Advertisement

ಹೈಮಾಸ್ಟ್‌ ದೀಪಕ್ಕೆ ಅನುದಾನ: ಶಾಸಕ ರಹೀಂ

05:16 PM Feb 11, 2021 | Team Udayavani |

ಬೀದರ: ಶಹಾಪುರ ಗೇಟ್‌ ಹತ್ತಿರದಲ್ಲಿನ ಹಳ್ಳದಕೇರಿ 88 ಟೀ ಪಾರ್ಕ್‌ನಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆಗೆ ಶಾಸಕರ ನಿಧಿ ಯಿಂದ ಅನುದಾನ ನೀಡುವುದಾಗಿ
ಶಾಸಕ ರಹೀಂ ಖಾನ್‌ ತಿಳಿಸಿದರು. ಹಳ್ಳದಕೇರಿಯ ಪಾರ್ಕ್‌ಗೆ ಶಾಸಕ ರಹೀಮ್‌ ಖಾನ್‌ ಭೇಟಿ ನೀಡಿ ಅ ಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲಿದ್ದ ಔಷಧಿ  ಸಸಿಗಳ ಉಪಯೋಗದ ಮತ್ತು ಕುಡಿಯುವ ನೀರಿನ ಸೌಕರ್ಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಟೀ ಪಾರ್ಕ್‌ 25 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿದ್ದು, ಬೆಳಗ್ಗೆ ಸಾರ್ವಜನಿಕರು ವಾಕ್‌ ಮಾಡಬಹುದು. ಚಿಕ್ಕಮಕ್ಕಳಿಗೆ ಆಟವಾಡಲು ಅನುಕೂಲವಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

ದೇವದೇವ ಗಾರ್ಡನ್‌ಗೆ ಭೇಟಿ: ಇದಕ್ಕೂ ಮೊದಲು ಶಾಸಕರು ದೇವದೇವ ವನದಲ್ಲಿರುವ ಗಾರ್ಡನ್‌ಗೆ ಭೇಟಿ ನೀಡಿದರು. ಈ ಗಾರ್ಡನ್‌ ಮೊದಲಿಗಿಂತಲೂ ಈಗ ತುಂಬಾ ಪ್ರಗತಿಯಾಗಿದೆ. ನೋಡಲು ಸುಮಧುರವಾಗಿದೆ. ಅತ್ಯುತ್ತಮ ಪರಿಸರ ಇಲ್ಲಿದೆ. ಇಲ್ಲಿಗೆ ಕೂಡ ಸಾರ್ವಜನಿಕರು ಭೇಟಿ ಕೊಡಬೇಕು ಎಂದು ತಿಳಿಸಿದರು.

ಶಹಾಪುರ ಗೇಟ್‌ ಹತ್ತಿರದ ನರ್ಸರಿಗೆ ಕೂಡ ಶಾಸಕರು ಭೇಟಿ ನೀಡಿದರು. ರೈತರಿಗೆ ಶ್ರೀಗಂಧ, ಹೆಬ್ಬೆವು, ಕರಿಬೇವು ಮತ್ತು ಲಿಂಬೆ ಇತರೆ ಜಾತಿಯ ಗಿಡಗಳನ್ನು ರೈತರಿಗಾಗಿ ಬೆಳೆಸಲಾಗಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗುವ ಹಾಗೆ ಕೂಡ ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆ ಅವರು ಶಾಸಕರಿಗೆ ಮಾಹಿತಿ ನೀಡಿದರು.

ಇಲ್ಲಿನ ನರ್ಸರಿಯಿಂದ ಸಾರ್ವಜನಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಎಂದು ಶಾಸಕರು ಅ ಧಿಕಾರಿಗಳಿಗೆ ಸೂಚಿಸಿದರು. ಕೃಷಿ ಪ್ರೋತ್ಸಾಹ
ಯೋಜನೆಯಡಿ ರೈತರಿಗೆ ಇರುವ ಸೌಕರ್ಯಗಳ ಬಗ್ಗೆ ಕೂಡ ತಿಳಿಸಲು ಶಾಸಕರು ಸಲಹೆ ಮಾಡಿದರು.

ಹೊಸ ಬಡಾವಣೆಗಳಲ್ಲಿ ಸಸಿ ನೆಡಿ: ಬೀದರ ನಗರದ ಹೊಸ ಬಡಾವಣೆಗಳಲ್ಲಿ ಕಡ್ಡಾಯ ಸಸಿಗಳನ್ನು ನೆಡಬೇಕು. ಜನರಿಗೆ ನೆರಳು ಆಗುವಂತಹ ಹೂ ಹಣ್ಣಿನ ಗಿಡಗಳನ್ನು ನೆಡಲು ಒತ್ತು ಕೊಡಬೇಕು ಎಂದು ಶಾಸಕರು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. ಸದಾನಂದ ಮತ್ತು ಅರಣ್ಯ ಇಲಾಖೆಯ ಇನ್ನೀತರ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next