣಾ ಆಯೋಗ ಕಛೇರಿಯಲ್ಲಿ ಬಿಜೆಪಿ – ಕಾಂಗ್ರೆಸ್‌ ನಿಯೋಗದ ಮುಖಾಮುಖೀ !
– ಎರಡೂ ಪಕ್ಷಗಳ 2ನೇ ನಿಯೋಗ ಇದೀಗ ಕೇಂದ್ರ ಚುನಾವಣಾ ಕಛೇರಿಯಲ್ಲಿ !
– ಆನಂದ ಶರ್ಮಾ ನೇತೃತ್ವದ ಕಾಂಗ್ರೆಸ್‌ ಪಕ್ಷದ ನಿಯೋಗ
ಕೇಂದ್ರದ ಮಾಜೀ ಸಚಿವ ಪಿ. ಚಿದಂಬರಂ ಹೇಳಿದ್ದಿಷ್ಟು: 
– ನಾವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ.
– ಪಕ್ಷದ ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳಿಗೆ ತಮ್ಮ ಮತಪತ್ರಗಳನ್ನು ತೋರಿಸಿರುವ ಎರಡು ಕಾಂಗ್ರೆಸ್‌ ಶಾಸಕರ ಮತಗಳನ್ನು ಅಸಿಂಧುಗೊಳಿಸುವಂತೇ ನಾವು ವಿನಂತಿಸಿದ್ದೇವೆ.
– ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ನಾವು ಆಯೋಗದ ಮುಂದೆ ಪ್ರಸ್ತುತಪಡಿಸಿದ್ದೇವೆ.
– ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗವೇ ಕೈಗೊಳ್ಳಲಿದೆ.
– ಈ ಹಿಂದೆ ಹರ್ಯಾಣದಲ್ಲಿ 2016ರಲ್ಲಿ ಇದೇ ರೀತಿಯ ಘಟನೆಯಲ್ಲಿ ಅಂತಹ ಶಾಸಕರ ಮತವನ್ನು ಅಸಿಂಧುಗೊಳಿಸಲಾಗಿತ್ತು. ಇದೇ ವಾದವನ್ನು ನಾವು ಆಯೋಗದ ಮುಂದೆ ಇರಿಸಿದ್ದೇವೆ.
– ಈ ಎರಡು ಮತಪತ್ರಗಳು ತಿರಸ್ಕಾರರ್ಹವಾಗಿದೆ. – ಪಿ ಚಿದಂಬರಂ.
– ಈ ಎಲ್ಲಾ ಬೆಳವಣಿಗೆಗಳಿಂದ ದೂರವುಳಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ!

