Advertisement

ಮತದಾರರ ಮನ ಗೆಲ್ಲಲು ಕೊನೆ ಪ್ರಯತ್ನ

04:23 PM Dec 21, 2020 | Suhan S |

ಸಕಲೇಶಪುರ: ತಾಲೂಕಿನ ಗ್ರಾಪಂಗಳ ಮೊದಲ ಹಂತದ ಮತದಾನಕ್ಕೆ ಕೇವಲ 1 ದಿನ ಬಾಕಿ ಇದ್ದು, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತದಾರರ ಮನ ಗೆಲ್ಲಲು ಅಂತಿಮ ಹಂತದಕಸರತ್ತು ನಡೆಸುತ್ತಿದ್ದಾರೆ.

Advertisement

ಮೇಲ್ನೋಟಕ್ಕೆಬಿಜೆಪಿ,ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳ ನಡುವೆ ಹೆಚ್ಚಿನ ಪೈಟ್‌ ಇದ್ದರೂ, ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಕೆಲವು ಪಂಚಾಯ್ತಿಗಳಲ್ಲಿ ಈ ಎರಡೂ ಪಕ್ಷಗಳ ಬೆಂಬಲಿಗರಿಗೆ ಪೈಟ್‌ ಕೊಡುವ ನಿರೀಕ್ಷೆಯಿದೆ.ಕೆಲವು ಪಂಚಾಯ್ತಿಗಳಲ್ಲಿ ಜೆಡಿಎಸ್‌ ಮಣಿಸಲು ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತರು ಒಂದಾಗಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿತರು ಒಂದಾಗಿ ಬಿಜೆಪಿ ಮಣಿಸಲು ಯತ್ನಿಸುತ್ತಿದ್ದಾರೆ.

ಜೆಡಿಎಸ್‌ ಏಕಾಂಗಿ: ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್‌.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ಬೆಂಬಲಿಗರು ಸ್ಥಳೀಯ ಚುನಾವಣೆ ಎದುರಿಸುತ್ತಿದ್ದರೆ,ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡುತಮ್ಮ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ತಲಾ10 ರಿಂದ 15,000ಸಾವಿರ ರೂ. ವರೆಗೆಚುನಾವಣಾ ಖರ್ಚಿಗೆಹಣ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಹಣ ಆನೆ ಹೊಟ್ಟೆಗೆ ಅರೆಮಜ್ಜಿಗೆಯಂತಾಗಿದೆ.

ಕೆಲವು ಕ್ಷೇತ್ರಗಳ ಅಭ್ಯರ್ಥಿಗಳು  ಚುನಾವಣೆಗಾಗಿಲಕ್ಷಾಂತರರೂ. ಖರ್ಚು ಮಾಡುತ್ತಿದ್ದಾರೆ. ಕೆಲವರು ಮದ್ಯದ ಹೊಳೆಯನ್ನೇ ಹರಿಸುತ್ತಿದ್ದಾರೆ. ಜೊತೆಗೆ ಮದ್ಯ ಮಾಂಸದ ಪಾರ್ಟಿ ನಿರಂತರವಾಗಿ ನೀಡುತ್ತಿದೆ. ಅಂತಿಮ ಕ್ಷಣದಲ್ಲಿ ಮದ್ಯದ ಜೊತೆಗೆ ಪ್ರತಿ ಮನೆಗಳಲ್ಲಿಇರುವ ಮತದಾರರ ಆಧಾರದ ಮೇಲೆ ಹಣ ಹಂಚುವಸಾಧ್ಯತೆ ಇದೆ. ಜೊತೆಗೆ ಸೀರೆ, ಪ್ರವಾಸದ ಆಫ‌ರ್‌, ಶೂನ್ಯಬಡ್ಡಿ ದರದಲ್ಲಿ ಸಾಲಹೀಗೆಹಲವು ರೀತಿಯಲ್ಲಿ ಮತದಾರರ ಓಲೈಸಲು ಯತ್ನಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ಒಂದೇಪಕ್ಷದ ಎರಡು ಮೂರು ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಇಂತಹ ಕಡೆ ಆ ಪಕ್ಷದ ಬೆಂಬಲಿ ಗರು, ಕಾರ್ಯಕರ್ತರು ಯಾರಿಗೆ ಮತ ಹಾಕುವುದು ಎಂದು ಗೊಂದಲಕ್ಕೆ ಸಿಲುಕಿದ್ದಾರೆ.

