Advertisement

ಇಂದಿರಾ ಅನರ್ಹಗೊಳಿಸಿದ ತೀರ್ಪು ಧೈರ್ಯತನದ್ದು: ಸಿಜೆಐ

08:43 PM Sep 11, 2021 | Team Udayavani |

ಅಲಹಾಬಾದ್‌: ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿ 1975ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ನ್ಯಾ.ಜಗ್‌ಮೋಹನ್‌ಲಾಲ್‌ ಸಿನ್ಹಾ ಅವರ ತೀರ್ಪು ಧೈರ್ಯತನದ್ದು. ಹೀಗೆಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.

Advertisement

ಉತ್ತರ ಪ್ರದೇಶ ಕಾನೂನು ವಿವಿ ಮತ್ತು ಅಲಹಾಬಾದ್‌ ಹೈಕೋರ್ಟ್‌ನ ನೂತನ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ವೇಳೆ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:2022 ಚುನಾವಣೆ ಟಾರ್ಗೆಟ್ : ‘ಜನ್ ಮನ್ ವಿಜಯ್’ ಅಭಿಯಾನಕ್ಕೆ ಅಖಿಲೇಶ್ ಯಾದವ್ ಚಾಲನೆ

“ಚುನಾವಣೆಗಳಲ್ಲಿ ಅಕ್ರಮ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನ್ಯಾ.ಜಗ್‌ಮೋಹನ್‌ಲಾಲ್‌ ಸಿನ್ಹಾ ಅವರು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದು ಧೈರ್ಯದ ಕ್ರಮ. ಇದರಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಪರಿಸ್ಥಿತಿ ಉಂಟಾಗಿತ್ತು. ಅದರ ಪರಿಣಾಮವನ್ನು ನಾನು ವಿವರಿಸಬೇಕಾಗಿಲ್ಲ’ ಎಂದು ಸಿಜೆಐ ರಮಣ ಅಭಿಪ್ರಾಯಪಟ್ಟಿದ್ದಾರೆ. ಅಲಹಾಬಾದ್‌ ಹೈಕೋರ್ಟ್‌ ಕೂಡ 150 ವರ್ಷಗಳ ಅವಧಿಯಲ್ಲಿ ಕಾನೂನು ಕ್ಷೇತ್ರಕ್ಕೆ ಅತ್ಯುತ್ತಮ ನ್ಯಾಯವೇತ್ತರನ್ನು ನೀಡಿದೆ ಎಂದು ಕೊಂಡಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next