Advertisement

ಗ್ರಾಮ ಪಂಚಾಯತ್ ಚುನಾವಣೆಗೆ ಸ್ನಾತಕೋತ್ತರ ಪದವಿಧರ ದಂಪತಿಗಳ ಸ್ಪರ್ಧೆ

05:39 PM Dec 16, 2020 | sudhir |

ಬನಹಟ್ಟಿ : ಗ್ರಾಮ ಪಂಚಾಯತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಒಂದಿಲ್ಲ ಒಂದು ವಿಶೇಷತೆಗಳು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತವೆ ಅಂತೆಯೇ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಸ್ವರಾಜ್ಯದ ಕನಸ್ಸು ಕಂಡು ಸುಂದರ ಹಾಗೂ ಸ್ವಚ್ಛ ಗ್ರಾಮಕ್ಕಾಗಿ ಗಾಯಕವಾಡ ದಂಪತಿಗಳು ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Advertisement

ಆಸಂಗಿ ಗ್ರಾಮಪಂಚಾಯತಿಯೂ ಆಸಂಗಿ, ಅಸ್ಕಿ, ಮದನಮಟ್ಟಿ ಗ್ರಾಮಗಳನ್ನು ಒಳಗೊಂಡ ಪಂಚಾಯತಿಯಾಗಿದ್ದು, ಒಟ್ಟಿ ೨೨ ಕ್ಷೇತ್ರದಲ್ಲಿ ೪ ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಮೂರನೇ ವಾರ್ಡಿನಿಂದ ಸಾಗರಿಕಾ ಮಹಾದೇವ ಗಾಯಕವಾಡ ಸ್ಪರ್ಧಿಸಿದ್ದರೆ, ೪ನೇ ವಾರ್ಡಿನಿಂದ ಮಹಾದೇವ ಗಜಾನನ ಗಾಯಕವಾಡ ಸ್ಫರ್ಧಿಸಿದ್ದಾರೆ. ಈ ಎರಡು ಕ್ಷೇತ್ರಗಳು ತೀವ್ರ ಕುತೂಹಲವನ್ನುಂಟು ಮಾಡಿವೆ.

ಇದನ್ನೂ ಓದಿ:ರಾವಣನನ್ನು ಸಮರ್ಥಿಸಿಕೊಂಡು ವಿವಾದಕ್ಕೊಳಗಾದ ಸೈಫ್ ಅಲಿ ಖಾನ್

ಗ್ರಾಮ ಪಂಚಾಯತಿಗೆ ಕಲಿತವರು ಬರುವುದು ಬಹಳ ವಿರಳ. ಆದರೆ ಇರ್ವ ದಂಪತಿಗಳು ಸ್ನಾತಕೋತ್ತರ ಪದವಿಧರರು ಅದರಲ್ಲಿ ಮಹಾದೇವ ಎಂ. ಕಾಂ., ಎಂ.ಎ ಮಾಡಿದ್ದರೆ, ಸಾಗರಿಕಾ ಎಂ. ಎ ಪಧವಿಧರೆ. ತಮ್ಮ ಗ್ರಾಮಕ್ಕೆ ಏನಾದರೂ ಒಂದು ಹೊಸ ಕೊಡುಗೆ ಕೊಡಬೇಕು, ಕಲಿತಂತಹ ನಿರುದ್ಯೋಗಿ ಯುವಕರಿಗೆ ಹೆಚ್ಚು ಹೆಚ್ಚು ಗುಡಿ ಕೈಗಾರಿಕೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿ ಗ್ರಾಮದಲ್ಲಿ ಉದ್ಯೋಗ ಸೃಷ್ಠಿ ಮಾಡುವುದರ ಜೊತೆಗೆ ಸ್ವಚ್ಛಗ್ರಾಮ ಹಾಗೂ ಸುಂದರ ಗ್ರಾಮದ ಪರಿಕಲ್ಪನೆಯ ಕನಸ್ಸನ್ನು ಹೊತ್ತಿದ್ದಾರೆ. ಇವರ ಕನಸ್ಸಿಗೆ ಮತದಾರ ಯಾವ ರೀತಿ ಉತ್ತರ ಕೊಡುತ್ತಾನೆ ಎಂಬುದಕ್ಕೆ ಚುನಾವಣೆಯ ಅಂತಿಮ ದಿನದವರೆಗೆ ಕಾಯ ಬೇಕಷ್ಠೇ.

ನನ್ನ ಕನಸ್ಸಿನ ಗ್ರಾಮ ಪಂಚಾಯತಿ ಆಸೆ ಇದೆ. ನನ್ನ ಗ್ರಾಮ ಹಸಿರು ಗ್ರಾಮ ಪಂಚಾಯತಿ ಆಗಬೇಕು. ಉತ್ತಮವಾದ ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ ಪೂರ್ಣ ಪ್ರಯತ್ನ ಮಾಡುತ್ತೇವೆ. ನಾವು ಆಸ್ವಾಸನೆ ನೀಡುವುದಿಲ್ಲ ವಾಗ್ದಾಣ ಮಾಡುತ್ತೇವೆ. ವಾಗ್ದಾಣದಂತೆ ಕೆಲಸ ಮಾಡುತ್ತೇವೆ.
– ಮಹಾದೇವ ಗಾಯಕವಾಡ ಆಸಂಗಿ ಗ್ರಾ. ಪಂ. ಅಭ್ಯರ್ಥಿ

Advertisement

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next