Advertisement
ಬೈಕೇ ಅಚ್ಚುಮೆಚ್ಚುಸುಲಭ ಚಾಲನೆ, ಟ್ರಾಫಿಕ್‌ನಲ್ಲೂ ಈಸಿ, ಮೈಲೇಜ್ ಕೂಡ ಚೆನ್ನಾಗಿದೆ ಎಂಬ ಕಾರಣಕ್ಕೆ ನಗರದ ಅದರಲ್ಲೂ ಗ್ರಾಮೀಣ ಭಾಗದ ಜನ ಹೆಚ್ಚಾಗಿ 100 ಸಿಸಿ ಸಾಮರ್ಥ್ಯದ ಕಮ್ಯೂಟರ್ ಬೈಕ್‌ಗಳನ್ನೇ ಆಯ್ಕೆ ಮಾಡುತ್ತಾರೆ. ದೀರ್ಘ ಬಾಳಿಕೆಗೂ ಇದು ಪರವಾಗಿಲ್ಲ ಎಂಬಂತಿರುವುದರಿಂದ ಜನರಿಗೆ ಈ ಮಾದರಿಯ ಬೈಕ್‌ಗಳೇ ಅಚ್ಚುಮೆಚ್ಚಾಗಿದೆ.
ಕಮ್ಯೂಟರ್ ಬೈಕ್‌ಗಳ ನಿರ್ವಹಣೆ ವಿಚಾರದಲ್ಲೂ ಕಿಸೆಗೆ ಇದು ಹಗುರ. ದುಬಾರಿ ಬೆಲೆಯ ಬೈಕ್‌ಗಳಾದರೆ 2 ಸಾವಿರ ರೂ. ಗಳಿಂದ 8 ಸಾವಿರ ರೂ.ಗಳವರೆಗೆ ಸರ್ವೀಸ್ ಗೆ ವ್ಯಯಿಸಬೇಕು. ಆದರೆ ಕಮ್ಯೂಟರ್ ಬೈಕ್‌ಗಳು ಹಾಗಲ್ಲ. ಇದರ ನಿರ್ವಹಣೆಗೆ 800-900 ರೂ. ವೆಚ್ಚ ಮಾಡಿದರೆ ಸಾಕು ಒಂದೊಮ್ಮೆ ಸರ್ವೀಸ್ ಆದರೆ ಮತ್ತೆ ಬೈಕ್ ಕಿರಿಕಿರಿಯೂ ಹೆಚ್ಚೇನಿಲ್ಲ. ಪದೇ ಪದೇ ಬೈಕ್ ಗಾಗಿ ಖರ್ಚು ಮಾಡಬೇಕಿಲ್ಲ. ಆದ್ದರಿಂದ ಬಹಳಷ್ಟು ಮಂದಿ ಇಂತಹ ಬೈಕ್‌ಗಳನ್ನೇ ನೆಚ್ಚಿಕೊಳ್ಳುತ್ತಾರೆ. ಗ್ರಾಮೀಣ ಜನತೆಯ ಮೊದಲ ಆಯ್ಕೆ
ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಾರಿಗೆ ಸಂಪರ್ಕ ಸುಲಭವಾಗಿ ಇರುವುದಿಲ್ಲ. ಅತ್ತಿಂದಿತ್ತ ಸಾಗುವ ವೇಳೆ ಜತೆಗೆ ಏನಾದರೂ ಸಲಕರಣೆ ಇದ್ದೇ ಇರುತ್ತದೆ. ಹೀಗಿರುವಾಗ ಗ್ರಾಮೀಣ ಪ್ರದೇಶದ ಹೆಚ್ಚಿನ ಮಂದಿಗೆ ತಮ್ಮ ಆಯ್ಕೆ ಬೈಕ್ ಆಗಿರುತ್ತದೆ. ದಿನನಿತ್ಯದ ಓಡಾಟವೂ ಹೆಚ್ಚಿರುವುದರಿಂದ ಅತಿ ಹೆಚ್ಚು ಮೈಲೇಜ್ ನೀಡುವಂತಹ ಬೈಕ್‌ಗಳನ್ನು ಆಯ್ಕೆ ಮಾಡುತ್ತಾರೆ. ಅಲ್ಲದೆ, ಅವರು ಆರ್ಥಿಕವಾಗಿಯೂ ಕಮ್ಯೂಟರ್ ಬೈಕ್ ಗಳು ಲಾಭವಾದ್ದರಿಂದ ಕಡಿಮೆ ಬೆಲೆಗೆ ಒಳ್ಳೆಯ ಬೈಕ್ ಯಾವುದು ಎಂದು ಚರ್ಚೆ ಮಾಡಿಯೇ ಕೊಂಡುಕೊಳ್ಳುತ್ತಾರೆ.
