Advertisement
ಲಾಕ್‌ಡೌನ್ ಜಾರಿಯಾದ ಮೂರು ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು, ಮಂಡ್ಯದ ಮಳವಳ್ಳಿ ತಾಲೂಕಿನ ಒಂದೇ ಕಾಲೇಜಿನ ಇಬ್ಬರು ಹಾಗೂ ದೇವದುರ್ಗ ತಾಲೂಕಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗಳಿಂದ ಮನನೊಂದಿರುವ ಖಾಯಂ ಶಿಕ್ಷಕರು ಈ ತೀರ್ಮಾನಕ್ಕೆ ಬಂದಿದ್ದಾರೆ.
ರಾಜ್ಯದ ಸರಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು ಮೂರು ಸಾವಿರ ಅತಿಥಿ ಉಪನ್ಯಾಸಕರಿಗೆ ಫೆಬ್ರವರಿ ತಿಂಗಳಿನಿಂದಲೇ ಗೌರವಧನ ನೀಡಲಾಗಿಲ್ಲ. 3 ಕೋ.ರೂ. ಸಂಗ್ರಹ ನಿರೀಕ್ಷೆ
ರಾಜ್ಯದ ಸರಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿರುವ ಖಾಯಂ ಉಪನ್ಯಾಸಕರ ಒಂದು ದಿನದ ವೇತನ ಸುಮಾರು 3 ಕೋಟಿ ರೂಪಾಯಿ ಆಗಲಿದೆ. ಆದರೆ ಎಲ್ಲರೂ ಕಡ್ಡಾಯವಾಗಿ ನೀಡಲೇ ಬೇಕು ಎಂದು ಹೇಳಿಲ್ಲ. ಸ್ವಇಚ್ಛೆ ಯಿಂದ ನೀಡುವುದರಿಂದ ಇಷ್ಟೇ ಹಣ ಸಂಗ್ರಹವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ಸಂಗ್ರಹವಾಗುವ ಅನುದಾನವನ್ನು ಎಲ್ಲ ಅತಿಥಿ ಉಪನ್ಯಾಸಕರಿಗೂ ಸಮನಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಅವರು ಮಾಹಿತಿ ನೀಡಿದ್ದಾರೆ.
Related Articles
ರಾಜ್ಯದಲ್ಲಿ 1,250 ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ 739 ಅನುದಾನಿತ ಪದವಿಪೂರ್ವ ಕಾಲೇಜು ಗಳಿದ್ದು, ಸುಮಾರು 17 ಸಾವಿರ ಖಾಯಂ ಉಪ ನ್ಯಾಸಕ ರಿದ್ದಾರೆ. ತಮ್ಮ ಒಂದು ದಿನದ ವೇತನ ವನ್ನು “ಸ್ವ ಇಚ್ಛೆ’ ಯಿಂದ ಎಚ್‌ಆರ್‌ಎಂಎಸ್ ವ್ಯವಸ್ಥೆ ಯಲ್ಲೇ ಕಡಿತಗೊಳಿಸಿ, ಪಿಯು ಇಲಾಖೆಯ ನಿರ್ದೇಶಕರ ಮೂಲಕ ರಾಜ್ಯದ ವಿವಿಧ ಸರಕಾರಿ ಹಾಗೂ ಅನು ದಾನಿತ ಕಾಲೇಜುಗಳಲ್ಲಿ ಸೇವೆ ಸಲ್ಲಿಸು ತ್ತಿರುವ ಎಲ್ಲ ಅತಿಥಿ ಉಪನ್ಯಾಸಕ ರಿಗೂ ಸಮನಾಗಿ ಹಂಚಿಕೆ ಮಾಡಲು ಸಂಘವು ನಿರ್ಧರಿಸಿದೆ.
Advertisement
ಸರಕಾರಕ್ಕೆ ಮನವಿಅತಿಥಿ ಉಪನ್ಯಾಸಕರಿಗೆ ಅಗತ್ಯ ಕನಿಷ್ಠ ಸೌಲಭ್ಯವನ್ನು ಒದಗಿಸುವಂತೆ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿಕೊಂಡಿ ದ್ದೇವೆ. ಆದರೆ ಯಾವುದೇ ಭರವಸೆ ಸಿಕ್ಕಿರಲಿಲ್ಲ. ನಾಲ್ಕೈದು ತಿಂಗಳು ವೇತನ ಇಲ್ಲದೆ ಜೀವನ ಅತಿಕಷ್ಟ. ವರ್ಷಪೂರ್ತಿ ನಮ್ಮೊಂದಿಗೆ ಇರುವ ಅತಿಥಿ ಉಪ ನ್ಯಾಸಕರನ್ನು ಸಂಕಷ್ಟ ಕಾಲದಲ್ಲಿ ಕೈಬಿಡುವುದು ಸರಿ ಯಲ್ಲ ಎಂಬ ಸದಾಶಯ ನಮ್ಮದು. ಒಂದು ದಿನದ ವೇತನವನ್ನು ಇಲಾಖೆಯ ನಿರ್ದೇಶಕರ ಮುಖೇನ ಜಿಲ್ಲಾ ಉಪನಿರ್ದೇಶಕರಿಗೆ ರವಾನೆ ಮಾಡಿ, ಅಲ್ಲಿಂದ ನೇರವಾಗಿ ಅತಿಥಿ ಉಪನ್ಯಾಸಕರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು.
– ಎ.ಎಚ್. ನಿಂಗೇಗೌಡ
ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