Advertisement
ನುಗ್ಗೆ ಬೆಳೆಯ ಬೇಕೆಂದಿರುವ ಕೃಷಿಕರೇ ಕೆಲ ಸತ್ಯ ತಿಳಿದುಕೊಳ್ಳಿ. ರಾಸಾಯನಿಕ ಬಳಸಿ ನುಗ್ಗೆ ಕೃಷಿ ಮಾಡಲು ಆಗದು. ಚೆನ್ನಾಗಿ ಬೆಳೆ ಬರಬೇಕು, ಲಾಭ ಮಾಡಬೇಕು ಅಂದರೆ ಮೊದಲು ನುಗ್ಗೆಗೆ ಯಥೇಚ್ಚವಾಗಿ ಪೋಷಕಾಂಶಗಳು ದೊರೆಯುವಂತೆ ಮಾಡಬೇಕು.
Related Articles
* ಒಂದು ಕಾಯಿ 60-70 ಸೆಂ.ಮೀ. (ಎರಡು ಅಡಿ) ಉದ್ದ ಇರಬೇಕು
* ಒಂದು ಕಾಯಿ 100-120 ಗ್ರಾಂ. ತೂಕ ಇರಬೇಕು
* ಒಂದು ಗಿಡ ಒಂದು ವರ್ಷಕ್ಕೆ ಕಮ್ಮಿಯೆಂದರೂ 250-300 ಕಾಯಿ ಬಿಡಬೇಕು.
ಸಸಿ ನಾಟಿ ಮಾಡಿದಾಗ ಯಾವುದೇ ರಾಸಾಯನಿಕ ಗೊಬ್ಬರ ಹಾಕಬೇಡಿ, ನಾಟಿಯಾದ ಮೂರು ತಿಂಗಳ ನಂತರ ಒಂದು ಎಕರೆಗೆ, 25 ಕೆ.ಜಿ ಡಿಎಪಿ, 10 ಕೆ.ಜಿ ಯೂರಿಯಾ, 7 ಕೆ.ಜಿ ಪೊಟ್ಯಾಷ್ ಗೊಬ್ಬರದ ಜೊತೆ ಸೇರಿಸಿ, ಗಿಡದ ಸುತ್ತ ರಿಂಗ್ ಮಾಡಿ ಹಾಕಿ. ನಂತರ ಮತ್ತೆ ಮೂರು ತಿಂಗಳು ಬಿಟ್ಟು ಇಷ್ಟೇ ಪ್ರಮಾಣದ ಗೊಬ್ಬರವನ್ನು ಹೀಗೇ ಕೊಡಿ.
Advertisement
ಇನ್ನು ಹಾಗೇ ಬಿಟ್ಟರೆ ನುಗ್ಗೆ 6-7 ಮೀಟರ್ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಹೀಗೆ ಎತ್ತರ ಬೆಳೆದರೆ ಕಾಯಿ ಕೀಳುವುದು ಕಷ್ಟ ಜೊತೆಗೆ ಇಳುವರಿಯಲ್ಲೂ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಗಿಡಗಳು ಗಿಡ್ಡಗೆ ಪೊದೆಯಾಕಾರವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಒಂದು, ಒಂದೂವರೆ ಮೀಟರ್ ಬೆಳೆದಾಕ್ಷಣ ಕುಡಿ ಚಿವುಟಿ ಎತ್ತರ ಬೆಳೆಯದಂತೆ ಮಾಡಬೇಕು. ಇದರಿಂದ ಹೆಚ್ಚು ಕವಲುಗಳು ಬಂದು ಗಿಡ ಪೊದೆಯಂತಾಗಿ ಹೆಚ್ಚಿನ ಕಾಯಿ ಬಿಡುತ್ತವೆ. ನೀರಿನ ನಿರ್ವಹಣೆಯೂ ಅಷ್ಟೇ ಮುಖ್ಯ, ಪ್ರತಿ ಐದಾರು ದಿನಕ್ಕೊಮ್ಮೆ ತಪ್ಪದೇ ನೀರುಣಿಸಿ. ಆಮೇಲೆ ನುಗ್ಗೆದು ಜೊತೆಗೇ ನುಗ್ಗಿ ಬರುತ್ತದೆ ಲಾಭ. ಎಸ್.ಕೆ. ಪಾಟೀಲ್