Advertisement
ಚೆನ್ನೈ ಸೂಪರ್ ಕಿಂಗ್ಸ್ 11ರಲ್ಲಿ 6 ಪಂದ್ಯ ಗೆದ್ದರೂ ಇನ್ನೂ ಪ್ಲೇ ಆಫ್ ಪ್ರವೇಶವನ್ನು ಅಧಿಕೃತಗೊಳಿಸಿಲ್ಲ. ಗುಜರಾತನ್ನು ಮಣಿಸಿದರೆ ಅಂಕಪಟ್ಟಿ ಯಲ್ಲಿ ಹೈದರಾಬಾದನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರುವ ಅವಕಾಶ ಇದೆ. ಹೀಗಾಗಿ ಈ ಪಂದ್ಯವನ್ನು ಕಳೆದು ಕೊಳ್ಳಲು ಚೆನ್ನೈ ಯಾವ ಕಾರಣಕ್ಕೂ ಬಯಸದು.
Related Articles
Advertisement
ಪ್ರಧಾನ ವೇಗಿ ಮೊಹಮ್ಮದ್ ಶಮಿ ಗಾಯಾಳಾಗಿ ಕೂಟದಿಂದ ಹೊರ ಬಿದ್ದದ್ದು ಗುಜರಾತ್ ವೈಫಲ್ಯಕ್ಕೆ ಮುಖ್ಯ ಕಾರಣ. ಇದರಿಂದ ತಂಡದ ಬೌಲಿಂಗ್ ಫೈರ್ ಪವರ್ ಗೋಚರಿಸುತ್ತಿಲ್ಲ. ಮೋಹಿತ್ ಶರ್ಮ, ಜೋಶ್ ಲಿಟ್ಲ ಅವರಿಂದ ಪವರ್ ಪ್ಲೇಯಲ್ಲಿ ಧಾರಾಳ ರನ್ ಸೋರಿ ಹೋಗುತ್ತಿದೆ.
ಶುಭಮನ್ ಗಿಲ್ ಅವರಿಗೆ ನಾಯಕತ್ವ ಖಂಡಿತವಾಗಿಯೂ ಹೊರೆಯಾಗಿದೆ. ಇದು ಅವರ ಬ್ಯಾಟಿಂಗ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಳೆದ 5 ಪಂದ್ಯಗಳಲ್ಲಿ ಗಿಲ್ ಅವರ ಗರಿಷ್ಠ ಗಳಿಕೆ 35 ರನ್ ಎಂಬುದು ಇದಕ್ಕೆ ಸಾಕ್ಷಿ!
ತಂಡದ ಪ್ರಮುಖ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಶಾರುಕ್ ಖಾನ್ ಕೂಡ ರನ್ ಬರಗಾಲದಲ್ಲಿದ್ದಾರೆ.
ಸೀಮಿತ ಸಂಪನ್ಮೂಲದ ಚೆನ್ನೈ:
ಚೆನ್ನೈ ಕೂಡ ಒಂದು ಪರಿಪೂರ್ಣ ತಂಡವಾಗಿ ಉಳಿದಿಲ್ಲ. ಮುಖ್ಯವಾಗಿ ತಂಡದ ಬೌಲಿಂಗ್ ವಿಭಾಗದ ಶಕ್ತಿ ಗುಂದಿದೆ. ದೀಪಕ್ ಚಹರ್, ಮತೀಶ ಪತಿರಣ ಗಾಯಾಳಾಗಿ ಕೂಟದಿಂದಲೇ ಬೇರ್ಪಟ್ಟಿದ್ದಾರೆ. ಮುಸ್ತಫಿಜುರ್ ರೆಹಮಾನ್ ಮರಳಿ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ. ರವೀಂದ್ರ ಜಡೇಜ, ತುಷಾರ್ ದೇಶಪಾಂಡೆ ಅವರ ಸ್ಪಿನ್ ಮ್ಯಾಜಿಕ್ ನಡೆಯುತ್ತಿಲ್ಲ. ಸ್ಯಾಂಟ್ನರ್, ಮೊಯಿನ್ ಅಲಿ ಈವರೆಗೆ ಘಾತಕವಾಗೇನೂ ಪರಿಣಮಿಸಿಲ್ಲ. ಆದರೂ ಪಂಜಾಬ್ ವಿರುದ್ಧ ಧರ್ಮಶಾಲಾದಲ್ಲಿ 167 ರನ್ ಉಳಿಸಿಕೊಂಡ ಹೆಗ್ಗಳಿಕೆ ಚೆನ್ನೈ ತಂಡದ್ದು. ಅರ್ಥಾತ್, ಸೀಮಿತ ಸಂಪನ್ಮೂಲವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ಸು ಕಾಣಬಹುದು ಎಂಬ ಸಂಗತಿ ಚೆನ್ನೈಗೆ ಚೆನ್ನಾಗಿ ತಿಳಿದಿದೆ.
