Advertisement

ವಿದ್ಯಾರ್ಥಿಗಳಿಗೆ ಓದುವ ಬೆಳಕು ಚೆಲ್ಲಲು “ಗ್ರಂಥಮಿತ್ರ’

05:21 PM Dec 14, 2021 | Team Udayavani |

ಕುಂದಾಪುರ: ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಉಡುಪಿ ಜಿಲ್ಲಾ ಪಂಚಾಯತ್‌ ವಿನೂತನ ಕ್ರಮ ಕೈಗೊಂಡಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಇರುವ ಗ್ರಂಥಾಲಯಗಳಲ್ಲಿ ಗ್ರಂಥಮಿತ್ರರನ್ನು ನೇಮಿಸಲು ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಜಿಲ್ಲೆಯ ಕಟಪಾಡಿ ಹಾಗೂ ಬಸ್ರೂರು ಪಂಚಾಯತ್‌ಗಳಲ್ಲಿ ಗ್ರಂಥ ಮಿತ್ರರು ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಓದುವ ಬೆಳಕು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆರಂಭಿಸಿದ ಮಹತ್ವಾಕಾಂಕ್ಷಿ “ಓದುವ ಬೆಳಕು’ ಯೋಜನೆ. ಕೊರೊನಾ ಸಮಯದಲ್ಲಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಈ ಓದುವ ಬೆಳಕು ಯೋಜನೆಯನ್ನು ಆರಂಭಿಸಲಾಗಿತ್ತು. ಗ್ರಾಮೀಣ ಗ್ರಂಥಾಲಯದಲ್ಲಿ 6ರಿಂದ 18 ವರ್ಷಗಳ ವಿದ್ಯಾರ್ಥಿಗಳ ಉಚಿತ ನೋಂದಣಿ ಮಾಡಿ ಅವರಿಗೆ ಪುಸ್ತಕ ವಿತರಿಸುವ ಯೋಜನೆ ಇದಾಗಿದೆ.

ಪುಸ್ತಕ ಕೊಡುಗೆ
ಗ್ರಂಥಾಲಯಗಳನ್ನು ಆರಂಭಿಸಿದರೆ ಸಾಲದು. ಪ್ರತಿದಿನ ತೆರೆಯಬೇಕು, ಅವುಗಳಿಗೆ ಓದುಗರು ಬರುವಂತೆ ಮಾಡಬೇಕು, ಓದುಗರಿಗೆ ಅಗತ್ಯ ಇರುವ ಪುಸ್ತಕಗಳು ದೊರೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಗ್ರಾಮ ಪಂಚಾಯತ್‌ ಗ್ರಂಥಾಲಯಗಳಿಗೆ ದಾನಿಗಳಿಂದ ಪುಸ್ತಕ ಸಂಗ್ರಹಿಸಲು ಅನುವು ಮಾಡಿ ಕೊಡಲಾಗಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಪುಸ್ತಕ ಸಂಗ್ರಹ ನಡೆಯುತ್ತಿದೆ. ಕುಂದಾಪುರ ತಾಲೂಕಿನಲ್ಲಿ 36 ಗ್ರಂಥಾಲಯಗಳಲ್ಲಿ ವಿವಿಧ ದಾನಿಗಳಿಂದ, ಪುಸ್ತಕ ಪ್ರೇಮಿಗಳಿಂದ 11 ಸಾವಿರದಷ್ಟು ಪುಸ್ತಕ ಸಂಗ್ರಹಿಸಲಾಗಿದೆ. ಇದರಲ್ಲಿ ಮಕ್ಕಳ ಪುಸ್ತಕಗಳು 2,752, ಹಿರಿಯರ ಪುಸ್ತಕಗಳು 7,251, ದಿನಪತ್ರಿಕೆಗಳು 1,078, ವಾರಪತ್ರಿಕೆಗಳು 452.

