Advertisement

Guarantee Schemes ಹೊಟ್ಟೆ ತುಂಬಿದವರಿಗಲ್ಲ, ಹಸಿದವರಿಗೆ: ಸಚಿವ ತಂಗಡಗಿ

12:56 PM Dec 01, 2023 | Team Udayavani |

ಕೊಪ್ಪಳ: ನಾರಾಯಣ ಮೂರ್ತಿ, ಮೋದಿ ಬದುಕುವುದಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಬಡವರು, ಜನ ಸಾಮಾನ್ಯರು ಬದುಕಬೇಕಾಗಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆ ನೀಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾರಾಯಣ ಮೂರ್ತಿ ಅವರು ಗ್ಯಾರಂಟಿ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಹೊಟ್ಟೆ ತುಂಬಿದವರಿಗೆ ಈ ಯೋಜನೆ ಕೊಟ್ಟಿಲ್ಲ. ಬಡವರಿಗೆ ಹಸಿದವರಿಗೆ ಯೋಜನೆ ಕೊಡುವೆವು ಎಂದಿದ್ದೇವು ಈಗ ಜಾರಿ ಮಾಡಿದ್ದೇವೆ ಎಂದರು.

ತೆಲಂಗಾಣದಲ್ಲಿ ಕಾಂಗ್ರೆಸ್ 72 ಸ್ಥಾನ ಗೆಲ್ಲಲಿದೆ. ತೆಲಂಗಾಣದಲ್ಲಿ ಆರು ಗ್ಯಾರಂಟಿ ಯೋಜ‌ನೆ ಘೋಷಣೆ ಮಾಡಲಾಗಿದೆ. ಜನರಿಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸವಿದೆ. ಜನ ಕಾಂಗ್ರೆಸ್ ಪರವಾಗಿ ಇದ್ದಾರೆ. ಚುನಾವಣೋತ್ತರ ಸಮಿಕ್ಷೆಗಳು ಇದ್ದರೂ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಿತ್ತಿಕೊಂಡು ಹೋಗುತ್ತದೆ ಎಂದರು.

ಕಾಂಗ್ರೆಸ್ಸಿಗೆ ನೆಲೆ ಇಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಈಶ್ವರಪ್ಪ ಶಿವಮೊಗ್ಗದಲ್ಲಿ ನೆಲೆ ಕಂಡುಕೊಳ್ಳಲಿ. ಅವರಿಗೆ ಟಿಕೆಟ್ ಇಲ್ಲ. ಇನ್ನೇನು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ಜನಾರ್ದನ ರೆಡ್ಡಿ ಸೋನಿಯಾ ಗಾಂಧಿಗೆ ನಾನು ತಲೆ ಬಾಗುವುದಿಲ್ಲ ಎಂಬ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ ನಾವೇನು ಅವರಿಗೆ ತಲೆ ಬಾಗು ಎಂದು ಹೇಳಿಲ್ಲ. ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದುಕೊಂಡಿದ್ದಾರೆ ಎಂದರು.

Advertisement

ಡಿಕೆ ಶಿವಕುಮಾರ್ ವಿರುದ್ದ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಹಿಂದಿನ ಬಿಜೆಪಿಯವರು ಕ್ರಮ ಬದ್ದವಾಗಿ ಸಿಬಿಐಗೆ ವಹಿಸಿದ್ದಿಲ್ಲ. ಸಚಿವ ಸಂಪುಟದಲ್ಲಿ ಈ ಕುರಿತು ಕೂಲಂಕೂಷವಾಗಿ ಚರ್ಚೆ ಮಾಡಿ ಪ್ರಕರಣ ವಾಪಾಸ್ ಪಡೆಯಲು ನಿರ್ಧರಿಸಲಾಗಿದೆ ಎಂದರು.

ನಾಗೇಂದ್ರ ಬಗ್ಗೆ ಜನಾರ್ದನ ರೆಡ್ಡಿ ಹೇಳಿಕೆ ವಿಚಾರ, ರೆಡ್ಡಿ ನಾಗೇಂದ್ರ ಪ್ರಕರಣದಿಂದಾರೂ ಬಚಾವಾಗಬಹುದು ಎಂದುಕೊಂಡಿದ್ದಾರೆ ಎಂದರು.

ತುಂಗಭದ್ರಾ ಜಲಾಶಯದಿಂದ ಆಂಧ್ರಕ್ಕೆ ನದಿ ಮೂಲಕ ನೀರು ಬಿಟ್ಟಿರುವ ವಿಚಾರ, ಆಂಧ್ರದವರು ತಮ್ಮ ಕೋಟಾ ನೀರು ತೆಗೆದುಕೊಂಡು ಹೋಗಿದ್ದಾರೆ. ಈಗ ಜಲಾಶಯಕ್ಕೆ ಒಳಹರಿವು ಇಲ್ಲ. ಒಳಹರಿವು ಬಂದ ನಂತರ ವಿಜಯನಗರ ಕಾಲುವೆಗಳಿಗೆ ನೀರು ಬಿಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಗಂಗಾವತಿಯಲ್ಲಿ ಮುಸ್ಲಿಂ ಅಂಧ ವೃದ್ಧೆಗೆ ಜೈ ಶ್ರೀರಾಮ ಎಂದು ಹೇಳಲು ಒತ್ತಾಯಿಸಿ ಹಲ್ಲೆ ಮಾಡಿರುವ ಪ್ರಕರಣ ಈ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಎಸ್ಪಿಯವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಹಲ್ಲೆ ಮಾಡಿದವರ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next