Related Articles
ಅನೇಕ ಬೈಕ್‌ಗಳು ಕೂಡ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜಾಜ್ ಕಂಪೆನಿಯ ಸಿಟಿ 100 ಬಿ ಕಡಿಮೆ ಬೆಲೆ ಮತ್ತು 65 ರಿಂದ 80 ಕಿ.ಮೀನಷ್ಟು ಮೈಲೇಜ್ ಸಿಗುತ್ತದೆ. ಇದರ ಜೊತೆ ಬಜಾಜ್ ಸಿ.ಟಿ. 100 ಕೂಡ ಮಾರುಕಟ್ಟೆಯಲ್ಲಿದೆ. ಇದು ಗ್ರಾಮೀಣ ಪ್ರದೇಶದವರ ಆಯ್ಕೆಯ ಬೈಕ್ ಆಗಿದ್ದು 99.27 ಸಿ.ಸಿ. ಇಂಜಿನ್ ಹೊಂದಿದೆ. ಕಂಪನಿ ಪ್ರಕಾರ ಈ ಬೈಕ್ 85 ಕಿ.ಮೀ.ಗೂ ಹೆಚ್ಚು ಮೈಲೇಜ್ ನೀಡುತ್ತದೆ. ಇದರ ಜೊತೆ ಬಜಾಜ್ ಪ್ಲಾಟಿನಾ, ಬಜಾಜ್ ಸಿಟಿ 100 ಇಎಸ್‌ಬೈಕ್ ಕೂಡ ಹೆಚ್ಚು ಬಿಕರಿಯಾಗುತ್ತದೆ. ಹಿರೋ ಎಚ್‌ಎಫ್ ಡಿಲಕ್ಸ್ ಕೂಡ ಕಡಿಮೆ ಬೆಲೆಯ ಬೈಕ್. ಸುಮಾರು 70 ಕಿ.ಮೀ ಮೈಲೇಜ್ ಕೂಡ ನೀಡುತ್ತದೆ. ಗ್ರಾಮೀಣ ಪ್ರದೇಶದ ಮಂದಿಯೇ ಇದನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಹಾಗೆಯೇ ಟಿವಿಎಸ್‌ನ ಸ್ಟಾರ್ ಸಿಟಿ ಪ್ಲಸ್, ಸ್ಟಾರ್ ಸಿಟಿ ಸ್ಪೋರ್ಟ್ಸ್ , ಮಹೀಂದ್ರಾ ಸೆಂಚುರೋ ಕೂಡ ಬಹು ಬೇಡಿಕೆಯ ಬೈಕ್‌ಗಳಾಗಿವೆ.
Advertisement
ಜೋಬಿಗೆ ಹಗುರ100 ಸಿಸಿಯ ಬೈಕ್‌ಗಳು ಯಾವತ್ತೂ ಜೋಬಿಗೆ ಹಗುರ. ಹೆಚ್ಚು ಪೆಟ್ರೋಲ್ ಬೇಡ, ಬೆಲೆಯೂ ಕಡಿಮೆ. ಆದ್ದರಿಂದ ಭಾರತದಂತಹ ದೇಶಗಳಲ್ಲಿ ಮಧ್ಯಮವರ್ಗದವರಿಗೆ ಇದು ಅಚ್ಚುಮೆಚ್ಚಾಗಿದೆ. ಇದರ ರೋಡ್‌ಟ್ಯಾಕ್ಸ್, ವಿಮಾ ಮೊತ್ತವೂ ಕಡಿಮೆ. ಒಂದು ವರ್ಷಕ್ಕೆ ಬೈಕ್ ನಿರ್ವಹಣೆ, ವಿಮೆ ಎಲ್ಲವೂ ಸೇರಿದರೆ ನಾಲ್ಕು ಸಾವಿರ ರೂ. ಮೀರುವುದಿಲ್ಲ. ಆದ್ದರಿಂದ ಜನ ಇದನ್ನು ಹೆಚ್ಚು ಇಷ್ಟ ಪಡುತ್ತಾರೆ. ಗ್ರಾಮೀಣ ಭಾಗದಲ್ಲೂ ಇವುಗಳ ರಿಪೇರಿ ಕೂಡ ಸುಲಭವಾಗಿದ್ದು, ಬೈಕ್‌ಗಳನ್ನೇ ನೆಚ್ಚಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಕಡಿಮೆ ಬೆಲೆಯ ಬೈಕ್ ಆಯ್ಕೆ ಮಾಡುತ್ತಾರೆ. ಅನೇಕ ಬೈಕ್‌ಗಳಿಂದು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶದ ಮಂದಿಗೆ ಬೈಕ್ ಹೆಚ್ಚು ಉಪಯೋಗವಿರುವುದರಿಂದ ಬೆಲೆ ಮತ್ತು ಮೈಲೇಜ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
– ಪುರುಷೋತ್ತಮ,
ಬೈಕ್ ಶೋರೂಂ ಮಾರುಕಟ್ಟೆ ವಿಭಾಗ ನವೀನ್ ಭಟ್ ಇಳಂತಿಲ