Advertisement

Gruha Lakshmi Scheme : ಬಗೆಹರಿಯದ ತಾಂತ್ರಿಕ ಸಮಸ್ಯೆ

07:56 AM Nov 05, 2023 | Team Udayavani |

ಉಡುಪಿ: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ಫ‌ಲ ಪಡೆಯಲು ಅರ್ಹ ಫ‌ಲಾನುಭವಿಗಳು ತಿಂಗಳುಗಳಿಂದ ಕಾದು ಕುಳಿತಿದ್ದಾರೆ. ಎದುರಾಗಿರುವ ತಾಂತ್ರಿಕ ಅಡಚಣೆ ನಿವಾರಿಸಲು ಸರಕಾರ/ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಇಡೀ ರಾಜ್ಯದಲ್ಲೇ ಈ ಸಮಸ್ಯೆ ಯಿದೆ. ರೇಷನ್‌ ಕಾರ್ಡ್‌ ತಿದ್ದುಪಡಿ, ಆಧಾರ್‌- ಬ್ಯಾಂಕ್‌ ಖಾತೆ ನಂಬರ್‌ ಸೀಡಿಂಗ್‌ ಆಗಿಲ್ಲ ಎಂಬ ಕಾರಣಕ್ಕೆ ಅನೇಕರದ್ದು ಅರ್ಜಿ ವಿಲೇವಾರಿಯೇ ಆಗುತ್ತಿಲ್ಲ. ಜಿಲ್ಲೆಗಳಲ್ಲಿ ಎಲ್ಲ ರೀತಿಯ ತಾಂತ್ರಿಕ ಸಮಸ್ಯೆ ಬಗೆಹರಿಸಿ ಕೇಂದ್ರ ಕಚೇರಿಗೆ ಸಲ್ಲಿಸಿದರೆ, ಅಲ್ಲಿಂದ ಅಪ್‌ಡೇಟ್‌ ಆಗುತ್ತಲ್ಲೇ ಇಲ್ಲ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ಹೇಳುತ್ತಿದ್ದಾರೆ.

ಆಗಸ್ಟ್‌ 15ರ ಹಿಂದೆ ಎಷ್ಟು ಮಂದಿ ಯೋಜನೆಗೆ ಅರ್ಹರಾಗಿದ್ದರೋ ಅಷ್ಟೇ ಮಂದಿ ಈಗಲೂ ಯೋಜನೆಯ ಫ‌ಲ ಪಡೆಯುತ್ತಿದ್ದಾರೆ. ಸೆಪ್ಟಂಬರ್‌ ತಿಂಗಳಲ್ಲಿ ಬೆರಳೆಣಿಕೆಯಷ್ಟು ಫ‌ಲಾನುಭವಿಗಳು ಪಟ್ಟಿಗೆ ಸೇರಿದ್ದರೂ ಅಕ್ಟೋಬರ್‌ನಲ್ಲಿ ಯಾರೂ ಸೇರಿಲ್ಲ. ಅನೇಕರು ಎಲ್ಲ ದಾಖಲೆಗಳಿದ್ದರೂ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವರು ಇಂದಿಗೂ ದಾಖಲೆಗಳೊಂದಿಗೆ ಗ್ರಾಮ ಒನ್‌, ಕರ್ನಾಟಕ ಒನ್‌, ಆಹಾರ ಇಲಾಖೆಯ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಸುತ್ತುತ್ತಲೇ ಇದ್ದಾರೆ.

ಅಧಿಕಾರಿಗಳಿಂದಲೂ ಯಾವುದೇ ಉತ್ತರ ಸಿಗುತ್ತಿಲ್ಲ. ರೇಷನ್‌ ಕಾರ್ಡ್‌ ಮನೆಯ ಯಜಮಾನಿ ಹೆಸರಿನಲ್ಲೇ ಇದ್ದು, ಬ್ಯಾಂಕ್‌ ಖಾತೆ-ಆಧಾರ್‌ ಸೀಡಿಂಗ್‌ ಆಗಿದ್ದರೂ ಯೋಜನೆಗೆ ಸೇರಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅರ್ಹ ಫ‌ಲಾನುಭವಿಗಳು ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next