Advertisement

ಸ್ಟಾರ್ಟ್‌ಅಪ್‌ಗೆ ಉತ್ತೇಜನ ರಾಜ್ಯಕ್ಕೆ ಅಗ್ರಸ್ಥಾನ

09:12 PM Jul 04, 2022 | Team Udayavani |

ಬೆಂಗಳೂರು: ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹದಾಯಕ ವಾತಾವರಣ ಕಲ್ಪಿಸುವಲ್ಲಿ ಕರ್ನಾಟಕ ಮತ್ತು ಗುಜರಾತ್‌ಗೆ ಅಗ್ರ ಸ್ಥಾನ ಸಿಕ್ಕಿದೆ.

Advertisement

ಕೇಂದ್ರ ಸರಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ವಿಭಾಗ (ಡಿಪಿಐಐಟಿ) ಸತತ ಮೂರನೇ ವರ್ಷ ಪ್ರಕಟಿಸುವ ರ್‍ಯಾಂಕಿಂಗ್‌ ಪಟ್ಟಿಯನ್ನು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಬಿಡುಗಡೆ ಮಾಡಿದ್ದಾರೆ.

ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಮೇಘಾಲಯ ಉತ್ತಮ ಸಾಧಕ ರಾಜ್ಯ ಎಂಬ ಗರಿಮೆಗೆ ಭಾಜನವಾಗಿದೆ.

ಸತತ ಮೂರನೇ ಬಾರಿಗೆ ಗುಜರಾತ್‌ಗೆ ಅಗ್ರ ಸ್ಥಾನ ಸಿಕ್ಕಿದೆ. ಕರ್ನಾಟಕದಲ್ಲಿ ರಾಜ್ಯ ಸರಕಾರ ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕಾಗಿ 12 ಕಾರ್ಯಕ್ರಮಗಳನ್ನು ಆಯೋಜನೆ ಮಾಡಿತ್ತು. ಅದರಲ್ಲಿ ಸರಕಾರದ ಹತ್ತು ಇಲಾಖೆಗಳು ಮತ್ತು ಇಪ್ಪತ್ತು ಸ್ಟಾರ್ಟ್‌ಅಪ್‌ಗಳು ಭಾಗವಹಿಸಿದ್ದವು.

ಅತ್ಯುತ್ತಮ ಸಾಧಕರು, ಉತ್ತಮ ಸಾಧಕರು, ನಾಯಕರು, ಮಹತ್ವಾಕಾಂಕ್ಷೆಯ ನಾಯಕರು ಮತ್ತು ಹೊಸ ಸ್ಟಾರ್ಟ್‌ಅಪ್‌ ವ್ಯವಸ್ಥೆಗಳು ಎಂಬ ಐದು ವರ್ಗೀಕರಣದ ವ್ಯಾಪ್ತಿಯಲ್ಲಿ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 26 ಕಾರ್ಯ ಯೋಜನೆಗಳ ಅನ್ವಯ ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿ ರಾಜ್ಯಗಳು ಸಾಧನೆಯನ್ನು ಪರಿಶೀಲಿಸಲಾಗಿದೆ.

Advertisement

ದೇಶದಲ್ಲಿ 70,809 ಸ್ಟಾರ್ಟ್‌ಅಪ್‌ ಗಳಿವೆ ಎಂದು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ. ಕೇರಳ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಜಮ್ಮು ಮತ್ತು ಕಾಶ್ಮೀರಗಳನ್ನು ಅತ್ಯುತ್ತಮ ಸಾಧಕ ರಾಜ್ಯಗಳ ಸಾಲಿಗೆ ಸೇರಿಸಲಾಗಿದೆ.

ಸ್ಟಾರ್ಟ್‌ಅಪ್‌ ಕ್ಷೇತ್ರಗಳಿಗೆ ರಾಜ್ಯ ಸರಕಾರ ನೆರವು ನೀಡಿದೆ. ಅದನ್ನು ಹಲವರು ಸದುಪಯೋಗಿಸಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ಸ್‌ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನ ಕ್ಷೇತ್ರಗಳಿಗೆ ಸಂಬಂಧಿಸಿ ವಿಶೇಷ ಪ್ರೋತ್ಸಾಹ ನೀಡಲಿದೆ.
ಡಾ| ಸಿ.ಎನ್‌.ಅಶ್ವತ್ಥ ನಾರಾಯಣ, ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ. ಸಚಿವ

Advertisement

Udayavani is now on Telegram. Click here to join our channel and stay updated with the latest news.

Next