Advertisement
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತಾಲೂಕು ನದಿ, ಹಳ್ಳ, ಕೆರೆ, ಜಲಪಾತಗಳಿಗೆ ಪ್ರಸಿದ್ಧಿಯಾಗಿದ್ದು, ಇಲ್ಲಿಹರಿಯುವ ಹೇಮಾವತಿ ನದಿ ನೀರನ್ನು ಜಿಲ್ಲೆಯ ಹಾಸನ, ಅರಸೀಕೆರೆ ತಾಲೂಕುಗಳು ಅಲ್ಲದೆ ದೂರದತುಮಕೂರಿಗೂ ಹರಿಸಿ ಅಲ್ಲಿನ ಜನರ ದಾಹವನ್ನುಇಂಗಿಸಲಾಗುತ್ತಿದೆ. ಇದಲ್ಲದೆ ಅರಬ್ಬೀ ಸಮುದ್ರಕ್ಕೆಹರಿಯುವ ಕೆಂಪುಹೊಳೆ ಸೇರಿದಂತೆ ವಿವಿಧ ಹಳ್ಳತೊಳ್ಳಗಳ ನೀರನ್ನು ಪೂರ್ವಭಿಮುಖವಾಗಿ ಹರಿಸುವಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದುವರಿದಿದೆ.ಹೀಗೆ ವಿವಿಧ ಜಿಲ್ಲೆಗಳಿಗೆ ನೀರು ಹರಿಸುತಿದ್ದು, ತಾಲೂಕಿಗೆ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.
Related Articles
Advertisement
ಅಂತರ್ಜಲ ಕುಸಿತ ಕಂಡಿರುವ ಗ್ರಾಮಗಳು :
ತಾಲೂಕಿನ ಗ್ರಾಮಾಂತರ ಪ್ರದೇಶಗಳ ವಿಷಯಕ್ಕೆ ಬಂದರೆ ತಾಲೂಕಿನ 13 ಗ್ರಾಪಂಗಳಲ್ಲಿ ಅಂರ್ತಜಲಕುಸಿದು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವನೀರಿಗೆ ತೊಂದರೆಯಾಗಿದೆ. ಆನೆಮಹಲ್ ಗ್ರಾಪಂ ವ್ಯಾಪ್ತಿಯ ಚಿಕ್ಕಸತ್ತಿಗಾಲ, ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಂಡೆಕೆರೆ, ಬೆಳಗೋಡು ಗ್ರಾಪಂ ವ್ಯಾಪ್ತಿಯ ಈಶ್ವರಹಳ್ಳಿ, ಚಂಗಡಿಹಳ್ಳಿ ಗ್ರಾಪಂ ವ್ಯಾಪ್ತಿಯಹೆಗ್ಗಡಿಹಳ್ಳಿ, ದೇವಾಲದಕೆರೆ ಗ್ರಾಪಂ ವ್ಯಾಪ್ತಿಯಅಚ್ಚನಹಳ್ಳಿ, ಕುರುಭತ್ತೂರು ಗ್ರಾಪಂ ವ್ಯಾಪ್ತಿಯ ಉಮ್ಮತ್ತೂರು, ಕುರುಭತ್ತೂರು, ಬೆಳ್ಳೂರು,ಈಚಲಪುರ, ಹಾನುಬಾಳ್ ಗ್ರಾಪಂ ವ್ಯಾಪ್ತಿಯ ಅಚ್ಚರಡಿ, ಹೆತ್ತೂರು ಗ್ರಾಪಂ ವ್ಯಾಪ್ತಿಯ ಹಾಡ್ಯ, ಎಲ್ಲಕ್ಕಿಂತ ಹೆಚ್ಚಾಗಿ ವಳಲಹಳ್ಳಿ ಗ್ರಾಪಂ ವ್ಯಾಪ್ತಿಯ ವಳಲಹಳ್ಳಿ ಕಾಲೋನಿ, ಹಿರಿಯೂರು ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಹಿರಿಯೂರು ಗ್ರಾಮದಲ್ಲಿ ಅಂರ್ತಜಲಪೂರ್ಣವಾಗಿ ಬತ್ತಿಹೋಗಿದ್ದು ಗ್ರಾಮಸ್ಥರುನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮಗಳ ಜತೆಗೆ ತಾಲೂಕಿನ ಹಸುಗವಳ್ಳಿ, ಓಂನಗರ, ಕಿರೇಹಳ್ಳಿ ಕ್ರೈಸ್ತ ಕಾಲೋನಿ, ದೊಡ್ಡನಾಗರಗ್ರಾಮ, ಬರ್ಲಿಕೆರೆ, ಶೆಟ್ಟಿಹಳ್ಳಿ, ನೀಕನಹಳ್ಳಿ, ನೆಲಗಳ್ಳಿ,ಹಿರುದ್ದಿ, ಆಚಂಗಿ, ಗುಂಡಿಗೆರೆ, ತೊಣಬನಹರೆ,ಕಿರ್ಕಳ್ಳಿ, ಹಳ್ಳಿ ಬೈಲು, ಕುಂಬರಡಿ, ನಡೇಹಳ್ಳಿ,ಹೆಬ್ಬಸಾಲೆ, ಕಾಗಿನೆರೆ, ಅತ್ತಿಹಳ್ಳಿ, ಕ್ಯಾನಹಳ್ಳಿ, ಹುಲ್ಲಳ್ಳಿ,ಚಿಮ್ಮಿಕೋಲು, ಕಿರುಹುಣಸೆ, ಹಾಲೇಬೇಲೂರು, ಕಬ್ಬಿನಗದ್ದೆ, ದೊಡ್ಡಕುಂದೂರು, ಬೊಬ್ಬನಹಳ್ಳಿ,ಕರಡಿಗಾಲ, ಮರ್ಜನಹಳ್ಳಿ, ಯಸಳೂರು, ಕೆರೋಡಿಗ್ರಾಮಗಳಲ್ಲಿ ಅಂರ್ತಜಲ ಮಟ್ಟ ಕಡಿಮೆಯಾಗುವಸಾಧ್ಯತೆಯಿದ್ದು, ಈ ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಗ್ರಾಮದಲ್ಲಿರುವ 3 ತೆರೆದ ಬಾವಿಗಳಲ್ಲೂಅಂರ್ತಜಲ ಬತ್ತಿ ಹೋಗಿದ್ದು,ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿಉಂಟಾಗಿದೆ. ಗ್ರಾಪಂನವರು ತಾತ್ಕಾಲಿಕವಾಗಿಕುಡಿವ ನೀರನ್ನು ಪೂರೈಕೆ ಮಾಡಲು ಯಾವುದೆ ಕ್ರಮ ಕೈಗೊಂಡಿಲ್ಲ. – ಚಂದ್ರಶೇಖರ್, ಹಿರಿಯೂರು ಗ್ರಾಮಸ್ಥ
ಜಲಜೀವನ್ ಮಿಷನ್‌ನಡಿ ತಾಲೂಕಿನ 41 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಈಗಾಗಲೆ ಟೆಂಡರ್‌ಕರೆಯಲಾಗಿದೆ. ಜೊತೆಗೆ ಗ್ರಾಪಂಗಳಿಗೆತಾತ್ಕಾಲಿಕವಾಗಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ. – ಹರೀಶ್, ತಾಪಂ ಇಒ
–ಸುಧೀರ್ ಎಸ್.ಎಲ್