ಹುಬ್ಬಳ್ಳಿ: ಇನ್ ಲೈನ್ ಸ್ಕೇಟಿಂಗ್ ಮಾಡುತ್ತಾ ಮೂರು ಹುಲಾಹೂಪಗಳನ್ನು ತಿರುಗಿಸುವುದರೊಂದಿಗೆ 100 ಮೀ. ದೂರವನ್ನು 23.45 ಸೆಕೆಂಡ್ ಗಳಲ್ಲಿ ಕ್ರಮಿಸಿ ಹತ್ತು ವರ್ಷದ ಪೋರಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ.
ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸ್ತುತಿ ಕುಲಕರ್ಣಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ.
ಇಲ್ಲಿನ ಶಿರೂರು ಪಾರ್ಕ್ ನಿವಾಸಿಗಳಾದ ಕಿಶೋರ ಕುಲಕರ್ಣಿ, ರಶ್ಮಿ ಕುಲಕರ್ಣಿ ಅವರ ಪುತ್ರಿಯಾದ ಸ್ತುತಿ ಇದೇ ಕ್ರೀಡೆಯಲ್ಲಿ ಹಲವು ದಾಖಲೆ ಮಾಡಿದ್ದಾಳೆ.
2021ಜನವರಿ 8 ರಂದು ಶಿರೂರು ಪಾರ್ಕ್ ರಸ್ತೆಯಲ್ಲಿ ಗಿನ್ನಿಸ್ ರೆಕಾರ್ಡ್ ಗಾಗಿ ಓಟದ ಕಾರ್ಯಕ್ರಮ ನಡೆದಿತ್ತು. ಸ್ಥಳೀಯ ನಿರ್ಣಾಯಕರು, ಅಧೀಕೃತ ಟೈಮ್ ಕೀಪರ್ ಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು. ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಹಾಗೂ ವಿಡಿಯೋ ತುಣಕುಕಗಳನ್ನು ಕಳುಹಿಸಲಾಗಿತ್ತು. ಸಂಪೂರ್ಣ ಮಾಹಿತಿ ಪರಿಶೀಲಿಸಿ ದಾಖಲೆ ಪ್ರದಾನ ಮಾಡಲಾಗಿದೆ.
ಗಿನ್ನಿಸ್ ದಾಖಲೆ ಮಾಡಿರುವ ಸ್ತುತಿ ಕುಲಕರ್ಣಿ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಏಷಿಯಾ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ, ಅಮೇಜಿಂಗ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ತನ್ನದಾಗಿಸಿಕೊಂಡಿದ್ದಾಳೆ.