Advertisement
ಚೆಕ್‌ಪೋಸ್ಟ್‌ನಲ್ಲೇ ವಾಸ್ತವ್ಯ: ಕರ್ನಾಟಕ ರಾಜ್ಯ ಪ್ರವೇಶಿಸಲು ಕರ್ನಾಟಕ ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್‌ಪೋಸ್ಟ್‌ದಲ್ಲಿ ವಾಸ್ತವ್ಯ ಮಾಡಿದ್ದಾರೆ. ಬಳಿಕ ಮೇ 8ರಂದು ಸಂಜೆ 5:00 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ವಾಹನ ಸಂಖ್ಯೆ:ಕೆಎ-09-ಸಿ-2579 ಟಾಟಾ 407 ಮ್ಯಾಕ್ಸಿ ಕ್ಯಾಬ್ ಮೂಲಕ ನಿಪ್ಪಾಣಿಯಿಂದ ಧಾರವಾಡ ಕೃಷಿವಿವಿ ಆವರಣಕ್ಕೆ ರಾತ್ರಿ 8:30 ಗಂಟೆಗೆ ತಲುಪಿದ್ದಾರೆ. ಆ ದಿನವೇ ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ 12ರಂದು 9 ಜನರಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿ ಕಿಮ್ಸ್ ಕೋವಿಡ್ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ. ಸದ್ಯ ಚೆಕ್‌ಪೋಸ್ಟ್‌ನಲ್ಲಿ 3 ದಿನ ವಾಸ್ತವ್ಯದ ಸೋಂಕಿತರ ಪ್ರಯಾಣದ ವಿವರ ಬಹಿರಂಗಗೊಳ್ಳುತ್ತಿದ್ದಂತೆಯೇ ಆತಂಕ ಹೆಚ್ಚಿದ್ದು, ಸೋಂಕಿತರ ಸಂಪರ್ಕಕ್ಕೊಳಗಾದವರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವುದರ ಜತೆಗೆ ಪರೀಕ್ಷೆಗೊಳಪಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಕೋವಿಡ್ ಸಹಾಯವಾಣಿ 1077ಗೆ ಕರೆ ಮಾಡಿ ತಮ್ಮ ವಿವರ ನೀಡಬೇಕು. ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೊಳಪಡಬೇಕು ಎಂದು ಡಿಸಿ ದೀಪಾ ಚೋಳನ್ ಮನವಿ ಮಾಡಿದ್ದಾರೆ. ಮೇ 7-14, ಮೇ 8-27, ಮೇ 9-155, ಮೇ 10-50, ಮೇ 11-167, ಮೇ 12-162 ಮತ್ತು ಮೇ 13 ರಂದು 90 ಜನ ಸೇರಿದಂತೆ ಮೇ 7ರಿಂದ ಮೇ 13ರವರೆಗೆ ಒಟ್ಟು 665 ಜನರು ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ್ದಾರೆ. ಈ ಪೈಕಿ ಆಂಧ್ರಪ್ರದೇಶ-38, ಗೋವಾ-168, ಗುಜರಾತ-46, ಕೇರಳ-2, ಮಹಾರಾಷ್ಟ್ರ-296, ರಾಜಸ್ಥಾನ-14, ತಮಿಳುನಾಡು-51, ತೆಲಂಗಾಣ-41, ಮಧ್ಯಪ್ರದೇಶ-2, ಉತ್ತರ ಪ್ರದೇಶ ರಾಜ್ಯದಿಂದ 7 ಜನರು ಜಿಲ್ಲೆಗೆ ಬಂದಿಳಿದ್ದಾರೆ. ಇದರಲ್ಲಿ 223 ಜನರನ್ನು ಹೊಟೇಲ್ ಕಾರಂಟೈನ್‌ಗೊಳಪಡಿಸಿದ್ದರೆ 442 ಜನರನ್ನು ಸಾಂಸ್ಥಿಕ ಕಾರಂಟೈನ್‌ಗೊಳಪಡಿಸಿದ್ದು, ಈ ಪೈಕಿ 103 ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.