ಪುಸ್ತಕ ಓದು
ಗ್ರಂಥಾಲಯ ಆರಂಭಿಸಿ, ಪುಸ್ತಕಗಳನ್ನಷ್ಟೇ ಪೇರಿಸಿಟ್ಟರೆ ಧೂಳು ತುಂಬುವುದು ಮಾತ್ರ. “ಪುಸ್ತಕದ ಹುಳ’ಗಳ ಸೃಷ್ಟಿ ಆಗಬೇಕು. ಇಷ್ಟಪಟ್ಟು ಪುಸ್ತಕ ಓದುವ ಆಸಕ್ತರು ಹುಟ್ಟಬೇಕು. ಡಿಜಿಟಲ್‌ ಮನೋರಂಜನಾ ಮಾಧ್ಯಮ ಬರುವ ಮುನ್ನ ಬಹುತೇಕ ಕಿರಿಯರು, ಹಿರಿಯರು ಮನೋರಂಜನೆಗಾಗಿ, ಓದಿಗಾಗಿ, ಮಾಹಿತಿಗಾಗಿ ಪುಸ್ತಕಗಳ ಮೊರೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪುಸ್ತಕಂ ವನಿತಾ ವಿತ್ತಂ ಪರಹಸ್ತ ಗತಂ ಗತಂ| ಯದಿ ವಾ ಪುನರಾಯಾತಂ ಜೀರ್ಣಂ ಭ್ರಷ್ಟಾ ಚ ಖಂಡಶಃ| ಎಂಬ ಸುಭಾಷಿತದಂತೆ ಪುಸ್ತಕ, ಹೆಣ್ಣು ಅಥವಾ ಹಣವನ್ನು ಬೇರೆಯವರಿಗೆ ಕೊಟ್ಟರೆ ಮೂಲಸ್ವರೂಪದಲ್ಲಿ ಪೂರ್ಣರೂಪದಲ್ಲಿ ಮರಳಿ ದೊರೆಯುವುದಿಲ್ಲ ಎಂದು ಅರ್ಥ. ಆದ್ದರಿಂದ ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ನೀಡುತ್ತಿರಲಿಲ್ಲ, ಜತನ ಮಾಡುತ್ತಿದ್ದರು. ಈಗ ಪುಸ್ತಕ ಓದುವವರ ಸಂಖ್ಯೆಯೇ ಕಡಿಮೆಯಾಗಿದೆ. ರಾಜ್ಯ ಸರಕಾರ ಕೆಲವು ಸಮಯದ ಹಿಂದೆ ಮುಖ್ಯಮಂತ್ರಿ, ಸಂಸ್ಕೃತಿ ಸಚಿವರು ಹೂಗುತ್ಛ ಬದಲು ಪುಸ್ತಕ ನೀಡಬೇಕೆಂದು ಮನವಿ ಕೂಡ ಮಾಡಿದ್ದರು. ಈ ನಿಟ್ಟಿನಲ್ಲಿ ಪುಸ್ತಕ ವಲಯದಲ್ಲಿ ಸಂಚಲನ ಮೂಡಿದೆ.

ಗ್ರಂಥಾಲಯ
ಕುಂದಾಪುರ, ಬೈಂದೂರು ತಾಲೂಕಿನಲ್ಲಿ 56 ಗ್ರಾಮೀಣ ಗ್ರಂಥಾಲಯಗಳಿವೆ. ಕುಂದಾಪುರ ತಾಲೂಕಿನಲ್ಲಿ 45 ಪಂಚಾಯತ್‌ಗಳ ಪೈಕಿ 36 ಪಂಚಾಯತ್‌ಗಳಲ್ಲಿ ಗ್ರಂಥಾಲಯಗಳಿವೆ. 35 ಗ್ರಂಥಾಲಯಗಳು ಪಂಚಾಯತ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ 1 ಬಾಡಿಗೆ ಕಟ್ಟಡದಲ್ಲಿದೆ. ಈ ಗ್ರಾಮೀಣ ಗ್ರಂಥಾಲಯದ ಆಸುಪಾಸಿನ ಶಾಲೆಗಳ ಮಕ್ಕಳನ್ನು ಈ ಓದುವ ಬೆಳಕು ಯೋಜನೆಯಡಿ ಹೆಸರು ನೋಂದಾಯಿಸಿ,ಅವರಿಗೆ ಪುಸ್ತಕಗಳನ್ನು ನೀಡಲಾಗುತ್ತಿದೆ. ತ್ರಾಸಿ, ಹೆಮ್ಮಾಡಿ ಲೈಬ್ರರಿ ಡಿಜಿಟಲೀಕರಣಗೊಂಡು ನವೀಕರಣವಾಗಿದೆ.

