Advertisement

Cancer ಔಷಧದ ಮೇಲಿನ ಜಿಎಸ್‌ಟಿ ಶೇ.5ಕ್ಕೆ ಇಳಿಕೆ : ನಿರ್ಧಾರಗಳೇನು?

01:14 AM Sep 10, 2024 | Team Udayavani |

ಹೊಸದಿಲ್ಲಿ: ಕ್ಯಾನ್ಸರ್‌ ಔಷಧದ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ ನಮ್‌ಕೀನ್‌ (ಕುರುಕುಲು ತಿಂಡಿ) ಮೇಲಿನ ತೆರಿಗೆಯನ್ನು ಕಡಿತ ಮಾಡಿದೆ.

Advertisement

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ 54ನೇ ಜಿಎಸ್‌ಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಯಾನ್ಸರ್‌ ರೋಗಿಗಳ ವೆಚ್ಚವನ್ನು ಕಡಿತ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಹೇಳಿದ್ದಾರೆ.

ಇದಲ್ಲದೆ, ಆನ್‌ಲೈನ್‌ ಜೂಜಿನ ಮೇಲಿನ ಜಿಎಸ್‌ಟಿಯಿಂದ ಲಾಭವನ್ನು ಸಭೆಗೆ ತಿಳಿಸಲಾಯಿತು. ವೈದ್ಯಕೀಯ ವಿಮೆಯ ಮೇಲಿನ ತೆರಿಗೆ ತೆಗೆಯುವ ನಿರ್ಧಾರವನ್ನು ನವೆಂಬರ್‌ನಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗಿದೆ.

ನಿರ್ಧಾರಗಳೇನು ?
ವೈದ್ಯಕೀಯ ವಿಮೆ ತೆರಿಗೆ ಮುಕ್ತ: ನವೆಂಬರ್‌ನಲ್ಲಿ ನಿರ್ಧಾರ
ವಿದೇಶಿ ವಿಮಾನ ಸೇವೆಗಳು ತೆರಿಗೆ ಮುಕ್ತ
ಸರಕಾರ ಸ್ಥಾಪಿತ ವಿವಿಗಳಿಗೆ ತೆರಿಗೆ ವಿನಾಯ್ತಿ
ಸೆಸ್‌ಗೆ ಸಂಬಂಧಿಸಿದಂತೆ ಸಚಿವರ ಸಮಿತಿ ರಚನೆ
ಕಾರ್‌ ಸೀಟ್‌ಗಳ ಮೇಲಿನ ಜಿಎಸ್‌ಟಿ 28% ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next