Advertisement

ಗುಜರಾತ್‌ ಚುನಾವಣೆ : ಚುನಾವಣಾ ಆಯೋಗದಿಂದ ಡೇಟ್‌ ಫಿಕ್ಸ್‌

01:48 PM Oct 25, 2017 | Team Udayavani |

ಹೊಸದಿಲ್ಲಿ: ಇಡೀ ದೇಶವೇ ಕುತೂಹಲದಿಂದ ಎದುರುನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್‌ನ ವಿಧಾನಸಭೆಗೆ ನಡೆಯುವ ಚುನಾವಣೆಗೆ ಬುಧವಾರ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿದ್ದು, 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

Advertisement

ಮುಖ್ಯ ಚುನಾವಣಾ ಆಯುಕ್ತ ಅಚಲ್‌ ಕುಮಾರ್‌ ಜೋತಿ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕವನ್ನು ಘೋಷಿಸಿದರು. 

ಡಿಸೆಂಬರ್‌ 9 ರಂದು ಮೊದಲ ಹಂತದಲ್ಲಿ , ಡಿ.14ಕ್ಕೆ 2 ನೇ ಹಂತದ ಚುನಾವಣೆ ನಡೆಯಲಿದ್ದು, 18 ಕ್ಕೆ ಫ‌ಲಿತಾಂಶ ಪ್ರಕಟವಾಗಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. 

182 ಸದಸ್ಯ ಬಲದ ವಿಧಾನ ಸಭೆಗೆ  2012 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದು ಪ್ರಚಂಡ ವಿಜಯ ಸಾಧಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next