Advertisement

ಅವಳಿ ಜಿಲ್ಲೆಗಳಲ್ಲಿ ಮೊದಲ ಹಂತ ಬಿರುಸು

04:54 PM Dec 16, 2020 | Suhan S |

ಕೋಲಾರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರತಾಲೂಕುಗಳ ಗ್ರಾಪಂ ಚುನಾವಣೆಯ 85 ಪಂಚಾಯ್ತಿಗಳ 1520 ಸ್ಥಾನಗಳ ಪೈಕಿ 118 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು,ಅಧಿಕೃತ ಘೋಷಣೆ ಬಾಕಿ ಇದೆ. ಉಳಿದ 1402 ಸ್ಥಾನಗಳಿಗಾಗಿ 3555 ಮಂದಿ ಕಣದಲ್ಲಿದ್ದಾರೆ. ಜಿಲ್ಲೆಯ ಮೊದಲ ಹಂತದ ಗ್ರಾಪಂ

Advertisement

ಚುನಾವಣೆಯಲ್ಲಿ ಒಟ್ಟು 5701 ನಾಮಪತ್ರಗಳುಸಲ್ಲಿಕೆಯಾಗಿದ್ದು, ನಾಮಪತ್ರಗಳ ಪರಿಶೀಲನೆಯನಂತರ 35 ನಾಮಪತ್ರಗಳು ತಿರಸ್ಕೃತ ಗೊಂಡಿದ್ದು, 5686 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಮಪತ್ರಗಳ ವಾಪಸಾತಿಯ ನಂತರ ಅಂತಿಮ ವಾಗಿಕಣದಲ್ಲಿ 3555 ಮಂದಿಉಮೇದುವಾರರು ಉಳಿದುಕೊಂಡಿದ್ದಾರೆ. 118 ಮಂದಿ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ಕೋಲಾರ ತಾಲೂಕಿನ 32 ಪಂಚಾಯ್ತಿಗಳ 569 ಸ್ಥಾನಗಳಿಗೆ 59 ಅವಿರೋಧ ಆಯ್ಕೆಯಾಗಿದ್ದು,ಉಳಿಕೆ ಸ್ಥಾನಗಳಿಗೆ1336 ಉಮೇದುವಾರಿಕೆ ಸಲ್ಲಿಕೆಯಾಗಿವೆ. ಮಾಲೂರು ತಾಲೂಕಿನ 28 ಪಂಚಾಯ್ತಿಗಳ 505 ಸ್ಥಾನಗಳಿಗೆ 43 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, 1243 ನಾಮ ಪತ್ರಗಳುಕಣದಲ್ಲಿವೆ. ಶ್ರೀನಿವಾಸಪುರ ತಾಲೂಕಿನ 25 ಪಂಚಾಯ್ತಿಗಳ 446 ಸ್ಥಾನಗಳಿಗೆ 16 ಅವಿ ರೋಧ ಆಯ್ಕೆಯಾಗಿದ್ದು,976 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಪರಿಶಿಷ್ಟ ಜಾತಿಯಿಂದ 547 ಪುರುಷರು,562 ಮಹಿಳೆಯರು ಸೇರಿದಂತೆ ಒಟ್ಟು1109 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡದಿಂದ 99 ಪುರುಷರು, 201ಮಹಿಳೆಯರು ಸೇರಿದಂತೆ ಒಟ್ಟು 300 ಮಂದಿನಾಮಪತ್ರ ಸಲ್ಲಿಸಿದ್ದಾರೆ. ಹಿಂದುಳಿದ ಅ ವರ್ಗ ದಿಂದ74 ಪುರುಷರು,181 ಮಹಿಳೆಯರು ಸೇರಿ ದಂತೆ ಒಟ್ಟು 255ಮಂದಿನಾಮಪತ್ರ ಸಲ್ಲಿಸಿದ್ದಾರೆ. ಹಿಂ.ವರ್ಗದಿಂದ51ಪುರುಷರು,4ಮಹಿಳೆಯರು ಸೇರಿ ಒಟ್ಟು 55 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗದಿಂದ 1104 ಪುರುಷರು,732 ಮಹಿಳೆಯರು ಸೇರಿದಂತೆ ಒಟ್ಟು 1836 ಮಂದಿ ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿದ್ದಾರೆ.ಒಟ್ಟಾರೆ ಚುನಾವಣಾಕಣದಲ್ಲಿ 1875 ಪುರುಷರು ಹಾಗೂ 1680 ಮಹಿಳೆಯರು ಸೇರಿದಂತೆ ಒಟ್ಟು 3555 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಚುನಾವಣೆ ರದ್ದು ಎಚ್ಚರಿಕೆ: ಗ್ರಾಪಂ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯಲ್ಲಿ ಹರಾಜು ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕರಣಗಳು ಕಂಡು ಬಂದಿದ್ದು, ಸ್ಪರ್ಧಿಸುವ ಅಭ್ಯರ್ಥಿಗಳು ಒತ್ತಡ ಮತ್ತು ಆಮಿಷಗಳಿಗೆ ಬಲಿಯಾಗಿ ನಾಮಪತ್ರ ಹಿಂಪಡೆ ಯುತ್ತಿದ್ದಲ್ಲಿ ಅಂತ ಕ್ಷೇತ್ರಗಳಲ್ಲಿ ಅವಿರೋಧಆಯ್ಕೆಯಾದವರ ವಿರುದ್ಧ ಕಾನೂನಿನ ಕ್ರಮಜರುಗಿಸಲಾಗುವುದು. ಅಥವಾ ಅವಿರೋಧ ಆಯ್ಕೆಯನ್ನು ರದ್ದುಪಡಿಸಿ ಮರು ಚುನಾವಣೆ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಸಿದ್ದಾರೆ.

ವೀಕ್ಷಕರ ಅಗಮನ: ಕೋಲಾರ ಜಿಲ್ಲೆಯಲ್ಲಿಗ್ರಾಪಂ ಚುನಾವಣೆಗಳ ವೀಕ್ಷಕರಾಗಿ ಕೋಲಿಜಿಯೇಟ್‌ಅಂಡ್‌ಟೆಕ್ನಿಕಲ್‌ ಎಜುಕೇಷನ್‌ಡೈರೆಕ್ಟರೇಟ್‌ ಜಂಟಿ ನಿರ್ದೇಶಕ ಬಿ.ಪಿ.ವಿಜಯ್‌ಆಗಮಿಸಿದ್ದು,ಕೋಲಾರದಪ್ರವಾಸಿಮಂದಿರದಲ್ಲಿವಾಸ್ತವ್ಯ ಹೂಡಿದ್ದಾರೆ. ಇವರನ್ನು ನೀತಿ ಸಂಹಿತೆಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೂರುಗಳಿಗಾಗಿ ದೂರವಾಣಿ 8884554706 ರಲ್ಲಿ ಅಥವಾ ಖುದ್ದಾಗಿ ಭೇಟಿ ಮಾಡಲು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next