Advertisement

ಗ್ರಾಪಂ ಪಿಡಿಒ ಇನ್ನು ನೋಂದಣಾಧಿಕಾರಿ

05:16 PM Feb 21, 2022 | Team Udayavani |

ಮಧುಗಿರಿ: ಇನ್ನು ಗ್ರಾಪಂ ವ್ಯಾಪ್ತಿಯಲ್ಲಿ ಘಟಿಸುವ ಜನನ ಹಾಗೂ ಮರಣದ ನೋಂದಣಿ ಮಾಡುವ ಕೆಲಸವನ್ನು ಹೆಚ್ಚುವರಿಯಾಗಿ ನೀಡಿ ಪಿಡಿಒಗಳನ್ನು ನೋಂದಣಾಧಿಕಾರಿಗಳನ್ನಾಗಿಸಿದ್ದು, ಗ್ರಾಮ ಲೆಕ್ಕಿಗರನ್ನು ಉಪ ನೋಂದಣಾಧಿಕಾರಿಯಾಗಿ ನೇಮಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

Advertisement

ಗ್ರಾಮೀಣ ಭಾಗದಲ್ಲಿ ನಾಗರಿಕ ನೋಂದಣಿ ಕಾರ್ಯವನ್ನು ಬಲಪಡಿಸುವ ಉದ್ದೇಶದಿಂದಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯೀಕಇಲಾಖೆಯ ಅಧೀನ ಕಾರ್ಯದರ್ಶಿ ಪಾಪಣ್ಣ ಅವರು ಈ ಆದೇಶ ಹೊರಡಿಸಿದ್ದಾರೆ.

ಎಲ್ಲ ದತ್ತಾಂಶ ಲಭ್ಯ: ಜನನ-ಮರಣ ನೋಂದಣಿ ಅಧಿನಿಯಮ, 1969ರ ಪ್ರಕರಣ 7(1)ರಂತೆಗ್ರಾಮೀಣ ಪ್ರದೇಶದ ಕಂದಾಯ ಗ್ರಾಮಗಳಲ್ಲಿಜನನ, ಮರಣ ಕಾರ್ಯಕ್ರಮಕ್ಕೆ ಗ್ರಾಮಲೆಕ್ಕಿಗರನ್ನು ನೋಂದಣಾಧಿಕಾರಿಯಾಗಿ ನೇಮಿಸಿದೆ.ಆದರೆ, ಗ್ರಾಪಂ ಸ್ಥಳೀಯ ಸರ್ಕಾರದಂತೆ ಕಾರ್ಯ ಮಾಡುತ್ತಿದ್ದು, ಜನನ, ಮರಣಗಳ ತ್ವರಿತನೋಂದಣಿ ಮತ್ತು ವರದಿ ಮಾಡುವುದು,ಅನುಸೂಚಿತ 1ರಲ್ಲಿ ಪಂಚಾಯ್ತಿ ಜನರ ಎಲ್ಲ ದತ್ತಾಂಶವು ಲಭ್ಯವಾಗಬೇಕಿದೆ.

ಕಡ್ಡಾಯ ಕಾರ್ಯಕ್ರಮ: ಇದು ಗ್ರಾಮ ಪಂಚಾಯ್ತಿಯ ಕಡ್ಡಾಯ ಕಾರ್ಯಕ್ರಮವಾಗಿದೆ. ಈ ಕಾರ್ಯವನ್ನು ಪಿಡಿಒಗಳಿಗೆ ನೇಮಿಸಲುಪಂಚಾಯತ್‌ ರಾಜ್‌ ಇಲಾಖೆ ಕಾರ್ಯದರ್ಶಿಕೋರಿದ್ದಾರೆ. ಇದರಿಂದ ಶೇ.100 ರಷ್ಟುನೋಂದಣಿಗಳು ಸದೃಢವಾಗಿರುತ್ತವೆ. ಈ ಬಗ್ಗೆಕೇಂದ್ರ ಜನನ, ಮರಣ ಮಹಾ ನೋಂದಣಾಧಿಕಾರಿಗಳನ್ನು ಕೋರಿದ್ದು, ಅವರ ಸೂಚನೆಯಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದಗ್ರಾಮ ಪಂಚಾಯ್ತಿಗಳು ಜನನ ಮತ್ತುಮರಣ ನೋಂದಣಿಯ ಕಾರ್ಯವನ್ನು ಹೆಚ್ಚುವರಿಯಾಗಿ ಮಾಡಬೇಕೆಂದು ಸೂಚಿಸಲಾಗಿದೆ.

ಡಿ.12ರಲ್ಲಿ ನಡೆದ ಸಭೆಯಲ್ಲೂ ಈತೀರ್ಮಾನ ಹೊರ ಬಿದ್ದಿದ್ದು, ಜನನ ಮತ್ತು ಮರಣನೋಂದಣಿ ಅಧಿನಿಯಮ 1969ರ 7(1)ರನ್ವಯಪಿಡಿಒಗಳನ್ನು ಜನನ, ಮರಣ ನೋಂದಣಾಧಿಕಾರಿಗಳಾಗಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನುಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

Advertisement

ಕೆಲಸದ ಜವಾಬ್ದಾರಿ ಸರ್ಕಾರ ಹಂಚಿಕೆ ಮಾಡಲಿ :

ಸರ್ಕಾರದ ಕೆಲಸ ದೇವರ ಕೆಲಸ. ನಾವು ಅದನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದು, ಕೆಲವು ದೋಷಗಳಿರಬಹುದು. ಆದರೆ, ಗ್ರಾಪಂನ ಅನುದಾನ ಕಡಿತ ಮಾಡಿದ್ದು, ಹೆಚ್ಚುವರಿ ಜವಾಬ್ದಾರಿನೀಡಿದರೆ ಹೇಗೆ ನಿಭಾಯಿಸಲು ಸಾಧ್ಯ. ಅನುದಾನ ಕಡಿಮೆಗೊಳಿಸಿದ ಕಾರಣ ಜನಪ್ರತಿನಿಧಿಗಳ ಒತ್ತಡ ಒಂದೆಡೆಯಾದರೆ, ಮೇಲಾಧಿಕಾರಿಗಳ ಆದೇಶ ಪಾಲಿಸಲು ಕಷ್ಟ ಸಾಧ್ಯವಾಗುತ್ತಿದೆ. ಮೊನ್ನೆ ಅಂಗನವಾಡಿ ನಿರ್ವಹಣೆ ಗ್ರಾಪಂಗೆ ನೀಡಿದ್ದು, ಇಂದು ಜನನ-ಮರಣ ನೋಂದಣಿ ಕಾರ್ಯವನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಿದ್ದು, ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಅನುದಾನ ನೀಡಿ ಕೆಲಸದ ಜವಾಬ್ದಾರಿ ಹಂಚಿಕೆ ಮಾಡಿದರೆ ಸುಗಮವಾಗಿ ಸರ್ಕಾರದ ಕೆಲಸ ನಡೆಯುತ್ತವೆ ಎಂದು ಹೆಸರೇಳದ ಪಿಡಿಒ ಅಭಿಪ್ರಾಯಪಟ್ಟಿದ್ದಾರೆ.

-ಮಧುಗಿರಿ ಸತೀಶ

Advertisement

Udayavani is now on Telegram. Click here to join our channel and stay updated with the latest news.

Next