Advertisement
ವಿಶ್ವದ ಮತ್ಯಾವ ರಾಷ್ಟ್ರದಲ್ಲೂ ಇಲ್ಲದ ಹುಲಿ, ಆನೆ ಹಾಗೂ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿಭಾರತದಲ್ಲಿ ನೆಲೆ ಕಂಡುಕೊಂಡಿವೆ. ದೇಶದಲ್ಲಿ 51 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2018ರ ರಾಷ್ಟ್ರೀಯ ಹುಲಿ ಗಣತಿ ಪ್ರಕಾರ 2,967ಹುಲಿ, 2017ರ ಆನೆ ಗಣತಿ ಪ್ರಕಾರ 27,312 ಆನೆ ಹಾಗೂ 2015ರ ಸಮೀಕ್ಷೆ ಪ್ರಕಾರ 9,265 ಚಿರತೆಗಳು ದೇಶ ದಲ್ಲಿವೆ. ಹೀಗಿದ್ದರೂ ಇತ್ತೀಚೆಗೆ ಕೇಂದ್ರಹಣಕಾಸು ಸಚಿವೆ ಮಂಡಿಸಿದ ಬಜೆಟ್‌ನಲ್ಲಿ ಹುಲಿ ಮತ್ತು ಆನೆ ಯೋಜನೆಗೆಕಡಿಮೆ ಪ್ರಮಾಣದ ಅನುದಾನ ನೀಡಿರುವುದು ಪರಿಸರವಾದಿಗಳಲ್ಲಿ ಬೇಸರ ಮೂಡಿಸಿದೆ. ಜೊತೆಗೆ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಹಣದ ಕೊರತೆ ಎದುರಾಗುವ ಸಾಧ್ಯತೆ ಗೋಚರಿಸಿದೆ.
Related Articles
Advertisement
50 ಕೋಟಿ ಕಡಿತ: ಹುಲಿ ಯೋಜನೆಗೆ (ಪ್ರಾಜೆಕ್ಟ್ ಟೈಗರ್) ಕೇಂದ್ರ ಸರ್ಕಾರ 2019-20ರಲ್ಲಿ 282 ಕೋಟಿ ರೂ., 2020-21ರಲ್ಲಿ 300 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ಈ ಬಾರಿಯ 2021-22 ಬಜೆಟ್‌ನಲ್ಲಿ 250 ಕೋಟಿ ನೀಡುವ ಮೂಲಕ 50 ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ.
ಆನೆ ಯೋಜನೆಗೂ ಕತ್ತರಿ: ದೇಶದಲ್ಲಿ ಆನೆ ಸಂತತಿ ಉಳಿವಿಗಾಗಿ ಆರಂಭಿಸಿದ ಆನೆ ಯೋಜನೆಗೆ ಕೇಂದ್ರ ಸರ್ಕಾರ 2019-2020ರಲ್ಲಿ 32 ಕೋಟಿ ರೂ. 2020-2021ರಲ್ಲಿ 35 ಕೋಟಿ ರೂ. ನೀಡಿತ್ತು. ಆದರೆ, ಈ ವರ್ಷ 33 ಕೋಟಿ ರೂ. ಮೀಸಲಿಡುವ ಮೂಲಕ 2 ಕೋಟಿ ರೂ. ಕಡಿತಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ 2019-20ರಲ್ಲಿ 8.50 ಕೋಟಿ ರೂ.ನೀಡಿದ್ದ ಸರ್ಕಾರ, 2020-21ರಲ್ಲಿ 10.50 ಕೋಟಿ ರೂ. ನೀಡಿತ್ತು. ಆದರೆ. 2021-22ರ ಬಜೆಟ್‌ನಲ್ಲಿ 50 ಲಕ್ಷ ರೂ.ಕಡಿತ ಮಾಡಿ 10 ಕೋಟಿ ರೂ.ಗೆ ಇಳಿಸಿದೆ.