ಮುಖ್ಯವಾಗಿ ನಾಯಕ ಋತುರಾಜ್ ಗಾಯಕ್ವಾಡ್ ಸ್ವತಃ ಮುಂಚೂಣಿಯಲ್ಲಿ ನಿಂತು ತಂಡಕ್ಕೆ ಉಪಯುಕ್ತ ಮಾರ್ಗದರ್ಶನ ಒದಗಿಸುತ್ತಲೇ ಇದ್ದಾರೆ. ಹೀಗಾಗಿ ಈ ಸೀಸನ್‌ನಲ್ಲಿ ಚೆನ್ನೈ ಮತ್ತೂಮ್ಮೆ ಗುಜರಾತ್ ವಿರುದ್ಧ ಗೆದ್ದು ಬಂದರೆ ಅಚ್ಚರಿಯೇನಿಲ್ಲ.
ಮೊದಲ ಸುತ್ತಿನಲ್ಲಿ…
ಮಾ. 26ರಂದು ಚೆನ್ನೈಯಲ್ಲಿ ಆಡಲಾದ ಮೊದಲ ಸುತ್ತಿನ ಪಂದ್ಯ ದಲ್ಲಿ ಸಿಎಸ್‌ಕೆ 63 ರನ್ನು ಗಳ ಭಾರೀ ಅಂತರದಿಂದ ಜಯ ಸಾಧಿಸಿತ್ತು. ಇದು ರನ್ ಅಂತರದಲ್ಲಿ ಗುಜರಾತ್ ಅನುಭವಿಸಿದ ದೊಡ್ಡ ಸೋಲಾಗಿತ್ತು.
ಚೆನ್ನೈ 6 ವಿಕೆಟಿಗೆ 206 ರನ್ ಬಾರಿ ಸಿದರೆ, ಗುಜರಾತ್ 8 ವಿಕೆಟಿಗೆ 143 ರನ್ ಮಾಡಿ ಶರಣಾ ಗಿತ್ತು. ಸಿಎಸ್‌ಕೆ ಪರ ಶಿವಂ ದುಬೆ 51, ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ತಲಾ 46 ರನ್ ಮಾಡಿದ್ದರು. ಬಳಿಕ ದೀಪಕ್ ಚಹರ್, ಮುಸ್ತಫಿಜುರ್ ರೆಹಮಾನ್ ಮತ್ತು ತುಷಾರ್ ದೇಶ ಪಾಂಡೆ ಸೇರಿಕೊಂಡು ಘಾತಕ ಬೌಲಿಂಗ್ ದಾಳಿ ನಡೆಸಿದ ಪರಿ ಣಾಮ ಗಿಲ್ ಪಡೆಗೆ ಎದ್ದು ನಿಲ್ಲಲಾಗಲಿಲ್ಲ. 37 ರನ್ ಮಾಡಿದ ಸಾಯಿ ಸುದರ್ಶನ್ ಅವರದೇ ಹೆಚ್ಚಿನ ಗಳಿಕೆ ಆಗಿತ್ತು.