Advertisement

ಗ್ರಾಪಂ ಚುನಾವಣೆ: 2ನೇ ಹಂತದ ವೇಳಾಪಟ್ಟಿ ಪ್ರಕಟ

07:47 PM Dec 12, 2020 | Suhan S |

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಅವಧಿ  ಮುಗಿದ ಗ್ರಾಪಂಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲು ಜಿಲ್ಲಾಧಿಕಾರಿಪಿ.ಸುನೀಲಕುಮಾರ ದಿನಾಂಕ ನಿಗದಿ ಪಡಿಸಿ ಡಿ. 11ರಂದು ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಜಿಲ್ಲೆಯ ಇಂಡಿ, ಚಡಚಣ, ಸಿಂದಗಿ, ಮತ್ತು ದೇವರಹಿಪ್ಪರಗಿ ತಾಲೂಕ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧಿಕಾರದ ಅವಧಿ ಮುಕ್ತಾಯವಾಗಿದ್ದು, ಗ್ರಾಪಂಗೆ ತೆರವಾದಸ್ಥಾನಗಳನ್ನು ತುಂಬಲು ಕರ್ನಾಟಕ ಪಂಚಾಯತ್‌ ರಾಜ್‌ ಚುನಾವಣೆ ನಿಯಮಗಳಂತೆ ಅಧಿ  ಸೂಚನೆ ಹೊರಡಿಸಿದ್ದಾರೆ.

ನಾಮಪತ್ರಗಳನ್ನು ಸಲ್ಲಿಸಲು ಡಿ. 16 ಕೊನೆ ದಿನ. ಡಿ. 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ನಾಮಪತ್ರ ಹಿಂಪಡೆಯಲು ಡಿ. 19 ಕೊನೆ ದಿನ. ಅಗತ್ಯ ಕಂಡು ಬಂದಲ್ಲಿಡಿ. 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯ ಕಂಡು ಬಂದಲ್ಲಿಡಿ. 29ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮರು ಮತದಾನ ನಡೆಯಲಿದೆ.

ಡಿ. 30ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಅದರಂತೆ ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯ ಮಾಡಬೇಕೋ ಆ ದಿನಾಂಕ ಮತ್ತು ದಿನ 31-12-2020 ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯುವ ಗ್ರಾಮಪಂಚಾಯತ್‌ಗಳ ವಿವರ ಈ ಕೆಳಗಿನಂತಿದೆ

ಇಂಡಿ ತಾಲೂಕು ಗ್ರಾಪಂ: ರೂಗಿ, ಸಾಲೋಟಗಿ, ತಾಂಬಾ, ಮಸಳಿ ಬಿ.ಕೆ, ಶಿರಶ್ಯಾಡ, ನಾದ ಕೆ.ಡಿ, ಮಿರಗಿ, ಖೇಡಗಿ, ಲಾಳಸಂಗಿ, ಹಿರೇಬೇವನೂರ,ಅಗರಖೇಡ, ಪಡನೂರ, ಲಚ್ಯಾಣ, ಆಳೂರ, ತೆನ್ನಿಹಳ್ಳಿ, ಭತಗುಣಕಿ, ಝಳಕಿ, ಅಂಜುಟಗಿ, ಅಹಿರಸಂಗ, ಚಿಕ್ಕಬೇವನೂರ, ಹಂಜಗಿ, ಬಳ್ಳೊಳ್ಳಿ, ಹೊರ್ತಿ, ಕೊಳೂರಗಿ, ಬಸನಾಳ, ಹಡಲಸಂಗ, ಬಬಲಾದ, ನಿಂಬಾಳ ಕೆ.ಡಿ, ತಡವಲಗಾ, ಅಥರ್ಗಾ, ಬೆನಕನಹಳ್ಳಿ, ಚೌಡಿಹಾಳ, ಹಿಂಗಣಿ, ಸಂಗೋಗಿ,ಗುಬ್ಬೇವಾಡ, ಅರ್ಜುಣಗಿ ಬಿ.ಕೆ, ಇಂಗಳಗಿ, ಕಪನಿಂಬರಗಿ ಗ್ರಾ.ಪಂ. ಸೇರಿವೆ.

Advertisement

ಚಡಚಣ ತಾಲೂಕು ಗ್ರಾಪಂ: ನಿವರಗಿ, ರೇವತಗಾಂವ, ಹತ್ತಳ್ಳಿ, ಕೆರೂರ, ಧೂಳಖೇಡ, ಹಲಸಂಗಿ, ಲೋಣಿ ಬಿ.ಕೆ, ಬರಡೋಲ, ದೇವರನಿಂಬರಗಿ, ಜಿಗಜಿವಣಗಿ, ಇಂಚಗೇರಿ, ನಂದರಗಿ, ಉಮರಜ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

ಸಿಂದಗಿ ತಾಲೂಕು ಗ್ರಾಪಂ: ರಾಂಪುರ ಪಿ.ಎ, ಚಟ್ಟರಕಿ, ಕೊಕಟನೂರ, ಬ್ಯಾಕೋಡ,ಯಂಕಂಚಿ, ಸುಂಗಠಾಣ, ಗೋಲಗೇರಿ, ಗುಬ್ಬೇವಾಡ, ಹಂದಿಗನೂರ, ಹೊನ್ನಳ್ಳಿ, ಕಡಣಿ, ದೇವಣಗಾಂವ, ಬಮ್ಮನಹಳ್ಳಿ, ದೇವರನಾವದಗಿ, ಬಗಲೂರ, ಮೋರಟಗಿ, ಮಲಘಾಣ,ಕೋರಳ್ಳಿ, ಗಬಸಾವಳಗಿ, ಹಿಕ್ಕನಗುತ್ತಿ, ನಾಗಾವಿ ಬಿ.ಕೆ, ರಾಮನಹಳ್ಳಿ, ಕಕ್ಕಳಮೇಲಿ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.

ದೇವರಹಿಪ್ಪರಗಿ ತಾಲೂಕು ಗ್ರಾಪಂ: ಹಿಟ್ಟಿನಹಳ್ಳಿ,ಚಿಕ್ಕರೂಗಿ, ಮುಳಸಾವಳಗಿ, ಕೊರವಾರ,ಜಾಲವಾದ, ಕೆರೂಟಗಿ, ಕೊಂಡಗೂಳಿ, ಯಾಳವಾರ, ಮಾರ್ಕಬ್ಬನಹಳ್ಳಿ, ಸಾತಿಹಾಳ,ಹುಣಶ್ಯಾಳ, ಹರನಾಳ, ಮಣೂರ, ಯಲಗೋಡ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next