Advertisement

ಸಯಾನ್‌ ಜಿಎಸ್‌ಬಿ ಸೇವಾ ಮಂಡಲದ ವಾರ್ಷಿಕ ಸಾಮೂಹಿಕ ಉಪನಯನ 

04:54 PM Mar 23, 2017 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ವತಿಯಿಂದ ವಾರ್ಷಿಕ ಸಾಮೂಹಿಕ ಉಪನಯನ ಕಾರ್ಯಕ್ರಮವು ಮಾ. 13ರಂದು ಮಂಡಳದ ಶ್ರೀ ಗುರುಗಣೇಶ್‌ ಪ್ರಸಾದ ಸಭಾಗೃಹದಲ್ಲಿ  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಈ ಸಾಮೂಹಿಕ ಉಪನಯನ ಕಾರ್ಯಕ್ರಮವು ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಪರಮಪೂಜ್ಯ ಶ್ರೀಮದ್‌ ಸಂಯಮೀಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸಮಾಜದ ಮೂವತ್ತು  ವಟುಗಳಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಯಜೊnàಪವೀತ ಧಾರಣೆ ಮಾಡಲಾಯಿತು.

ಆ ಬಳಿಕ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸೇವಾ ಮಂಡಳದ ಅಧ್ಯಕ್ಷ ಯಶವಂತ್‌ ಕಾಮತ್‌ ಅವರು ಸ್ವಾಗತಿಸಿದರು. ಮಂಡಳದ ಮಾಜಿ ಅಧ್ಯಕ್ಷ ಆರ್‌. ಜಿ. ಭಟ್‌ ಅವರು ಮಂಡಳದ ವತಿಯಿಂದ ಮೀರಾ-ಭಾಯಂದರ್‌ನಲ್ಲಿ ನಿರ್ಮಾಣವಾಗಲಿರುವ ಮಹತ್ವಾ ಕಾಂಕ್ಷಿ ಯೋಜನೆಯಾಗಿರುವ ನೂತನ ಆಸ್ಪತ್ರೆಯ ವಿವರ ನೀಡಿದರು. ಅಲ್ಲದೆ ಶ್ರೀ ಗುರುಗಣೇಶ ಪ್ರಸಾದ ಸಭಾಗೃಹ
ದಲ್ಲಿ ನವೀಕರಣ ಕಾಮಗಾರಿಯು ಪೂರ್ಣ ಗೊಳ್ಳುತ್ತಿದ್ದು, ಸಮಾಜ ಬಾಂಧವರ ಶುಭ ಕಾರ್ಯ ಗಳು ನೆರವೇರಲು ಸಮಾಜ ಬಾಂಧವರಿಗೆ ಲಭ್ಯವಾಗಲಿದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು ಎಂದರು. 
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಶಿಬರೂರು ನರಸಿಂಹ ಕಾಮತ್‌, ಖ್ಯಾತ ಗಾಯಕ ಉಪೇಂದ್ರ ಭಟ್‌, ಕೊಕ್ಕರ್ಣೆ ಯೋಗೇಶ್‌ ನಾರಾಯಣ ನಾಯಕ್‌, ಭರತ್‌ ಪಾಠಕ್‌ ಅವರನ್ನು ಶ್ರೀಗಳ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.

ಶ್ರೀಗಳು ಆಶೀರ್ವಚನ ನೀಡಿ, ಸೇವಾ ಮಂಡಲದಿಂದ ಜರಗುವ ಉತ್ತಮ ಕಾರ್ಯಗಳನ್ನು ಉಲ್ಲೇಖೀಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ ಮಹಾರಾಷ್ಟ್ರದ ಮುಖ್ಯ ದೇವರು ವಿಠೊಭನಾಗಿದ್ದು,  ಈ ದೇವರಿಗೆ ವಾರ್ಕರಿ ಭಜನೆ ಅತೀ ಪ್ರಿಯ ಸೇವೆಯಾಗಿದೆ. ಭಾರತದ ಇನ್ನಿತರ ರಾಜ್ಯಗಳ ಪ್ರಧಾನ ದೇವರುಗಳನ್ನು ಉಲ್ಲೇಖೀಸಿ ಧಾರ್ಮಿಕತೆಯ ಬಗ್ಗೆ ಮಾಹಿತಿ ನೀಡಿದರು. ಸೇವಾ ಮಂಡಲದ ವಾರ್ಷಿಕ ಗಣೇಶೋತ್ಸವವು ಮುಂಬಯಿ ನಗರದಲ್ಲಿ ಖ್ಯಾತಿ ಪಡೆದಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ವಾಲ್ಕೇಶ್ವರ ಮಠದಲ್ಲಿದ ಪೂಜ್ಯ ಗುರುವರ್ಯರಾದ ಶ್ರೀಮದ್‌ ಮಾಧವೇಂದ್ರ ತೀರ್ಥ ಸ್ವಾಮೀಜಿ ಅವರ ಸಮಾಧಿಯ ಅನುಗ್ರಹವಾಗಿದೆ. ಮಕ್ಕಳಿಗೆ ಎಳವೆಯಿಂದ ಸಂಸ್ಕೃತಿಯನ್ನು ನೀಡಬೇಕು. ಆಧ್ಯಾತ್ಮಿಕತೆಯ ಬಗ್ಗೆ ಒಲವು ಮೂಡಿಸಿದಾಗ ಸುಸಂಸ್ಕೃತ ಬದುಕು ಸಾಧ್ಯವಾಗುತ್ತದೆ ಎಂದರು.

ಕೊನೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next