Advertisement

ಗ್ರಂಥಮಿತ್ರ
ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಲು ಗ್ರಂಥಮಿತ್ರರ ನೇಮಕ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು ಸ್ವ ಆಸಕ್ತಿಯಿಂದ ಗ್ರಾಮ ಪಂಚಾಯತ್‌ ಗ್ರಂಥಾಲಯಗಳಲ್ಲಿ , ಪಂಚಾಯತ್‌ ಸಭಾಂಗಣಗಳಲ್ಲಿ ಶನಿವಾರ ಹಾಗೂ ರವಿವಾರ ಆಗಮಿಸಿ ಮಕ್ಕಳಿಗೆ ಓದುವ ಅಭ್ಯಾಸ ಬೆಳೆಸಲು ನೆರವಾಗುವುದು ಈ ಹುದ್ದೆಯ ಸೃಷ್ಟಿಯ ಉದ್ದೇಶ. ಇದು ಪೂರ್ಣಪ್ರಮಾಣದಲ್ಲಿ ಸ್ವಯಂಸೇವಾ ನೆಲೆ. ಕಾಲೇಜು ಮಕ್ಕಳ ಬದಲು ಯಾವುದಾದರೂ ಸ್ವಯಂಸೇವಾ ಸಂಸ್ಥೆಗಳು ಆಸಕ್ತಿ ವಹಿಸಿದರೆ ಅವರಿಗೆ ಆಡಳಿತದ ವತಿಯಿಂದ ಪೂರ್ಣ ನೆರವು ದೊರೆಯಲಿದೆ. ಆದರೆ ಪೂರ್ಣವಾಗಿ ಉಚಿತ ಸೇವೆ ಸಲ್ಲಿಸಬೇಕಾಗುತ್ತದೆ. ಪ್ರಯಾಣ ಹಾಗೂ ದಿನ ಭತ್ತೆ ಕೂಡ ಇರುವುದಿಲ್ಲ. ಕೊರೊನಾ, ಮತ್ಯಾವು ದೋ ನೆವದಿಂದ ಓದುವ ಅಭ್ಯಾಸ ಬಿಟ್ಟು ಹೋದುದನ್ನು, ಹೊಸದಾಗಿ ಓದುವ ಅಭ್ಯಾಸ ಬೆಳೆಸಿಕೊಳ್ಳುವುದಕ್ಕೆ ಈ ಗ್ರಂಥಮಿತ್ರರು ನೆರವಾಗಲಿದ್ದಾರೆ. ಪ್ರಾಯೋಗಿಕ ನೆಲೆಯಲ್ಲಿ ಪೈಲಟ್‌ ಯೋಜನೆಯಾಗಿ ಕಟಪಾಡಿ ಹಾಗೂ ಬಸ್ರೂರು ಪಂಚಾಯತ್‌ಗಳಲ್ಲಿ ಈ ಕ್ರಮ ಆರಂಭಿಸಲಾಗಿದೆ.

ಯಶಸ್ಸು ಸಿಕ್ಕರೆ ವಿಸ್ತರಣೆ
ಪ್ರಾಯೋಗಿಕ ನೆಲೆಯಲ್ಲಿ 2 ಪಂಚಾಯತ್‌ಗಳಲ್ಲಿ ಆರಂಭಿಸಿದ್ದು ಯಶಸ್ಸು ಸಿಕ್ಕರೆ ವಿಸ್ತರಿಸ ಲಾಗುವುದು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು, ಅನಗತ್ಯ ಡಿಜಿಟಲ್‌ ಸಹವಾಸ ಕಡಿಮೆ ಮಾಡಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಉಚಿತ ನೆಲೆಯಲ್ಲಿ ಸ್ವಯಂ ಸೇವೆ ಸಲ್ಲಿಸಲು ಎನ್‌ಜಿಒಗಳು ಮುಂದೆ ಬಂದರೆ ಆಡಳಿತಾತ್ಮಕ ನೆರವು ನೀಡಲಾಗುವುದು.
-ಡಾ| ನವೀನ್‌ ಭಟ್‌, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಉಡುಪಿ ಜಿ.ಪಂ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next