Advertisement

ಗಡಿಭಾಗದ ಜಾನಪದ ಕಲಾವಿದರ ಬೆಳೆಸಿ

12:53 PM Feb 23, 2022 | Team Udayavani |

ಬಸವಕಲ್ಯಾಣ: ಸಾಮಾಜಿಕ ಬದುಕಿನಲ್ಲಿ ಜಾನಪದ ಕಲೆಗೆ ಬಹಳಷ್ಟು ಗೌರವ ಸಿಗುತ್ತಿದೆ. ಆದರೆ ಅರಳಬೇಕಾದ ಗ್ರಾಮೀಣ ಭಾಗದ ಜಾನಪದ ಕಲಾವಿದರಿಗೆ ಕಾಣದಂತೆ ಮಾಯವಾಗುತ್ತಿದ್ದಾರೆ, ಅಂಥವರನ್ನು ಗುರುತಿಸಿ ಬೆಳೆಸುವ ಕಾರ್ಯ ನಡೆಸಬೇಕಾಗಿದೆ ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕಲ್ಯಾಣರಾವ್‌ ಮದರಗಾಂಬಕರ್‌ ಹೇಳಿದರು.

Advertisement

ಧಾಮುರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ವಿಶ್ವಶಾಂತಿ ಫೌಂಡೇಶನ್‌ ಮತ್ತು ಕಲ್ಚರಲ್‌ ವೆಲ್ಫೇರ್‌ ಡೆವಲಪ್‌ಮೆಂಟ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಜಾನಪದ ಗಡಿನಾಡು ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಡಿ ಭಾಗದಲ್ಲಿ ಕನ್ನಡ ಎಂದರೆ ಮರಾಠಿ ಭಾಷೆಯಲ್ಲಿ ಮಾತನಾಡುವುದು ಹೆಚ್ಚು ಕಾಣುವಂತಾಗಿದೆ. ಹೀಗಾಗಿ ಕನ್ನಡದಲ್ಲಿ ಓದುವುದು, ಮಾತನಾಡುವುದು ಕಡಿಮೆಯಾಗುತ್ತಿದೆ. ಅದಕ್ಕೆ ಎಲ್ಲ ಭಾಷೆಗಳಿಗೆ ಗೌರವ ಕೊಡುವ ಜೊತೆಗೆ ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ವಿಶ್ವಶಾಂತಿ ಮತ್ತು ಕಲ್ಚರಲ್‌ ವೆಲ್ಫೇರ್‌ ಸಂಸ್ಥೆ ಅಧ್ಯಕ್ಷ ಜೈಪಾಲ ಬೋರಾಳೆ ಪ್ರಾಸ್ತಾವಿಕ ಮಾತನಾಡಿ, ಜಾನಪದ ಗಡಿನಾಡು ಉತ್ಸವ ಆಚರಿಸುವುದರಿಂದ ಜನರಿಗೆ ಕನ್ನಡದ ಬಗ್ಗೆ ಜಾಗೃತಿ ಅಲ್ಲದೇ ಅರಿವು ಮೂಡಿಸಲು ಸಹಕಾರಿಯಾಗುತ್ತದೆ. ಜತೆಗೆ ಕನ್ನಡದ ಸ್ವಾಭಿಮಾನ ಹೆಚ್ಚುತ್ತದೆ. ಹೀಗಾಗಿ ಜಾನಪದ ಗಡಿನಾಡು ಉತ್ಸವ ಆಚರಿಸಲಾಗುತ್ತಿದೆ. ಇಂತಹ ಉತ್ಸವಗಳಲ್ಲಿ ಹೆಚ್ಚಿನ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ನಂತರ ಕೈಲಾಸ ಬಾವಿಕಟ್ಟಿ, ಪ್ರಭು ಕಾಂಬಳೆ, ಮದರ ಥೆರೆಸಾ ಭಜನಾ ಮಂಡಳಿ ಮಹಿಳೆಯರು ಕಲಾವಿದರು ಕಲೆ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ಜಾಧವ, ಉಪಾಧ್ಯಕ್ಷ ಸಂಜು ಜಾಧವ, ಎಪಿಎಂಸಿ ಸದಸ್ಯ ಸಂತೋಷ ಜಾಧವ, ಎಸ್‌ಡಿಎಂಸಿ ಅಧ್ಯಕ್ಷ ಶಿವಾಜಿ ಜಾಧವ, ಉಪಾಧ್ಯಕ್ಷ ಮೀನಾ ಮೂಳೆ, ಶ್ರೀಮಂತ ಪಾಟೀಲ್‌, ಮುಖ್ಯಗುರು ಗಿರಿಧರ ಧಾನುರೆ, ದಶರಥ ಜಾಧವ, ರಾಹುಲ್‌ ಕಲ್ಲುರೆ, ಕುಲದೀಪ ಕಾಂಬಳೆ, ಬಸವರಾಜ ಕಾಳೆ, ಶಶೀಲ್‌ ಪ್ರಜಾರಿ, ಧನಜಾಜಿ ಉದಬಲೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next