Advertisement

ಗ್ರಿಪನ್‌-ಇ-ರಫೆಲ್‌ ಪೈಪೋಟಿ!

06:22 AM Feb 22, 2019 | |

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಫ್ರೆಂಚ್‌ ಯುದ್ಧ ವಿಮಾನ ರಫೇಲ್‌ ಹಾಗೂ ಸ್ವೀಡನ್‌ ಯುದ್ಧ ವಿಮಾನ ಗ್ರಿಪನ್‌-ಇ ಪೈಪೋಟಿ ಪ್ರದರ್ಶನ. ಸ್ವೀಡನ್‌ ದೇಶದ ಅತ್ಯಾಧುನಿಕ ಐದನೇ ಜನರೇಷನ್‌ ಯುದ್ಧ ವಿಮಾನ ಗ್ರಿಪನ್‌-ಇ ಹಾಗೂ ಫ್ರೆಂಚ್‌ ದೇಶದ ಆಧುನಿಕ ಯುದ್ಧ ವಿಮಾನ ರಫೇಲ್‌ ಎದುರು ಬದುರಾಗಿ ಪ್ರದರ್ಶನಕ್ಕೆ ಇಡಲಾಗಿದೆ.

Advertisement

ಸಾರ್ವಜನಿಕರು, ಬಿಜಿನಸ್‌ ವಿಸಿಟರ್‌ಗಳು ಗ್ರಿಪನ್‌-ಇ ಒಳಗೆ ಕುಳಿತು ಅದರ ಮಾಹಿತಿ ಪಡೆಯಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ರಫೇಲ್‌ ಅನ್ನು ಹೊರಗಿನಿಂದ ನೋಡಲಷ್ಟೇ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಿಪನ್‌ನಲ್ಲಿ ಐದು ದೇಶಗಳ ಶಸ್ತ್ರಾಸ್ತ್ರವನ್ನು ಏಕಕಾಲದಲ್ಲಿ ಅಳವಡಿಸಬಹುದಾಗಿದೆ.

ಗ್ರಿಪನ್‌-ಇ ಈಗಾಗಲೇ ಸ್ವೀಡನ್‌, ಥೈಲ್ಯಾಂಡ್‌, ದಕ್ಷಿಣ ಆಫ್ರಿಕಾ, ಚೆಕ್‌ ಗಣರಾಜ್ಯಗಳಲ್ಲಿ ಯುದ್ಧ ವಿಮಾನವಾಗಿ ಬಳಸಲಾಗುತ್ತಿದೆ. ರಫೆಲ್‌ಗಿಂತ ಹೆಚ್ಚಿನ ಸಾಮರ್ಥ್ಯ ಇದು ಹೊಂದಿದೆ ಎಂದು ಸ್ಯಾಬ್‌ ಸಂಸ್ಥೆಯ ಸಂವಹನಾ ವಿಭಾಗದ ಮುಖ್ಯಸ್ಥ ರೋಬರ್ಟ್‌ ಹೆವ್‌ಸನ್‌ ಮಾಹಿತಿ ನೀಡಿದರು.

ಜಿಪಿಎಸ್‌ ಆಧಾರಿತ ಸಿಮ್ಯುಲೇಟರ್‌: ಯುದ್ಧ ವಿಮಾನಗಳನ್ನು ಖುದ್ದು ನಾವೇ ಕಾಕ್‌ಪಿಟ್‌ನಲ್ಲಿ ಕುಳಿತು ಚಾಲನೆ ಮಾಡುವ ಅನುಭವ ನೀಡುವಂತಹ ತಂತ್ರಜ್ಞಾನ ಸಿಮ್ಯುಲೇಟರ್‌ ಬಳಸಿ ಎಚ್‌ಎಎಲ್‌, ಜಿಪಿಎಸ್‌ ಆಧಾರದ ಮೇಲೆ ವಾಸ್ತವವಾಗಿರುವ ಭೂ ಪ್ರದೇಶದ ಮೇಲೆ ವಿಮಾನ ಹಾರಾಟ ಮಾಡುವ ಅನುಭ ಕಟ್ಟಿಕೊಟ್ಟಿದೆ.

ಜಿಪಿಎಸ್‌ ಆಧಾರದ ಮೇಲೆ ಸಿಮ್ಯುಲೇಟರ್‌ ಸಿದ್ಧಪಡಿಸಿದ್ದು, ಸಿಮ್ಯುಲೇಟರ್‌ನಲ್ಲಿ ಏರ್‌ಕ್ರಾಫ್ಟ್ ಚಾಲನೆ ಮಾಡಿದರೆ ಮುಂದಿನ ಸ್ಥಳಗಳಿಗೆ ಹೋದಂತೆ ಭಾಸವಾಗುತ್ತದೆ. ಜತೆಗೆ ಆ ಪ್ರದೇಶಗಳ ಹೆಸರು ಹಾಗೂ ಏರಿಯಲ್‌ ವ್ಯೂ ಕೂಡ ಕಾಣುತ್ತದೆ. ಇದರ ಅನುಭವ ಸಾರ್ವಜನಿಕರು ಏರೋ ಶೋನನಲ್ಲಿ ಪಡೆಯಬಹುದಾಗಿದೆ.

Advertisement

3-ಡಿ ವಿಮಾನ ಹಾರಾಟ: ಏರೋ ಶೋ ಎಚ್‌ಎಎಲ್‌ ಮಳಿಗೆಯಲ್ಲಿ  ವಿಶಾಲವಾದ ಎಲ್‌ಸಿಡಿ ಪರದೆ ಮೇಲೆ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಪರದೆ ಮುಂದೆ ನಿಂತವರು ಪರದೆಯಲ್ಲಿ ಬರುತ್ತಿರುವಾಗಲೇ ತೇಜಸ್‌ ಯುದ್ಧ ವಿಮಾನ ನಮ್ಮ ಪಕ್ಕದಲ್ಲೇ ಹಾದು ಹೋಗುವಂತೆ 3-ಡಿ ವ್ಯವಸ್ಥೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next