Advertisement
ಈ ಕಾಲೋನಿಯಲ್ಲಿ ವಾಸವಿರುವ ಎಲ್ಲಾ ಪೌರಕಾರ್ಮಿಕ ಕುಟುಂಬಗಳಿಗೆ ನಿಯಮಾನುಸಾರ ವಾಸಸ್ಥಳದ ದಾಖಲೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನ ನೀಡಿರುವ ಮೀಸಲಾತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
Related Articles
Advertisement
ಮಧ್ಯಮ ವರ್ಗದವರ ಹಾಗೂ ಬಡವರ ಮಕ್ಕಳಿಗೆ ಯಾವುದೇ ಸರ್ಕಾರಿ ನೌಕರಿಯಾಗಲಿ ಅಥವಾ ಸರ್ಕಾರದ ಸವಲತ್ತುಗಳನ್ನು ಪಡೆಯಲಾಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಸ್ಥರು ಇಂತಹ ಕೀಳರಿಮೆ ಬಿಟ್ಟು ಮೀಸಲಾತಿಯಲ್ಲಿ ಉದ್ಯೋಗ ಪಡೆಯದೇ, ಬಡವರ ಮಕ್ಕಳಿಗೆ ಉದ್ಯೋಗ ದೊರೆಯುವಂತೆ ಅವಕಾಶ ಕಲ್ಪಿಸಲಿ ಎಂದು ಮನವಿ ಮಾಡಿದರು.
ಪೌರಕಾರ್ಮಿಕರು ಮುಗ್ಧರು, ಇವರಲ್ಲಿ ಮಾನವೀಯತೆಯಿಂದ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ದನಿಯಿಲ್ಲದ ಇಂತಹವರಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಜವಾಬ್ದಾರಿ ಬರೀ ಸರ್ಕಾರದ್ದಲ್ಲ. ಎಲ್ಲಾ ಪ್ರಜಾnವಂತ ನಾಗರಿಕರದು ಎಂದು ತಿಳಿಸಿದರು. ಬಹಳ ಹಿಂದಿನಿಂದಲೂ ಜಾತಿ ವ್ಯವಸ್ಥೆ ಬೇರೂರಿದ್ದು, ಸಹೋದರತ್ವ, ಸೌಹಾರ್ದತೆ, ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ದಸಂಸ ಉಪಪ್ರಧಾನ ಸಂಚಾಲಕ ಎಚ್.ಬಿ.ದಿವಾಕರ್, ದಲಿತ ಮುಖಂಡ ಹನಸೋಗೆ ನಾಗರಾಜ್, ಗ್ರಾಪಂ ಅಧ್ಯಕ್ಷ ಮಹದೇವ್, ತಾಪಂ ಸದಸ್ಯೆ ಶೋಭಾಕೋಟೇಗೌಡ, ದಸಂಸ ತಾಲೂಕು ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಸಂಘಟನಾ ಸಂಚಾಲಕರಾದ ಎಸ್.ಎನ್.ಮೂರ್ತಿ, ಸುಧಾಕರ, ಮೈಸೂರು ನಗರ ಸಂಚಾಲಕ ಬಸವನಗುಡಿ ಕೆ.ನಂಜಪ್ಪ, ತಾಲೂಕು ದಸಂಸ ಪದಾಧಿಕಾರಿಗಳು, ಪೌರಕಾರ್ಮಿಕರು, ಗ್ರಾಪಂ ಸದಸ್ಯರು ಇದ್ದರು.
ಕೃಷ್ಣರಾಜನಗರ ತಾಲೂಕಿನಲ್ಲಿ ಎಲ್ಲಾ ಕೋಮಿನವರು ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದೇನೆ. ತಾನು ಶಾಸಕನಾದ ಬಳಿಕ ದೌರ್ಜನ್ಯ ಪ್ರಕರಣಗಳು ಮತ್ತು ಸಣ್ಣ ಸಂಘರ್ಷಕ್ಕೂ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದ್ದೇನೆ.-ಸಾ.ರಾ.ಮಹೇಶ್, ಶಾಸಕ