ಮುಂಬೈ: ಟೆಲಿಕಾಂ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಇದೀಗ ಕಿರಾಣಿ ಅಂಗಡಿಗಳಲ್ಲೂ ಕಾಣಿಸಿಕೊಳ್ಳಲಿದೆ.
ಭಾರತ್ ಎಂಬ ಹೆಸರಿನ ಈ ಪ್ರಾಜೆಕ್ಟ್ ಅಡಿಯಲ್ಲಿ, ರಿಲಯನ್ಸ್ ಜಿಯೋ ಕಿರಾಣಿ ಅಂಗಡಿಗಳನ್ನು ಸ್ಥಾಪಿಸುವುದಿಲ್ಲ. ಕಿರಾಣಿ ಅಂಗಡಿಗಳ ಮೇಲೆ ಹಣವನ್ನೂ ಹಾಕುವುದಿಲ್ಲ. ಬದಲಿಗೆ ಕಿರಾಣಿ ಅಂಗಡಿಗಳು ಮತ್ತು ಗ್ರಾಹಕ ಬಳಕೆ ಸಾಮಗ್ರಿಗಳ ಉತ್ಪಾದಕ ಕಂಪನಿಗಳ ಜತೆ ಸಂಬಂಧ ಬೆಸೆದು, ಜಿಯೋ ಬಳಕೆದಾರರಿಗೆ ಕಡಿಮೆ ದರದಲ್ಲಿ ಸಾಮಗ್ರಿ ಒದಗಿಸಲು ಅನುವು ಮಾಡಲಿದೆ.
ಇದಕ್ಕಾಗಿ ಈಗಾಗಲೇ ಚಾಲ್ತಿಯಲ್ಲಿರುವ ಜಿಯೋ ಮನಿ ವ್ಯಾಲೆಟ್ ಆ್ಯಪ್ ಅನ್ನು ಕಂಪನಿ ಬಳಸಿ ಕೊಳ್ಳಲಿದೆ. ಅಂದರೆ ಜಿಯೋ ಗ್ರಾಹಕರಿಗೆ ವಿವಿಧ ಕಂಪನಿಗಳಲ್ಲಿ ಇರುವ ಕೊಡುಗೆಗಳ ಬಗ್ಗೆ ಮಾಹಿತಿ ಮತ್ತು ಕೂಪನ್ ಕೋಡ್ ಕಳುಹಿಸಲಿದೆ. ಗ್ರಾಹಕರು ಕಿರಾಣಿ ಅಂಗಡಿಗೆ ತೆರಳಿ ರಿಯಾಯಿತಿ ದರದಲ್ಲಿ ಸಾಮಗ್ರಿ ಖರೀದಿಸಬಹುದು. ಕಿರಾಣಿ ಅಂಗಡಿ ಮಾಲೀಕರು ಜಿಯೋ ಗ್ರಾಹಕರು ನೀಡಿದ ಕೂಪನ್ ಕೋಡ್ ಬಳಸಿ ಕಂಪನಿಯಿಂದ ವ್ಯತ್ಯಾಸದ ಮೊತ್ತ ಪಡೆಯುತ್ತಾರೆ.
ಸದ್ಯ ಫ್ಲಿಪ್‌ಕಾರ್ಟ್, ಅಮೆಜಾನ್‌ನಂತಹ ಇ-ಕಾಮರ್ಸ್ ತಾಣಗಳು ಜನಪ್ರಿಯವಾಗಿ ದ್ದರೂ, ಒಟ್ಟು ಮಾರುಕಟ್ಟೆಯಲ್ಲಿ ಇದರ ಪ್ರಮಾಣ ಶೇ.3-4ರಷ್ಟೇ ಇದೆ. ಭಾರತದ ಒಟ್ಟು ಚಿಲ್ಲರೆ ವಹಿವಾಟು 43 ಲಕ್ಷ ಕೋಟಿ ರೂ.ನದ್ದು. ಅಂದರೆ ಒಟ್ಟು ಚಿಲ್ಲರೆ ಮಾರುಕಟ್ಟೆಯಲ್ಲಿ ಕಿರಾಣಿ ಅಂಗಡಿಗಳ ವಹಿವಾಟು ಶೇ.88ರಷ್ಟು. ಹೀಗಾಗಿ ಈ ಕ್ಷೇತ್ರವನ್ನು ಜಿಯೋ ಪ್ರವೇಶಿಸಿದರೆ ಇದು ಟೆಲಿಕಾಂ ಕ್ಷೇತ್ರಕ್ಕೂ ಪೂರಕವಾಗಿರಲಿದೆ.
ಇ-ವಾಲೆಟ್ ಕಂಪನಿಗಳಿಗೆ ಭೀತಿ: ಜಿಯೋ ಹೊಸ ಯೋಜನೆ ಈಗಷ್ಟೇ ಮುನ್ನೆಲೆಗೆ ಬರು ತ್ತಿರುವ ಇವ್ಯಾಲೆಟ್ ಕಂಪನಿಗಳಾದ ಪೇಟಿಎಂ, ಫ್ರೀಚಾರ್ಜ್, ಮೊಬಿಕ್ವಿಕ್, ಫೋನ್ ಪೇಗಳಿಗೂ ಭಾರಿ ಹೊಡೆತ ನೀಡ ಲಿದೆ. ಸುಲಭವಾಗಿ ಹಲವು ಕಂಪನಿಗಳ ಕೊಡುಗೆಗಳು ಜಿಯೋ ಆ್ಯಪ್‌ನಲ್ಲಿ ಸಿಗುವಾಗ ಇತರ ಕಂಪನಿಗಳಿಗೆ ಗ್ರಾಹಕರು ಗುಡ್‌ಬೈ ಹೇಳಬಹುದು.