Advertisement
ಹೀಗಾಗಿ ಜು.15ರ ವೇಳೆಗೆ ಸರಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡವರಲ್ಲಿ ಶೇ.50ರಷ್ಟು ಮಂದಿ ರಾಜ್ಯ ಸರಕಾರದ ಆದೇಶದಿಂದ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ರಾಜ್ಯದ ಸರಕಾರಿ ಪದವಿ ಕಾಲೇಜುಗಳಿಗೆ ಈಗಾಗಲೇ ಖಾಯಂ ಉಪನ್ಯಾಸಕರನ್ನು ನೇಮಿಸಿರುವ ಸರಕಾರ, ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಅತಿಥಿ ಉಪನ್ಯಾಸಕರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಅತಿಥಿ ಉಪ ನ್ಯಾಸಕರ ಭವಿಷ್ಯ ಅತಂತ್ರ ಸ್ಥಿತಿಗೆ ತಲು ಪಿರುವ ಜತೆಗೆ, ವಿದ್ಯಾರ್ಥಿಗಳಿಗೂ ಪಾಠ ಇಲ್ಲದಂತಾಗಿದೆ.
2013ರಲ್ಲಿ ನೇಮಕಗೊಂಡ ಅತಿಥಿ ಉಪ ನ್ಯಾಸಕರನ್ನು ಹಲವು ಗೊಂದಲಗಳ ಮಧ್ಯೆ 2016-17ನೇ ಶೈಕ್ಷಣಿಕ ವರ್ಷದ ವರೆಗೆ ಮುಂದುವರಿಸಿತ್ತು. ಆದರೆ ಈ ಶೈಕ್ಷಣಿಕ ವರ್ಷದಿಂದ ತನ್ನ ನಿಯಮದಲ್ಲಿ ಬದ ಲಾವಣೆ ಮಾಡಿಕೊಂಡು ಅತಿಥಿ ಉಪ ನ್ಯಾಸಕರ ನೇಮಕಾತಿಗಾಗಿ ಜೂ. 23ಕ್ಕೆ ಸುತ್ತೋಲೆ ಯೊಂದನ್ನು ಹೊರಡಿಸಿತ್ತು. ಇದರಲ್ಲಿ ಕೆಲವೊಂದು ಅರ್ಹತೆಗಳನ್ನು ನೀಡ ಲಾಗಿದ್ದು, ಅವರು ಪಡೆದ ಅಂಕಗಳಿಗೆ ಗರಿಷ್ಠ 40 ಅಂಕಗಳು, ಪಿಎಚ್‌ಡಿ/ಎನ್‌ಇಟಿ/ಎಸ್‌ಎಲ್‌ಇಟಿ ಪಡೆದವರಿಗೆ 30 ಅಂಕಗಳು, ಪ್ರತಿ ವರ್ಷಕ್ಕೆ 3 ಅಂಕಗಳಂತೆ 10 ವರ್ಷ ಅನುಭವ ಪಡೆದವರಿಗೆ ಗರಿಷ್ಠ 30 ಅಂಕಗಳನ್ನು ನೀಡಿ ಒಟ್ಟು 100 ಅಂಕಗಳಲ್ಲಿ ಆಯ್ಕೆಪ್ರಕ್ರಿಯೆ ನಡೆಸಿತ್ತು.
Related Articles
Advertisement
ಆ ಸುತ್ತೋಲೆಯ ಪ್ರಕಾರ ಅಭ್ಯರ್ಥಿಯ ಅರ್ಹತೆಗೆ ಆತ ಪಡೆದ ಅಂಕಗಳಲ್ಲಿ ಶೇ. 50 ಅನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಗರಿಷ್ಠ 50 ಅಂಕಗಳು, ಪಿಎಚ್‌ಡಿಗೆ 15 ಅಂಕ, ಎನ್‌ಇಟಿ/ಎಸ್‌ಎಲ್‌ಇಟಿಗೆ 12 ಅಂಕ, ಎಂ.ಫಿಲ್ ಪಡೆದವರಿಗೆ 8 ಅಂಕ, ಪ್ರತಿ ವರ್ಷಕ್ಕೆ 3 ಅಂಕಗಳಂತೆ 5 ವರ್ಷ ಅನುಭವ ಪಡೆ ದವರಿಗೆ ಗರಿಷ್ಠ 15 ಅಂಕ ನೀಡಿ ಒಟ್ಟು 100 ಅಂಕಗಳಲ್ಲಿ ಮತ್ತೆ ಆಯ್ಕೆಪ್ರಕ್ರಿಯೆ ನಡೆಸಿದೆ.
