Advertisement
ಹಸಿ ಮೆಣಸಿನಕಾಯಿಗೆ ಗ್ರಾಹಕರು ವಾರದ ಸಂತೆ, ತರಕಾರಿ ಮಾರುಕಟ್ಟೆಯಲ್ಲಿ ಕೆಜಿಗೆ ನಾಲ್ಕೈದು ರೂ. ಕೇಳುವುದರಿಂದ ರೈತರಿಗೆ ದಿಗಿಲು ಬಡದಿದೆ. ಸಂಜೆಯಾಗುತ್ತಿದ್ದಂತೆ ವ್ಯಾಪಾರಸ್ಥರೂ ಕೇಳಿದ ದರಕ್ಕೆ ಅನಿವಾರ್ಯ ಮಾರುವಂತಹ ಸ್ಥಿತಿ ಇದೆ. ಕೆಲ ರೈತರು ಮಹಾರಾಷ್ಟ್ರದ ಪುಣೆಗೆ ಹಸಿ ಮೆಣಸಿನಕಾಯಿ ಒಯ್ಯುತ್ತಿದ್ದು, ಪುಣೆಯಲ್ಲಿ ಕೆಜಿಗೆ 18ರಿಂದ 20ರೂ ಮಾರಾಟವಾಗುತ್ತಿದೆ.
Related Articles
Advertisement
ಒಂದು ಎಕರೆಗೆ 30 ರಿಂದ 40 ಸಾವಿರವರೆಗೆ ವೆಚ್ಚ ಭರಿಸುವ ರೈತರಿಗೆ ಬೆಲೆ ಕೈ ಹಿಡಿಯುತ್ತಿಲ್ಲ. ಹೀಗಾಗಿ ನಷ್ಟದಲ್ಲೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರಾದ ಬಸಲಿಂಗ, ರಾಮಮೂರ್ತಿ.
ತಾಲೂಕಿನಾದ್ಯಂತ ಬೆಳೆದ ಹಸಿ ಮೆಣಸಿನಕಾಯಿಗೆ ಬೆಲೆ ಇಲ್ಲದಂತಾಗಿದೆ. ವಾರದ ಸಂತೆಯಲ್ಲಿ 7ರೂ. ಕೆಜಿಗೆ ಮಾರಾಟವಾಗುತ್ತಿದೆ. ಇಂತಹ ಸಮಸ್ಯೆಗಳಿಂದ ರೈತರು ನೊಂದಿದ್ದಾರೆ ಎನ್ನುತ್ತಾರೆ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಕಳೆದ ವರ್ಷಕ್ಕಿಂತ ಈವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ. ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ
ಕಳೆದ ವರ್ಷಕ್ಕಿಂತ ಈ ವರ್ಷ ರೈತರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಸಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 7ರೂ. ಕೆಜಿ ಮಾರಾಟ ನಡೆದಿದೆ.
ಭೀಮರಾವ್ ಕುಂಬಾರ, ಸಹಾಯಕ ನಿರ್ದೇಶಕ ತೋಟಗಾರಿಕೆ
ಹಸಿ ಮೆಣಸಿನಕಾಯಿ ಬೆಳೆಗೆ ಬೆಲೆ ಇಲ್ಲ ಕೆಜಿಗೆ 7ರೂ. ಮಾರಾಟ ನಡೆದಿದೆ. ಮಹಾರಾಷ್ಟ್ರದಲ್ಲಿ 18ರಿಂದ 20ರೂ. ಕೆಜಿ ಇದ್ದುದರಿಂದ ಸ್ವಲ್ಪ ಕೂಲಿ ಹಣವಾದರೂ ಬರಲಿ ಎಂದು ಪುಣೆಗೆ ಹೊರಟಿದ್ದೇವೆ.
ಮುದುಕಪ್ಪ, ನಾಗಪ್ಪ, ಅಮರಾಪುರ ಗ್ರಾಮದ ರೈತರು
ನಾಗರಾಜ ತೇಲ್ಕರ್