– ನನ್ನ ಗೆಲವು ಖಚಿತ, ನಾನು ಸಂಪೂರ್ಣ ಆತ್ಮವಿಶ್ವಾಸದಿಂದ್ದೇನೆ. ಮತಎಣಿಕೆ ಮುಕ್ತಾಯಗೊಂಡ ಬಳಿಕ ಸತ್ಯಾಂಶ ಹೊರಬೀಳಲಿದೆ – ಕಾಂಗ್ರೆಸ್‌ ನಾಯಕ ಅಹಮ್ಮದ್‌ ಪಟೇಲ್‌ ಹೇಳಿಕೆ
– ನವದೆಹಲಿಯಲ್ಲಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಸುದ್ದಿಗೋಷ್ಠಿ : ಅವರು ಹೇಳಿದ್ದಿಷ್ಟು…
-ಬೆಳಿಗ್ಗೆಯಿಂದ ಸುಮ್ಮನಿದ್ದ ಕಾಂಗ್ರೆಸ್‌ ಪಕ್ಷದ ಸದಸ್ಯರು ತಮ್ಮ ಪಕ್ಷದ ಇಬ್ಬರು ಶಾಸಕರು ಅಡ್ಡಮತದಾನ ಮಾಡಿದ ಬಳಿಕ ಎಚ್ಚತ್ತುಕೊಂಡಿದೆ.
– ಅಂತಿಮ ಕ್ಷಣದಲ್ಲಿ ಪಟೇಲ್‌ ಸೋಲು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್‌ ಎಚ್ಚೆತ್ತುಕೊಂಡಿದೆ.
– ಸೋಲಿನ ಹತಾಶೆಯಿಂದ ಕಾಂಗ್ರೆಸ್‌ ಸುಳ್ಳು ಆರೋಪಗಳನ್ನು ಮಾಡುತ್ತಿದೆ.
– ಅದಕ್ಕಾಗಿ ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಾವು ಚುನಾವಣಾ ಆಯೋಗದ ಕಛೇರಿಗೆ ತೆರಳಿ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ.
– ಒಂದು ಬಾರಿ ಮತಪತ್ರಗಳು ಬ್ಯಾಲೆಟ್‌ ಬಾಕ್ಸ್‌ ನಲ್ಲಿ ಭದ್ರಗೊಳಿಸಿದ ಬಳಿಕ ಅವುಗಳನ್ನು ತೆರೆಯಲು ಅವಕಾಶವಿಲ್ಲ.
– ಕಾಂಗ್ರೆಸ್‌ ಪಕ್ಷ ಇನ್ನು ಕಾನೂನು ಸ್ವರೂಪದ ಹೋರಾಟವನ್ನು ನಡೆಸಲಿ. ಅದು ಬಿಟ್ಟು ಈ ರೀತಿ ಹಂಗಾಮ ಸೃಷ್ಟಿಸುವು ಆ ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ.

– ಎರಡು ಮತಗಳ ಮೇಲೆ ನಿಂತಿದೆ ಅಹಮ್ಮದ್‌ ಪಟೇಲ್‌ ಭವಿಷ್ಯ
– ಅಡ್ಡಮತದಾನ ಮಾಡಿರುವ ಎರಡು ಕಾಂಗ್ರೆಸ್‌ ಶಾಸಕರ ಮತ ಅಸಿಂದುಗೊಂಡರೆ ಅಹಮ್ಮದ್‌ ಪಟೇಲ್‌ ಗೆಲುವು?
– ಈ ಎರಡು ಕಾಂಗ್ರೆಸ್‌ ಶಾಸಕರ ಮತ ಸಿಂಧುಗೊಂಡರೆ ಅಹಮ್ಮದ್‌ ಪಟೇಲ್‌ ಸೋಲು?
– ಇದಕ್ಕಾಗಿ ಚುನಾವಣಾ ಆಯೋಗದ ಬಾಗಿಲು ಬಡಿಯುತ್ತಿರುವ ಬಿಜೆಪಿ-ಕಾಂಗ್ರೆಸ್‌ ಪಕ್ಷದ ಘಟಾನುಗಟಿಗಳು
– ಬಿಜೆಪಿ ನಿಯೋಗದ ಬಳಿಕ ಇದೀಗ ಕಾಂಗ್ರೆಸ್‌ ಪಕ್ಷದ 7 ಸದಸ್ಯರ ನಿಯೋಗ ಚುನಾವಣಾ ಆಯೋಗದ ಕಛೇರಿಗೆ ದೌಡು
– ಒಟ್ಟಿನಲ್ಲಿ ಅತಂತ್ರವಾಗುತ್ತಿದೆ ಗುಜರಾತ್‌ ರಾಜ್ಯಸಭಾ ಸ್ಥಾನಗಳ ಚುನಾವಣಾ ಫ‌ಲಿತಾಂಶ
– ಫ‌ಲಿತಾಂಶ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆ

