ಬೆಳಗಾವಿ: ಕೈ ಬಿಟ್ಟು ಹೋಗಿದ್ದ 24×7 ನಿರಂತರ ನೀರು ಯೋಜನೆಗೆ ಮಂಜೂರಾತಿ ಪಡೆದಿರುವ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ.
ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ, 571.35 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 13 ವರ್ಷಗಳ ದುರಸ್ತಿ ಮತ್ತು ನಿರ್ವಹಣೆ ಸೇರಿ ಒಟ್ಟು 804.13 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಈ ಯೋಜನೆ ಮೂಲಕ ಬೆಳಗಾವಿ ಮಹಾನಗರದ 85 ಸಾವಿರಕ್ಕಿಂತಲೂ ಹೆಚ್ಚು ಮನೆಗಳಿಗೆ ನಿರಂತರವಾಗಿ 24×7 ನೀರು ತಲುಪಲಿದೆ. ಈ ಯೋಜನೆಯ ಗುತ್ತಿಗೆಯನ್ನು ಲಾರ್ಸನ್ ಆ್ಯಂಡ್ ಟ್ಯೂಬೋì ಕಂಪನಿ ಪಡೆದುಕೊಂಡಿದೆ. ನಾಳೆಯಿಂದ ಯೋಜನೆಯ ಸರ್ವೇ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದರು.
ಬೆಳಗಾವಿ ನಗರದ ನಿರಂತರ ನೀರು ಯೋಜನೆಯ ಸರ್ವೇ ಕಾರ್ಯ ಆರು ತಿಂಗಳ ಕಾಲ ನಡೆಯುತ್ತದೆ. 900 ಕಿ.ಮೀ. ಪೈಪಲೆ„ನ್, ಪಂಪಿಂಗ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತದೆ. ಒಂದು ವರ್ಷದಲ್ಲಿ 20 ಸಾವಿರ ಮನೆಗಳಿಗೆ ನೀರಿನ ಸಂಪರ್ಕಒಗದಗಿಸುವ ಜೊತೆಗೆ ನಾಲ್ಕು ವರ್ಷದಲ್ಲಿ ಬೆಳಗಾವಿ ಮಹಾನಗರದ 85 ಸಾವಿರಕ್ಕೂ ಹೆಚ್ಚು ಮನೆಗಳಿಗೆ 24×7 ನೀರಿನ ಸಂಪರ್ಕ ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ನಗರದ ನಿವಾಸಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಕಾಮಗಾರಿಯನ್ನು ವಿಡಿಯೋ ಕಾನ ರೆನ್ಸ್ ಮೂಲಕ ಉದ್ಘಾಟಿಸುವಂತೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಅವರ ಸಮ್ಮತಿಯ ಬಳಿಕ ಯೋಜನೆಯ ಕಾಮಗಾರಿಯನ್ನು ಶುಭಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಹಲವಾರು ವರ್ಷಗಳ ಹಿಂದೆಯೇ ಬೆಳಗಾವಿ ಮಹಾನಗರಕ್ಕೆ 2×7 ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಕಾರಣಾಂತರಗಳಿಂದ ಈ ಯೋಜನೆ ರದ್ದಾಗಿ ಅನುದಾನವೂ ವಾಪಸ್ ಹೋಗಿತ್ತು. ಕೂಡಲೇ ಶಾಸಕ ಅಭಯ ಪಾಟೀಲರು ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ಭೇಟಿಯಾಗಿ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ, ಕಳೆದ ಎರಡು ವರ್ಷಗಳಿಂದ ವಿಶ್ವಬ್ಯಾಂಕ್ ಅಧಿಕಾರಿಗಳ ಜೊತೆ, ಸರ್ಕಾರದ 13 ಇಲಾಖೆಗಳ ಕಾರ್ಯದರ್ಶಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ ಸಚಿವ ಸಂಪುಟದಲ್ಲಿಯೂ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ.