Advertisement
“ಭಾರತದಲ್ಲಿ ಅತಿ ಹೆಚ್ಚು ಹಣ ಹೂಡಿಕೆ ಯಾಗುವ ಪ್ರಮುಖ ಕ್ಷೇತ್ರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮವೂ ಒಂದು. ಅಷ್ಟೇ ಅಲ್ಲ, ಅತಿ ಹೆಚ್ಚು ತೆರಿಗೆ ಹಣ ಸೋರಿಕೆಯಾಗುವ ಕ್ಷೇತ್ರಗಳ ಸಾಲಲ್ಲೂ ಇದು ಸೇರುತ್ತದೆ. ಹಾಗಾಗಿ ಈ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿ ಯಡಿ ತರಬೇಕೆಂದು ಕೆಲವು ರಾಜ್ಯ ಸರಕಾರಗಳು ಒತ್ತಡ ಹೇರುತ್ತಿವೆ. ಆದರೆ ಕೆಲವು ರಾಜ್ಯಗಳು ಇದನ್ನು ವಿರೋಧಿಸಿವೆ. ಇಬ್ಬರದ್ದೂ ಪ್ರತ್ಯೇಕ ದೃಷ್ಟಿಕೋನಗಳಿವೆ. ಆದ್ದರಿಂದ ನವೆಂಬರ್‌ನಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಎರಡೂ ದೃಷ್ಟಿ ಕೋನಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ಬಳಿಕವೇ ಒಂದು ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಅರುಣ್ ಜೇಟ್ಲಿ ತಿಳಿಸಿದರು.
Related Articles
ಬ್ಯಾಂಕಿಂಗ್ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸುವುದು ಭಾರತ ಸರಕಾರದ ಸದ್ಯದ ಗುರಿಯಾಗಿದೆ. ಸದ್ಯಕ್ಕೆ ಭಾರತೀಯ ಬ್ಯಾಂಕ್‌ಗಳು ವಸೂಲಾಗದ ಸಾಲ, ಅನುತ್ಪಾದಕ ಆಸ್ತಿ ಸಹಿತ ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಈ ಸಮಸ್ಯೆಗಳನ್ನು ತೊಡೆದು ಹಾಕಿ ಸದೃಢ, ಶಕ್ತಿಶಾಲಿ ಹಾಗೂ ಬೆಳೆಯುತ್ತಿರುವ ಜಾಗತಿಕ ಆರ್ಥಿಕ ಶಕ್ತಿಯೊಂದಿಗೆ ಕೈಜೋಡಿಸುವಂಥ ಸಮರ್ಥ ಬ್ಯಾಂಕಿಂಗ್ ವ್ಯವಸ್ಥೆಯನ್ನಾಗಿ ನಾವು ಬದಲಾಯಿಸಬೇಕಿದೆ. ಅದಕ್ಕಾಗಿ ಯೋಜನೆ ಸಿದ್ಧಪಡಿಸುತ್ತೇವೆ ಎಂದು ಸಚಿವ ಜೇಟ್ಲಿ ಪತ್ರಕರ್ತರಿಗೆ ತಿಳಿಸಿದರು.
Advertisement