Advertisement
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರಕಾರಿ ಆಸ್ಪತ್ರೆ ಬಳಿ ಮಂಜೂ ರಾಗಿದ್ದ 19 ಸೆಂಟ್ಸ್ ಜಾಗ ಬದಲಾಯಿಸಿ ಬನ್ನೂರು ಪ್ರಾದೇಶಿಕ ಸಾರಿಗೆ ಕಚೇರಿ ಪಕ್ಕದಲ್ಲಿ 75 ಸೆಂಟ್ಸ್ ಜಾಗ ಗುರುತು ಮಾಡಿರುವ ವಿಚಾರದಲ್ಲಿ ಕಳೆದ ಹಲವು ತಿಂಗಳಿನಿಂದ ದಲಿತ ಮುಖಂಡರ ಎರಡು ತಂಡ ಹಾಗೂ ಕಂದಾಯ ಇಲಾಖೆ ನಡುವೆಯೇ ಭಿನ್ನಾಭಿಪ್ರಾಯ ಕೇಳಿ ಬಂದಿತ್ತು.
Related Articles
Advertisement
ಹಲವು ವರ್ಷಗಳ ಹಿಂದೆ ದಲಿತ ಸಂಘಟನೆಗಳ ನಿರಂತರ ಹೋರಾಟದ ಬಳಿಕ ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಸರಕಾರಿ ಆಸ್ಪತ್ರೆಯ ಸಮೀಪದಲ್ಲೇ 19 ಸೆಂಟ್ಸ್ ಸ್ಥಳ ಅಂಬೇಡ್ಕರ್ ಭವನಕ್ಕಾಗಿ ಮಂಜೂರಾಗಿತ್ತು. ಭವನ ನಿರ್ಮಾಣಕ್ಕೆ 2 ಕೋ.ರೂ. ಅನುದಾನವನ್ನು ಕಾದಿರಿಸಲಾಗಿತ್ತು. ಕೆಲವು ಸಮಯದ ಹಿಂದೆ ಈ ಜಾಗವನ್ನು ಸರಕಾರಿ ಆಸ್ಪತ್ರೆಗೆ ನೋಂದಾಯಿಸಲಾಗಿದೆ. ಇದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು.
ವ್ಯಕ್ತವಾಗದ ಸಹಮತ :
ಕರ್ಮಲದಲ್ಲಿ ಅಂಬೇಡ್ಕರ್ ಭವನಕ್ಕೆ 25 ಸೆಂಟ್ಸ್ ಜಾಗ ಗುರುತಿಸಿದ್ದರೂ ಅದಕ್ಕೆ ಸಹಮತ ವ್ಯಕ್ತವಾಗಲಿಲ್ಲ. ಕೊನೆಗೆ ಬನ್ನೂರು ಜಾಗ ಗುರುತಿಸಿಲಾಗಿತ್ತು.
75 ಸೆಂಟ್ಸ್ ಜಮೀನು :
ನಗರದ ಬನ್ನೂರಿನ ಮೆಸ್ಕಾಂ ಕಚೇರಿಯ ಬಳಿ ಸರಕಾರಿ ಪಾರ್ಕ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 75 ಸೆಂಟ್ಸ್ ಸ್ಥಳವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಇದರ ಪಹಣಿಪತ್ರವು ಆಗಿದೆ. ನಗರ ಮಧ್ಯದಲಿದ್ದ 19 ಸೆಂಟ್ಸ್ ಸ್ಥಳ ಏನೇನೂ ಸಾಲದು. ಅದರ 3 ಪಟ್ಟಿಂಗಿತಲೂ ಅಧಿಕ ಜಮೀನು ಬನ್ನೂರಿನಲ್ಲಿ ಲಭ್ಯ ಇರುವ ಕಾರಣ ಅದನ್ನು ಒಪ್ಪಿಕೊಳ್ಳಲು ಅಡ್ಡಿಯಿಲ್ಲ ಎನ್ನುವುದು ಬನ್ನೂರಿನಲ್ಲಿ ಜಾಗದ ಪರ ಇರುವ ದಲಿತ ಮುಖಂಡರ ಅಭಿಪ್ರಾಯ. ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಸುಮಾರು 6 ಲಕ್ಷ ಜನರಿದ್ದು ಅವರ ಚಟುವಟಿಕೆಗಳಿಗೆ ಪೂರಕವಾಗಿ ಅಂಬೇಡ್ಕರ್ ಭವನ ಅನಿವಾರ್ಯವಾಗಿದೆ.
ಪಹಣಿಪತ್ರ ಮಾಡಲಾಗಿದೆ:
ಅಂಬೇಡ್ಕರ್ ಭವನಕ್ಕೆ ಬನ್ನೂರಿನಲ್ಲಿ 75 ಸೆಂಟ್ಸ್ ಜಾಗ ಮಂಜೂರುಗೊಳಿಸಿ ಪಹಣಿಪತ್ರ ಮಾಡಲಾಗಿದೆ. ಭವಿಷ್ಯದಲ್ಲಿ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾದಲ್ಲಿ ಅದಕ್ಕೆ ಆವಶ್ಯಕತೆ ಇರುವುದನ್ನು ಮನಗಂಡು 19 ಸೆಂಟ್ಸ್ ಜಾಗವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದರಲ್ಲಿ ಬೇರೆ ಉದ್ದೇಶ ಇಲ್ಲ.–ರಮೇಶ್ ಬಾಬು, ತಹಶೀಲ್ದಾರ್, ಪುತ್ತೂರು.