ವನ್ಯಜೀವಿಗಳ ಅವಾಸಸ್ಥಾನ ವಿಸ್ತರಣೆ ಪ್ರೋತ್ಸಾಹಕ್ಕೆ 2019-20ರಲ್ಲಿ 155 ಕೋಟಿ ರೂ., 2020-21ರಲ್ಲಿ 148 ಕೋಟಿ ರೂ. ಹಣ ನೀಡಿದ್ದ ಸರ್ಕಾರ ಈ ವರ್ಷ ಅದನ್ನು 116 ಕೋಟಿ ರೂ.ಗೆ ಇಳಿಸುವ ಮೂಲಕವನ್ಯಜೀವಿ ಮತ್ತು ಅರಣ್ಯವನ್ನು ಅನುತ್ಪಾದಕ ವಲಯಎಂದು ಭಾವಿಸಿದಂತಿದೆ ಎಂದು ವನ್ಯಜೀವಿ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್‌ನಲ್ಲಾದರೂ ಅನುದಾನ ಹೆಚ್ಚಿಸಿ: ಕರ್ನಾಟಕ ರಾಜ್ಯವು ಅತಿ ಹೆಚ್ಚು ಹುಲಿ, ಆನೆಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಹೊಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿಯಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವಮೂಲಕ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಲಿ ಎಂಬುದು ಪರಿಸರವಾದಿಗಳ ಆಶಯವಾಗಿದೆ.
ಜಗತ್ತಿನ ಸದ್ಯದ ಪರಿಸ್ಥತಿ ಗಮನಿಸಿದರೆ ಅರಣ್ಯ ಪರಿಸರ ಅವನತಿಯತ್ತಸಾಗಿದೆ. ನಾವೆಲ್ಲರೂ ಪರಿಸರವನ್ನುಒಂದಲ್ಲ ಒಂದು ರೀತಿ ನಿರ್ಲಕ್ಷ್ಯ ಮಾಡಿಕೊಂಡೇ ಬಂದಿದ್ದೇವೆ. ಆಳುವ ಸರ್ಕಾರಗಳು ಸಹಾ ಪರಿಸರವನ್ನು ಅನುತ್ಪಾದಕವಲಯ ಎಂದು ಭಾವಿಸಿವೆ. ಈ ಮನೋ ಭಾವ ಬದಲಾಗಿ ಪರಿಸರ, ಅರಣ್ಯ,ವನ್ಯಜೀವಿಯತ್ತ ಹೆಚ್ಚು ಆಸಕ್ತಿ ವಹಿಸ ಬೇಕು. ಆದರೆ ಇದಕ್ಕೆ ಪೂರಕವಾದ ಬಜೆಟ್ ನೀಡದೇ ಇರುವುದು ದುರಾದೃಷ್ಟಕರ. – ಕೃಪಾಕರ, ವನ್ಯಜೀವಿ ತಜ್ಞರು
ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿಹುಲಿ ಯೋಜನೆ, ಆನೆ ಯೋಜನೆ ಗಳಿಗೆ ಅನುದಾನ ಕಡಿತಗೊಳಿಸಿರುವುದು ಖುಷಿಯ ವಿಚಾರ. ಹೆಚ್ಚು ಅನುದಾನನೀಡಿದರೆ ಅಧಿಕಾರಿಗಳು ಕಾಡಿನಲ್ಲಿಇಲ್ಲಸಲ್ಲದ ಅಭಿವೃದ್ಧಿ ಮಾಡಿ, ಕಾಡನ್ನುಹಾಳುಗೆಡುವುತ್ತಾರೆ. ಸರ್ಕಾರಗಳು ಕಾಡುಮತ್ತು ವನ್ಯ ಜೀವಿಗಳ ರಕ್ಷಣೆಗಷ್ಟೇಅನುದಾನ ನೀಡಬೇಕು. – ಕೆ.ಎಂ.ಚಿಣ್ಣಪ್ಪ, ನಿವೃತ್ತ ಅರಣ್ಯಾಧಿಕಾರಿ
– ಸತೀಶ್ ದೇಪುರ