Advertisement

ಉದ್ಯೋಗ ಖಾತ್ರಿ ಉತ್ತಮ ಅವಕಾಶ

07:10 AM Jun 04, 2020 | mahesh |

ಕುಷ್ಟಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಬದು, ಕೃಷಿ ಹೊಂಡ ನಿರ್ಮಾಣ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯೀಕರಣ, ಎರೆಹುಳ ಗೊಬ್ಬರ, ತೊಟ್ಟಿ ನಿರ್ಮಾಣ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.

Advertisement

ಗುಮಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್ ವೈರಸ್‌ ವ್ಯಾಪಕವಾಗಿದ್ದು, ವಲಸೆ ಬಂದವರು, ಪುನಃ ಹೊರರಾಜ್ಯ, ಜಿಲ್ಲೆಗಳಿಗೆ ಪುನಃ ವಲಸೆ ಹೋಗುವುದು ಅಗತ್ಯವಿಲ್ಲ. ಇಲ್ಲಿಯೇ ತಮ್ಮ ಜಮೀನಿನಲ್ಲಿ ಕೆಲಸವಿದೆ. ಕಾಯಕ ಮಿತ್ರ ಆ್ಯಪ್‌ ಮೂಲಕ ಕೂಲಿ ಬೇಡಿಕೆ ಸಲ್ಲಿಸಲು ಲಾಗಿನ್‌ ನೋಂದಣಿ ಅಗತ್ಯವಿಲ್ಲ. 15 ದಿನಗಳ ವರೆಗೆ ಕೂಲಿ ಬೇಡಿಕೆ ಸಲ್ಲಿಸಬಹುದಾಗಿದೆ ಎಂದರು.

ತಾಪಂ ಇಒ ಕೆ.ತಿಮ್ಮಪ್ಪ, ರವಿಕುಮಾರ ಜಂಬಲದಿನ್ನಿ, ತನ್ವಿರ್‌, ಚಂದ್ರಶೇಖರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು, ಪಿಡಿಒ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next