ಮೈಸೂರು: ಕರ್ನಾಟಕ ಬ್ರಾಹ್ಮಣಅಭಿವೃದ್ಧಿ ಮಂಡಳಿ ಪ್ರಾಧಿಕಾರದವತಿಯಿಂದ ಜಯನಗರದ ವಿವೇಕಾನಂದಕೇಂದ್ರ ಕನ್ಯಾಕುಮಾರಿ ಶಾಖೆಯಲ್ಲಿಅಸಂಘಟಿತ ವಲಯದ ವ್ಯಾಪ್ತಿಯಲ್ಲಿಬರುವ 200 ಮಂದಿ ಪುರೋಹಿತರುಮತ್ತು ದಿನಗೂಲಿ ನೌಕರರಿಗೆ ದಿನಸಿ ಕಿಟ್‌ವಿತರಿಸಲಾಯಿತು.
ಫುಡ್ ಕಿಟ್ ವಿತರಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್,ಪುರೋಹಿತರು, ಅರ್ಚಕರು ತೀರಾಸಂಕಷ್ಟದಲಿದ್ದಾರೆ ಇದನ್ನು ಮನಗಂಡುಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದವತಿಯಿಂದ ದಿನಸಿ ಕಿಟ್‌ವಿತರಿಸಲಾಗುತ್ತಿದೆ, ಇದು ಅತ್ಯಂತಮಾನವೀಯತೆಯ ಕಾರ್ಯ ಎಂದುಹೇಳಿದರು.
ಕೊರೊನಾ ಲಾಕ್‌ಡೌನ್ ಹಿನ್ನಲೆ ಕಳೆದಮೂರು ತಿಂಗಳಿಂದ ದೇವಾಲಯಗಳುಬಂದ್ ಆದ ಪರಿಣಾಮ, ಪುರೋಹಿತವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇದನ್ನುಸರಕಾರವು ಮನಗಂಡು ಆರ್ಥಿಕಪ್ಯಾಕೇಜ್‌ನಲ್ಲಿ ಪರಿಹಾರ ನೀಡಿದೆ ಎಂದುಹೇಳಿದರು.ಬ್ರಾಹ್ಮಣ ಸಂಘದ ಅಧ್ಯಕ್ಷಡಿ.ಟಿ.ಪ್ರಕಾಶ್ ಮಾತನಾಡಿ, ಮೈಸೂರಿನವಿವಿಧೆಡೆ ಬ್ರಾಹ್ಮಣ ಸಂಘದ ಮೂಲಕಅವಶ್ಯಕವಿರುವವರಿಗೆ ಆಹಾರ ದಿನಸಿಕಿಟ್ ತಲುಪಿಸಲಾಗಿದೆ.
ಇಂತಹ ಸಂಕಷ್ಟಸಮಯದಲ್ಲಿ ರಾಜ್ಯ ಸರ್ಕಾರ ವಿಪ್ರಸಮುದಾಯದ ಆರ್ಥಿಕವಾಗಿಹಿಂದುಳಿದ ಕುಟುಂಬಕ್ಕೆ ಸವಲತ್ತುಗಳನ್ನುನೀಡಲು ಮುಂದಾಗಬೇಕು, ಲಾಕ್‌ಡೌನ್‌ನಿಂದಾಗಿ ಅಡುಗೆಯ ವೃತ್ತಿಯ ಮೇಲೆಅವಲಂಬಿತರಾದವರಹಿತಕ್ಕಾಗಿ ಕೋವಿಡ್‌ಆರ್ಥಿಕ ಪರಿಹಾರ ನೀಡಲು ಸರಕಾರಮುಂದಾಗಬೇಕು ಎಂದರು.ಈ ವೇಳೆ ಬ್ರಾಹ್ಮಣಅಭಿವೃದ್ಧಿ ಮಂಡಳಿನಿರ್ದೇಶಕ ಸಿ.ವಿ.ಗೋಪಿನಾಥ್,ಕೃಷ್ಣಮೂರ್ತಿಪುರಂ ರಾಮಮಂದಿರನಿರ್ದೇಶಕ ಅಶ್ವತ್ಥ್ ನಾರಾಯಣ್, ಅಖೀಲಭಾರತ ಬ್ರಾಹ್ಮಣ ಸಂಘದ ಮೈಸೂರುಅಧ್ಯಕ್ಷ ವೆಂಕಟೇಶ್ ಪದಕಿ, ಯುವಮುಖಂಡ ಅಜಯ್ ಶಾಸಿŒ, ಸುರೇಶ್‌ಇತರರಿದ್ದರು.