Advertisement

ಚಾಮರಾಜನಗರ: ಅತ್ತೆ ವಿರುದ್ಧ ಗೆದ್ದ ಸೊಸೆ !

10:18 PM Dec 30, 2020 | Team Udayavani |

ಚಾಮರಾಜನಗರ: ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ಹೊಂಗನೂರು 3ನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ಅತ್ತೆ ಸೊಸೆ ಪೈಪೋಟಿಯಲ್ಲಿ ಸೊಸೆ ಜಯಗಳಿಸಿದ್ದಾರೆ.

Advertisement

ಹೊಂಗನೂರು ಬ್ಲಾಕ್ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುಟ್ಟಬಸಮ್ಮ ಸ್ಪರ್ಧಿಸಿದ್ದರು. ಕಾಂಗ್ರೆಸ್ ಬೆಂಬಲಿತರಾಗಿ ಪುಟ್ಟಬಸಮ್ಮರ ಸೊಸೆ (ಮಗನ ಪತ್ನಿ) ಚೈತ್ರಾ ಸ್ಪರ್ಧೆಗಿಳಿದಿದ್ದರು.

ಬುಧವಾರದ ಮತ ಎಣಿಕೆಯಲ್ಲಿ ಪುಟ್ಟಬಸಮ್ಮ ಅವರಿಗೆ 75 ಮತಗಳು, ಚೈತ್ರಾ ಅವರಿಗೆ 78 ಮತಗಳು ದೊರೆತವು. 3 ಮತಗಳ ಅಂತರದಿಂದ ಸೊಸೆ ಗೆಲುವು ಸಾಧಿಸಿದ್ದಾರೆ.

1 ಮತದ ಅಂತರದಿಂದ ಗೆಲುವು
ಚಾಮರಾಜನಗರ: ತಾಲೂಕಿನ ವೆಂಕಟಯ್ಯನಛತ್ರ ಗ್ರಾ. ಪಂ.ನ ಬ್ಲಾಕ್ 1ರಲ್ಲಿ ಕೇವಲ 1 ಮತದ ಅಂತರದಿಂದ ಅಭ್ಯರ್ಥಿ ಜಯಗಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಈ ಬ್ಲಾಕ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಣ್ಣ ಮಾದಮ್ಮ ಸ್ಪರ್ಧಿಸಿದ್ದರು. ಸಣ್ಣಮಾದಮ್ಮ ಅವರಿಗೆ 241 ಮತಗಳೂ, ಕೃಷ್ಣಮೂರ್ತಿ ಅವರಿಗೆ 242 ಮತಗಳು ದೊರೆತವು. ಕೇವಲ ಒಂದು ಮತದಿಂದ ಬಿಜೆಪಿ ಬೆಂಬಲಿತ ಕೃಷ್ಣಮೂರ್ತಿ ಜಯಗಳಿಸಿದರು.

ಅವಾಚ್ಯ ಶಬ್ದ ಬಳಕೆ: ಅಭ್ಯರ್ಥಿಗಳಿಂದ ಪ್ರತಿಭಟನೆ
ಚಾಮರಾಜನಗರ: ಸಬ್‌ಇನ್‌ಸ್ಪೆಕ್ಟರ್ ಒಬ್ಬರು ಅವಾಚ್ಯ ಶಬ್ದಗಳಿಂದ ಬೈದರು ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ಮತ್ತು ಏಜೆಂಟರು ಪ್ರತಿಭಟಿಸಿದ ಘಟನೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮತ ಎಣಿಕೆ ಕೇಂದ್ರದಲ್ಲಿ ನಡೆಯಿತು.

Advertisement

ಗ್ರಾಮಾಂತರ ಠಾಣೆ ಎಸ್‌ಐ ಹನುಮಂತ ಉಪ್ಪಾರ್ ಅವರು ಮತ ಎಣಿಕಾ ಕೇಂದ್ರ ಪ್ರವೇಶಿಸುತ್ತಿದ್ದ ಕೆಲವು ಅಭ್ಯರ್ಥಿಗಳು ಹಾಗೂ ಏಜೆಂಟರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಅಭ್ಯರ್ಥಿಗಳು ಮತ್ತು ಏಜೆಂಟರು ಪ್ರತಿಭಟಿಸಿದರು. ಎಸ್‌ಐ ಕ್ಷಮೆ ಯಾಚಿಸಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next