Advertisement

ಕಟ್ಟದಬೈಲು ಸರಕಾರಿ ಶಾಲೆ: ಸ್ಕೌಟ್‌ ರ‍್ಯಾಲಿ ಉದ್ಘಾಟನೆ

01:09 PM Dec 23, 2017 | Team Udayavani |

ಬೆಳ್ತಂಗಡಿ: ಸರಕಾರಿ ಹಿ.ಪ್ರಾ. ಶಾಲೆ ಕಟ್ಟದಬೈಲಿನಲ್ಲಿ ಎರಡು ದಿನಗಳ ಕಾಲ ಮಡಂತ್ಯಾರು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಮಡಂತ್ಯಾರು ಇಲ್ಲಿ ಸ್ಕೌಟ್‌ ರ‍್ಯಾಲಿ ನಡೆಯಿತು.ಶಾಲಾ ಸ್ಥಾಪಕಾಧ್ಯಕ್ಷ ವಿ. ಶಂಕರ ಭಟ್‌ ಕಾರ್ಯಕ್ರಮ ಉದ್ಘಾಟಿಸಿದರು. ರ‍್ಯಾಲಿಯನ್ನು ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಉದ್ಘಾಟಿಸಿದರು. ಅಬ್ದುಲ್‌ ಲತೀಫ್‌ ಸಾಹೇಬ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯ ಜಿ. ಗೋಪಿನಾಥ ನಾಯಕ್‌, ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್‌ ಕೋಟ್ಯಾನ್‌, ಕುವೆಟ್ಟು ಗ್ರಾ.ಪಂ. ಸದಸ್ಯರಾದ ಪುಷ್ಪಾವತಿ, ಸದಾನಂದ ಮೂಲ್ಯ ಪರಾರಿ, ಸುಭಾಷಿಣಿ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ
ಅಧ್ಯಕ್ಷ ಕೆ. ಸೋಮನಾಥ ನಾಯಕ್‌, ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿ ಅಲ್ಫೋನ್ಸ್‌ ಫ್ರಾಂಕೋ ಮತ್ತಿತರರರು ಉಪಸ್ಥಿತರಿದ್ದರು. ಭಾರತೀಯ ಭೂಸೇನೆಯ ನಿವೃತ್ತ ಸುಭೇದಾರ್‌ ರಾಜೀವ ರೈ ಎಚ್‌. ಪಥಸಂಚಲನವನ್ನು ಉದ್ಘಾಟಿಸಿದರು. ಶಾಲಾ ಆವರಣದಇಂಟರ್‌ಲಾಕ್‌ ಅವರನ್ನು ತಾ.ಪಂ. ಸದಸ್ಯ ಗೋಪಿನಾಥ ನಾಯಕ್‌ ಉದ್ಘಾಟಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಬ್ದುಲ್‌ ಲತೀಫ್‌ ಸಾಹೇಬ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಅಕ್ಷತಾ ಕೆ. ಶೆಟ್ಟಿ, ಗೋಪಾಲ ನಾೖಕ್‌ ಬನ, ಕೆ.ಜಿ. ಲಕ್ಷ್ಮಣ ಶೆಟ್ಟಿ, ವಸಂತ ಶೆಟ್ಟಿ ಮಠ, ಶಾಲಾ ಮುಖ್ಯೋಪಾಧ್ಯಾಯ ಎಡ್ವರ್ಡ್‌ ಡಿ’ಸೋಜಾ ಭಾಗವಹಿಸಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಶೆಟ್ಟಿ ಮಠ ಸ್ವಾಗತಿಸಿ, ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಮಡಂತ್ಯಾರು ಇದರ ಕಾರ್ಯದರ್ಶಿ ಎಂ. ಶಾಂತಾರಾಮ ಪ್ರಭು, ರ‍್ಯಾಲಿ ನಿರ್ದೇಶಕ ಮೊಹಮ್ಮದ್‌ ಫಾರೂಕ್‌ ಎಚ್‌. ಕಾರ್ಯಕ್ರಮ ನಿರ್ವಹಿಸಿದರು.

ಶಾಲಾ ವಾರ್ಷಿಕೋತ್ಸವದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ಮುತ್ತಮ್ಮ ಅವರನ್ನು ಸಮ್ಮಾನಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳಿಂದ ಅನುಗ್ರಹ- ನಿಗ್ರಹ ಯಕ್ಷಗಾನ ಪ್ರದರ್ಶನ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next