ಈ ಸುತ್ತೋಲೆಯ ಪ್ರಕಾರ ಹಿಂದೆ ನೇಮಕಗೊಂಡವ ರಲ್ಲಿ ಶೇ. 50ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
250 ಖಾಯಂ ಉಪನ್ಯಾಸಕರು ದ.ಕ., ಕೊಡಗು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ 37 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಇಲ್ಲಿಗೆ ಸುಮಾರು 250 ಮಂದಿ ಖಾಯಂ ಉಪನ್ಯಾಸಕರು ಆಗಮಿಸಲಿದ್ದಾರೆ. ಇವರು ಅತಿಥಿ ಉಪನ್ಯಾಸಕರಿಗಿಂತ ಎರಡು ಪಟ್ಟು ಅಂದರೆ ವಾರದಲ್ಲಿ 16 ಗಂಟೆ ಪಾಠ ಮಾಡ ಬೇಕಾಗುತ್ತದೆ. ಹೀಗಾಗಿ ಇಬ್ಬರು ಅತಿಥಿ ಉಪನ್ಯಾಸಕರ ಜವಾಬ್ದಾರಿಯನ್ನು ಖಾಯಂ ಉಪನ್ಯಾಸಕರು ನಿರ್ವಹಿಸಲಿದ್ದು, ಅತಿಥಿ ಉಪನ್ಯಾಸಕರ ಸಂಖ್ಯೆ ಅರ್ಧದಷ್ಟು ಇಳಿಕೆ ಯಾಗಲಿದೆ. ದ.ಕ.ದಲ್ಲಿ ಒಟ್ಟು 19 ಸ. ಪ್ರಥಮ ದರ್ಜೆ ಕಾಲೇಜುಗಳಿದ್ದು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ 641 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸರಕಾರ ಎ, ಬಿ, ಸಿ ವಲಯಗಳನ್ನಾಗಿ ವಿಭಾಗಿಸಿರುತ್ತದೆ. ಅಂದರೆ ಎ ವಲಯದ ಕಾಲೇಜು ನಗರದ ಕಾಲೇಜುಗಳಾಗಿದ್ದು, ಸಿ ವಲಯ ಗ್ರಾಮೀಣ ಭಾಗದ ಕಾಲೇಜಾಗಿರುತ್ತದೆ. ಪ್ರಸ್ತುತ ಸರಕಾರವು ಸಿ ವಲಯದ ಉಪನ್ಯಾಸಕರನ್ನು ಉಳಿದ ವಲಯಕ್ಕೆ ವರ್ಗಾವಣೆಗೊಳಿ ಸಿದ್ದು, ಹೊಸ ಖಾಯಂ ಉಪನ್ಯಾಸಕರನ್ನು ಸಿ ವಲಯಕ್ಕೆ ನೇಮಕಗೊಳಿಸುತ್ತದೆ. ಆ.10ರೊಳಗೆ ನೇಮಕ
ನಮ್ಮ ವ್ಯಾಪ್ತಿಯ 37 ಸರಕಾರಿ ಕಾಲೇಜುಗಳಿಗೆ ಸುಮಾರು 250 ಖಾಯಂ ಉಪನ್ಯಾಸಕರ ಮರು ನೇಮಕವಾಗಲಿದ್ದು, ಉಳಿದಂತೆ ಸುಮಾರು 300ರಷ್ಟು ಅತಿಥಿ ಉಪನ್ಯಾಸಕರ ನೇಮಕವಾಗಬಹುದು. ಆ. 10 ರೊಳಗೆ ಖಾಯಂ ಉಪನ್ಯಾಸಕರ ನೇಮಕವಾಗಲಿದೆ. ಉಳಿದ ಹುದ್ದೆಗಳನ್ನು ಅತಿಥಿ ಉಪನ್ಯಾಸಕರು ತುಂಬಲಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕ ಪಡಬೇಕಾಗಿಲ್ಲ.
– ಡಾ| ಉದಯಶಂಕರ್
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಮಂಗಳೂರು ವಿಭಾಗ – ಕಿರಣ್ ಸರಪಾಡಿ