Advertisement

ಮಾಲ್‌ಗ‌ಳಲ್ಲಿ ಆಗಿಲ್ಲ ಜಿಎಸ್‌ಟಿ ಜಾರಿ!

11:20 AM Jul 11, 2017 | Team Udayavani |

ಬೆಂಗಳೂರು: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿ 10 ದಿನ ಕಳೆದರೂ ಪ್ರತಿಷ್ಠಿತ ಮಾಲ್‌ಗ‌ಳಲ್ಲಿ ಜಿಎಸ್‌ಟಿಯಡಿ ತೆರಿಗೆ ವರ್ಗೀಕರಣ, ಆಯ್ದ ವಿವರ ಸಮರ್ಪಕವಾಗಿ ದಾಖಲಾಗದಿರುವುದು ಬೆಳಕಿಗೆ ಬಂದಿದೆ.

Advertisement

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ನಗರದ ಮಂತ್ರಿಮಾಲ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೇಲ್ಕಂಡ ಅಂಶಗಳು ಕಂಡುಬಂದಿವೆ. ತಕ್ಷಣವೇ ಅಧಿಕಾರಿಗಳು ಮಳಿಗೆದಾರರಿಗೆ ಮಾಹಿತಿ ನೀಡಿ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಮಂತ್ರಿಮಾಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೆಲ ಮಳಿಗೆದಾರರು ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ತೆರಿಗೆ ವಿವರವನ್ನು ಪ್ರತ್ಯೇಕವಾಗಿ ನಮೂದಿಸದಿರುವುದು, ಗಣಕೀಕೃತ ರಸೀದಿಯಲ್ಲಿ ಕೆಲ ವಿವರಗಳನ್ನು ಸಮರ್ಪಕವಾಗಿ ನಮೂದಿಸದಿರುವುದು ಕಂಡುಬಂತು.

ಈ ಬಗ್ಗೆ ಮಳಿಗೆದಾರರಿಗೆ ಅರಿವು ಮೂಡಿಸಲಾಗಿದೆ. ಜಿಎಸ್‌ಟಿಐಎನ್‌ ಸಂಖ್ಯೆಯನ್ನು ದ್ವಿಪ್ರತಿಯಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ. ಪರಿಶೀಲನೆಯ ಮುಖ್ಯ ಉದ್ದೇಶ ಮಳಿಗೆದಾರರಲ್ಲೂ ಜಾಗೃತಿ ಮೂಡಿಸುವುದಾಗಿದ್ದು, ಮುಂದುವರಿಯಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ವಿ. ಮುರಳಿಕೃಷ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next