– ಕಾಂಗ್ರೆಸ್‌ ಶಾಸಕ ಗಿರೀಶ್‌ ಘರಾಟಿಯಾ ಮತವನ್ನು ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಬಿಜೆಪಿ.
-ಕೇಂದ್ರ ಬಿಜೆಪಿ ಸವೀರಾಗಿರುವ ಮುಖಾ¤ರ್‌ ಅಬ್ಟಾಸ್‌ ನಖ್ವೀ, ಧಮೇಂದ್ರ ಪ್ರದಾನ್‌, ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌ ಚುನಾವಣಾ ಆಯೋಗದ ಕಛೇರಿಗೆ ತೆರಳಿ ಈ ಮನವಿಯನ್ನು ಸಲ್ಲಿಸಿದ್ದಾರೆ.
-ಅಡ್ಡಮತದಾನ ಮಾಡಿರುವ ಕಾಂಗ್ರೆಸ್‌ ಶಾಸಕರ ಮತಗಳನ್ನು ಚುನಾವಣಾ ಆಯೋಗ ಊರ್ಜಿತಗೊಳಿಸಿದೆ.
-ರಾಜ್ಯಸಭೆಯ 3 ಸ್ಥಾನಗಳಿಗೆ ನಡೆದಿದ್ದ ಚುನಾವಣೆ.
-ಅಡ್ಡಮತದಾನ ಮಾಡಿರುವ ಕಾಂಗ್ರೆಸ್‌ ಶಾಸಕರ ಮತಗಳನ್ನು ಅಸಿಂಧುಗೊಳಿಸುಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮನವಿ.
-ಅದಕ್ಕಾಗಿ ಮತ ಎಣಿಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು.
-ಆದರೆ ಈಗ ಚುನಾವಣಾ ಆಯೋಗವು ಆ ಇಬ್ಬರು ಶಾಸಕರ ಮತಗಳನ್ನು ಸಿಂಧುಗೊಳಿಸಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷದ ಬೇಡಿಕೆಯನ್ನು ಚುನಾವಣಾ ಆಯೋಗವು ತಳ್ಳಿಹಾಕಿದಂತಾಗಿದೆ.

– ಅಡ್ಡಮತದಾನ ಮಾಡಿರುವ ಕಾಂಗ್ರೆಸ್‌ ಶಾಸಕರ ಮತಗಳನ್ನು ಚುನಾವಣಾ ಆಯೋಗ ಊರ್ಜಿತಗೊಳಿಸಿದೆ.
– ರಾಜ್ಯಸಭೆಯ 3 ಸ್ಥಾನಗಳಿಗೆ ನಡೆದಿದ್ದ ಚುನಾವಣೆ.
– ಅಡ್ಡಮತದಾನ ಮಾಡಿರುವ ಕಾಂಗ್ರೆಸ್‌ ಶಾಸಕರ ಮತಗಳನ್ನು ಅಸಿಂಧುಗೊಳಿಸುಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಮನವಿ.
– ಅದಕ್ಕಾಗಿ ಮತ ಎಣಿಕೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು.
– ಆದರೆ ಈಗ ಚುನಾವಣಾ ಆಯೋಗವು ಆ ಇಬ್ಬರು ಶಾಸಕರ ಮತಗಳನ್ನು ಸಿಂಧುಗೊಳಿಸಿದೆ. ಈ ಮೂಲಕ ಕಾಂಗ್ರೆಸ್‌ ಪಕ್ಷದ ಬೇಡಿಕೆಯನ್ನು ಚುನಾವಣಾ ಆಯೋಗವು ತಳ್ಳಿಹಾಕಿದಂತಾಗಿದೆ.

ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಇಬ್ಬರು ಶಾಸಕರು ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕಾಂಗ್ರೆಸ್ ಆಗ್ರಹಿಸಿದ ನಾಟಕೀಯ ಬೆಳವಣಿಗೆ ನಡೆಯಿತು. ಆದರೆ ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಮನವಿಯನ್ನು ತಿರಸ್ಕರಿಸಿ ಮತಎಣಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ.

ಬಿಜೆಪಿಗೆ ಮತ ಹಾಕಿರುವುದಾಗಿ ಇಬ್ಬರು ಶಾಸಕರು ಬಹಿರಂಗವಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆಯನ್ನೇ ರದ್ದುಪಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರ ಸೋಲು ಬಹುತೇಕ ಖಚಿತವಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next