Advertisement

“ಜನಪ್ರತಿನಿಧಿಗಳ ವೈಫ‌ಲ್ಯದಿಂದ ಜಿಎಸ್‌ಟಿ ಗೊಂದಲ ‘

07:15 AM Jul 28, 2017 | |

ಉಡುಪಿ: ಜಿಎಸ್‌ಟಿ ದೇಶದ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುವ ಕಾಯ್ದೆಯಾಗಿದ್ದು, ಅದರಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು 6 ತಿಂಗಳ ಕಾಲಾವಕಾಶವಿದ್ದರೂ, ಅದನ್ನು ಜನರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡುವಲ್ಲಿ, ತಿದ್ದುಪಡಿ ತರುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ವಿಫ‌ಲರಾಗಿದ್ದರಿಂದ ಮತ್ತು ಆ ವೇಳೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ್ದರಿಂದ ಈಗ ಅನಗತ್ಯ ಗೊಂದಲ ಸೃಷ್ಟಿಯಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್‌ ಹೇಳಿದರು.
 
ಉಡುಪಿ ಬಳಕೆದಾರರ ವೇದಿಕೆ ಮತ್ತು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಲ್ಲಿ  ಮಂಗಳವಾರ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಬಗ್ಗೆ  ಮಾಹಿತಿ ನೀಡಿದರು.

Advertisement

ಕಾಲಾವಕಾಶವಿದ್ದಾಗ ವಸ್ತುಗಳ ಬೆಲೆ ನಿಗದಿ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರೆ ಇಷ್ಟೆಲ್ಲ ಗೊಂದಲ ನಿರ್ಮಾಣವಾಗುತ್ತಿರಲಿಲ್ಲ ಇದಕ್ಕೆ ಎಲ್ಲರೂ ಹೊಣೆ. ಜಿಎಸ್‌ಟಿ ಪದ್ಧತಿಯು ಗ್ರಾಹಕ ಸ್ನೇಹಿಯಾಗಿದ್ದು, ಜೂ. 30 ರ ಮೊದಲಿನ ದಾಸ್ತಾನು ಮುಗಿದ ಆನಂತರ ಅಂದರೆ 2-3 ತಿಂಗಳಲ್ಲಿ ಈ ಏಕ ರೀತಿಯ ತೆರಿಗೆ ಕಾಯ್ದೆಯ ಲಾಭ ಜನರಿಗೆ ಸಿಗಲಿದೆ. ಹಿಂದೆ ಹಲವು ತೆರಿಗೆಗಳಿದ್ದು, ಜಿಎಸ್‌ಟಿಯಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಲಿದೆ. ತೆರಿಗೆ ಸಂಗ್ರಹ ಪ್ರಮಾಣವು ಜಾಸ್ತಿಯಾಗುತ್ತಿದ್ದು, ಇದರ ನೇರ ಲಾಭ ಗ್ರಾಹಕರಿಗೆ ಸಿಗಲಿದೆ ಎಂದರು. 

ಸಂಚಾಲಕ ಕೆ. ದಾಮೋದರ ಐತಾಳ್‌ ಸ್ವಾಗತಿಸಿದರು. ಶಾಂತರಾಜ್‌ ಐತಾಳ್‌ ಪ್ರಾಸ್ತವಿಕವಾಗಿ ಮಾತನಾಡಿದರು. ಎ. ಪಿ. ಕೊಡಂಚ ಕಾರ್ಯಕ್ರಮ ನಿರ್ವಹಿಸಿದರು. ಟಿ. ಚಂದ್ರಶೇಖರ ವಂದಿಸಿದರು. 

ಪಾರದರ್ಶಕ ತೆರಿಗೆ ಸಂಗ್ರಹ
ಜಿಎಸ್‌ಟಿಯಿಂದ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಯಾವುದೇ ವಂಚನೆಯಾಗಲು ಸಾಧ್ಯವಿಲ್ಲ. ಎಲ್ಲ ವಸ್ತುಗಳ ಮೇಲೆ ಸರಕಾರವೇ ನೇರವಾಗಿ ತೆರಿಗೆ ಪ್ರಮಾಣ ನಿಗದಿ ಮಾಡಲಿದೆ. ಹಿಂದೆ ಕೇವಲ  ಶೇ. 2 ರಷ್ಟು ಪ್ರಮಾಣದಲ್ಲಿ ಮಾತ್ರ ಸರಕಾರ ಅಡ್ಡಲೆಕ್ಕ ಹಾಕಲಾಗುತ್ತಿದ್ದರೆ, ಶೇ. 98ರಷ್ಟು ವ್ಯಾಪಾರಿಗಳೇ ತೆರಿಗೆ ದರ ನಿಗದಿಪಡಿಸುತ್ತಿದ್ದರು. ಇಲ್ಲಿ ವಂಚನೆಗಳಾಗುವ ಸಾಧ್ಯತೆ ಹೆಚ್ಚು. ಆದರೆ ಈಗ ಕಂಪ್ಯೂಟರ್‌ ಮೂಲಕವೇ ಎಲ್ಲ ಪ್ರಕ್ರಿಯೆ ನಡೆಯುವುದರಿಂದ ಉತ್ತರದಾಯಿತ್ವ ಮತ್ತು ಪಾರದರ್ಶಕ ತೆರಿಗೆ ಪದ್ಧತಿಯಾಗಿದೆ ಎಂದು ಗುಜ್ಜಾಡಿ ಪ್ರಭಾಕರ ನಾಯಕ್‌ ಹೇಳಿದರು. 
 

Advertisement

Udayavani is now on Telegram. Click here to join our channel and stay updated with the latest news.

Next