Advertisement
ಸೋಂಕಿತರಿಗೆ ಮತದಾನಕ್ಕೆ ಅವಕಾಶ: ತಾಲೂಕಿನಲ್ಲಿ ಕೋವಿಡ್ ಸೋಂಕು ದೃಢಪಟ್ಟ 15 ಮಂದಿಗೆ ಸಂಜೆ 4ರಿಂದ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರತಿ ಸೋಂಕಿತರಿಗೂ ಪಿಪಿಇ ಕಿಟ್‌ಹಾಕಿಸಿ ಮತಗಟ್ಟೆಗೆ ಕರೆತಂದು,ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲೂ ಕೋವಿಡ್-19 ಪರೀಕ್ಷಿಸಿ, ಸ್ಯಾನಿಟೈಸರ್ ನೀಡುವ ಮೂಲಕ ಪ್ರತಿ ಮತದಾರನಿಗೂ ಮಾಸ್ಕ್ ಕಡ್ಡಾಯವಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಕಂಡು ಬಂದಿತ್ತು.
Related Articles
Advertisement
ಪಿಎಸ್‌ಐ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ :
ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಯಲ್ಲಿಮತಗಟ್ಟೆಯ ಬಳಿ ಅಭ್ಯರ್ಥಿ ಸಾಗರ ಮತ್ತು ಇತರರು ಮತದಾರರಿಗೆ ಮದ್ಯ,ಊಟವನ್ನು ಹಂಚುತ್ತಿದ್ದಾರೆ ಎಂಬ ವಿಷಯ ತಿಳಿದ ಪಿಎಸ್‌ಐ, ಸ್ಥಳಕ್ಕೆ ತೆರಳಿ ಮತಗಟ್ಟೆಯ ಸುತ್ತಮುತ್ತ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ, ಮದ್ಯ, ಊಟ ಹಂಚದಂತೆ, ಇಲ್ಲಿಂದ ತೆರಳುವಂತೆ ಗದರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿ ಸಾಗರ ಮತ್ತು ಇತರರು ಪಿಎಸ್‌ಐಅಜಯಕುಮಾರ ಅವರ ಬಟ್ಟೆ ಹಿಡಿದು ಎಳೆದಾಡಿ, ಪೊಲೀಸ್ ಜೀಪಿಗೆ ಬೆಂಕಿ ಹಚ್ಚುವುದಾಗಿ ತಿಳಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಸ್ಥಿತಿ ತಲೆದೂರಿದ್ದರಿಂದ ಸ್ಥಳದಿಂದ ಹೊರಬರಲು ಯತ್ನಿಸಿದಾಗ, ಪೊಲೀಸ್ ಜೀಪಿಗೆ ಅಡ್ಡ ಕುಳಿತು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರಿಂದ 30 ಜನರ ಮೇಲೆ ನೀತಿಸಂಹಿತೆ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಸಿಪಿಐ ಸತ್ಯನಾರಾಯಣ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.