ಕೂಲಿ ಕಾರ್ಮಿಕರ ಸಮಸ್ಯೆ: ಬಹುತೇಕಕೂಲಿ ಕಾರ್ಮಿಕರು ಚುನಾವಣೆ ಅಖಾಡದಲ್ಲಿ ಬ್ಯುಸಿಯಾಗಿರುವುದರಿಂದ ಕಾಫಿ ಹಾಗೂ ಭತ್ತದ ಕೊಯ್ಲಿಗೆ ಕೆಲಸಗಾರರೇ ಸಿಗುತ್ತಿಲ್ಲ. ದುಬಾರಿ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದಪರಿಸ್ಥಿತಿ ಮಾಲಿಕರದ್ದಾಗಿದೆ. ಗ್ರಾಪಂ ಚುನಾವಣೆಯಿಂದಾಗಿ ಕೆಲವು ಗ್ರಾಮಗಳ ಜನ ಇಬ್ಭಾಗಗೊಳ್ಳುತ್ತಿದ್ದಾರೆ. ಆದರೆ, ಮಲೆನಾಡಿನ ಜನ ಶಾಂತಿ ಪ್ರಿಯರಾಗಿರುವುದರಿಂದ ಯಾವುದೇ ಹೊಡೆದಾಟದ ವರದಿಯಾಗಿಲ್ಲ.ಈಬಾರಿಯ ಗ್ರಾಪಂ ಚುನಾವಣೆಯಲ್ಲಿ ಹಲವು ಮಂದಿ ಸ್ನಾತಕೋತ್ತರ ಪದವೀಧರರು, ನಿವೃತ್ತ ಸರ್ಕಾರಿ ನೌಕರರು ಸಹ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಗೆಲುವು ಸಾಧಿಸುತ್ತಾರೆಂದುಕಾದು ನೋಡಬೇಕಾಗಿದೆ.

Advertisement

ಗ್ರಾಪಂ ಚುನಾವಣೆಯಲ್ಲಿ ಹಲವಾರು ವಿದ್ಯಾವಂತರು ಸ್ಪರ್ಧಿಸಿರುವುದುಉತ್ತಮ ಬೆಳವಣಿಗೆ, ಜನ ವಿದ್ಯಾವಂತರ ಆಯ್ಕೆಗೆ ಮುಂದಾಗಬೇಕು. ಕವನ್‌ಗೌಡ, ಎಪಿಎಂಸಿ ಅಧ್ಯಕ್ಷ

ತಾಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಯಾರಾದರು ಅಕ್ರಮವಾಗಿ ಮದ್ಯ, ಹಣಹಂಚುವವರು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುತ್ತದೆ. – ಮಂಜುನಾಥ್‌, ತಹಶೀಲ್ದಾರ್‌

ಮತದಾರರುಹಣನೀಡುವ ಅಭ್ಯರ್ಥಿಗಿಂತ ಕೆಲಸ ಮಾಡುವ ಅಭ್ಯರ್ಥಿಗೆ ಮತದಾನ ಮಾಡಲು ಮುಂದಾಗಬೇಕು. ಹಣಕ್ಕೆ ಮತವನ್ನು ಮಾರಿಕೊಂಡರೆ ಗ್ರಾಮಗಳ ಅಭಿವೃದ್ಧಿ ಮರಿಚೀಕೆ ಆಗುತ್ತದೆ. ಹಿತೈಷಿ ಬನವಾಸೆ, ಸಮಾಜ ಸೇವಕ.

ಚುನಾವಣಾ ಕಾರ್ಯಕ್ಕೆ 900 ನೌಕರರು ;  ತಾಲೂಕು ಆಡಳಿತದಿಂದ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 119 ಮತಗಟ್ಟೆ ಗಳನ್ನು ಚುನಾವಣೆಗಾಗಿ ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ 900ಕ್ಕೂ ಹೆಚ್ಚು ವಿವಿಧ ಇಲಾಖೆಗಳನೌಕರರು ಚುನಾವಣೆ ಸುಗಮವಾಗಿ ನಡೆಸಲು ಕಾರ್ಯೋ ನ್ಮುಖರಾಗಿದ್ದಾರೆ. ಪಟ್ಟಣದ ಸಂತ ಜೋಸೆಫ‌ರ ಶಾಲೆಯಲ್ಲಿ ಮತ ಏಣಿಕೆಗೆ ಸಿದ್ಧತೆ ನಡೆದಿದೆ.

 

ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next